

TV Actress Case: ಪ್ರೀತಿ ಹೆಸರಿನಲ್ಲಿ ಕಿರುತೆರೆ ನಟಿ ಅಪ್ಸರಾ ಜತೆಗೆ ದೈಹಿಕ ಸಂಪರ್ಕ ಹೊಂದಿದ್ದಲ್ಲದೇ ಆಕೆಯನ್ನು ಮದುವೆ ಮಾಡಿಕೊಳ್ಳದೆ ಬಲವಂತವಾಗಿ ಗರ್ಭಪಾತ ಮಾಡಿಸಿದ್ದ ಆರೋಪಿ ಪೂಜಾರಿ ಸಾಯಿ ಕೃಷ್ಣ, ಎಲ್ಲಿ ತಾನು ಆಕೆಯನ್ನು ವಿವಾಹವಾಗದೆ ಹೋದರೆ ತನ್ನ ಅಸಲಿ ಮುಖವನ್ನು ಎಲ್ಲರೆದುರೂ ಕಳಚಿಡುತ್ತಾಳೆ ಎಂಬ ಭಯದಲ್ಲಿ ಅಪ್ಸರಾಳನ್ನು ಎರಡು ವರ್ಷಗಳ ಹಿಂದೆಯೇ ಕೊಲೆಗೈದು, ಮೃತದೇಹವನ್ನು ಒಳಚರಂಡಿಯಲ್ಲಿ ಮುಚ್ಚಿಟ್ಟಿದ್ದ. ಈ ಕೊಲೆ ಕೇಸ್ ಪ್ರಕರಣದಲ್ಲಿ ನಿನ್ನೆಯಷ್ಟೇ ಕೋರ್ಟ್ ತೀರ್ಪು ನೀಡಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ನಟಿ ಅಪ್ಸರಾಳನ್ನು ದೇವಸ್ಥಾನದಲ್ಲಿ ಪರಿಚಯ ಮಾಡಿಕೊಂಡ ಸಾಯಿ ಕೃಷ್ಣ, ವಾಟ್ಸಾಪ್ನಲ್ಲಿ ಆಕೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ನಂತರದಲ್ಲಿ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಬೆಳೆಯಿತು. ಇದೇ ನಟಿಯ ಬಾಳಿಗೆ ಉರುಳಾಯಿತು. ಆರಂಭದಲ್ಲಿ ತಾನು ನೈಜವಾಗಿ ಪ್ರೀತಿಸುತ್ತಿರುವುದಾಗಿ ನಟಿಯೊಂದಿಗೆ ನಟಿಸಿದ ಸಾಯಿ, ನಂತರದಲ್ಲಿ ಅಪ್ಸರಾ ಮದುವೆ ಮಾಡಿಕೊಳ್ಳೋಣ ಎಂದು ಹೇಳುತ್ತಿದ್ದಂತೆ ತನ್ನ ಮಾತಿಗೆ ವಿರುದ್ಧವಾಗಿ ಸಾಗಲು ಪ್ರಾರಂಭಿಸಿದ್ದ. ಬಲವಂತವಾಗಿ ಗರ್ಭಪಾತ ಮಾಡಿಸಿದ್ದಲ್ಲದೇ, ಮದುವೆ ಮಾಡಿಕೊಳ್ಳದೆ ಹೋದರೆ ನಿನ್ನ ಕರಾಳ ಮುಖವನ್ನು ಎಲ್ಲರೆದುರೂ ಕಳಚಿಡುತ್ತೇನೆ ಎಂದು ಅಪ್ಸರಾ ಎಚ್ಚರಿಕೆ ನೀಡಿದ್ದಳು.
ಅಪ್ಸರಾ ಜತೆಗೆ ದೈಹಿಕ ಸಂಪರ್ಕ ಬೆಳೆಸಿ, ತನ್ನ ಕಾಮ ಚಟವನ್ನು ತೀರಿಸಿಕೊಂಡ ಸಾಯಿ ಕೃಷ್ಣ, ಮದುವೆ ವಿಷಯದಿಂದ ಅಕ್ಷರಶಃ ಕಂಗಾಲಾಗಿದ್ದ. ಮದುವೆ ಮಾತಿಗೆ ಒಪ್ಪದ ಸಾಯಿಯ ಮುಖವನ್ನು ಎಲ್ಲರ ಮುಂದೆ ಬಹಿರಂಗಪಡಿಸುತ್ತೇನೆ ಎಂಬ ಅಪ್ಸರಾ ಮಾತಿಗೆ ಹೆದರಿದ ಆರೋಪಿ ಸಾಯಿ, ಆಕೆಯನ್ನು ಹತ್ಯೆಗೈಯುವುದೇ ಕೊನೆಯ ಆಯ್ಕೆ ಎಂದು ನಿರ್ಧರಿಸಿ, ಕಾರಿನ ಸೀಟ್ ಕವರ್ನಿಂದ ಅಪ್ಸರಾಳನ್ನು ಉಸಿರುಗಟ್ಟಿಸಿ, ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದ.
ಕಾರಿಗೆ ಮುಚ್ಚುವ ಕವರ್ನಲ್ಲಿ ಅಪ್ಸರಾ ಮೃತದೇಹವನ್ನು ಸುತ್ತಿಟ್ಟಿದ್ದ ಸಾಯಿ, ದೇಹವನ್ನು ಕಾರಿನ ಡಿಕ್ಕಿಯಲ್ಲೇ ಎರಡು ದಿನಗಳ ಕಾಲ ಅಡಗಿಸಿಟ್ಟಿದ್ದ. ಇದಕ್ಕೆ ಕಾರಣ, ಆಕೆಯ ಮೃತದೇಹವನ್ನು ಯಾರಿಗೂ ಕಾಣದಂತೆ ಬಚ್ಚಿಡುವ ಉದ್ದೇಶದಿಂದ. ನಂತರ ಮನೆಯ ಸಮೀಪದಲ್ಲಿದ್ದ 20 ಅಡಿ ಒಳಚರಂಡಿಗೆ ಅಪ್ಸರಾಳ ಮೃತದೇಹ ಎಸೆದ ಆರೋಪಿ ಸಾಯಿ, ದೇಹ ಕೊಳೆತು ಕೆಟ್ಟ ವಾಸನೆ ಬರುತ್ತಿದ್ದಂತೆ ಎಲ್.ಬಿ. ನಗರದಿಂದ ಕಾರ್ಮಿಕರನ್ನು ಕರೆಸಿ, ಎರಡು ಲೋಡ್ ಮಣ್ಣನ್ನು ತರಿಸಿ, ಗುಂಡಿಯನ್ನು ಸಿಮೆಂಟ್‌ನಿಂದ ಮುಚ್ಚಿಸಿದ್ದ. ಕಡೆಗೆ ಪೊಲೀಸರ ತನಿಖೆಯಲ್ಲಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ.
ತನಗೆ ಮದುವೆಯಾಗಿದ್ದರೂ, ಅಪ್ಸರಾಳ ಜತೆಗೆ ಸಂಬಂಧ ಹೊಂದಿದ್ದ ಸಾಯಿ ಕೃಷ್ಣ, ವೃತ್ತಿಯಲ್ಲಿ ಅರ್ಚಕ. ಇಷ್ಟಾದರೂ ಸಹ ಮದುವೆಯಾಗಿ, ವಿಚ್ಛೇದನ ಪಡೆದುಕೊಂಡಿದ್ದ ಕಿರುತೆರೆ ಕಲಾವಿದೆ ಅಪ್ಸರಾ ಜತೆಗೆ ಆರಂಭದಲ್ಲಿ ಪ್ರೀತಿ ಸಂಬಂಧ ಹೊಂದಿದ್ದ ಕೃಷ್ಣ, ಆಕೆಯೊಂದಿಗಿನ ದೈಹಿಕ ಸುಖಕ್ಕಾಗಿ, ನಟಿಯನ್ನು ನಿಜವಾಗಿ ಪ್ರೀತಿಸುತ್ತಿರುವಂತೆ ನಟಿಸಿ, ಮದುವೆಯಾಗುವುದಾಗಿಯೂ ನಂಬಿಸಿದ್ದ. ನಾಲ್ಕು ವರ್ಷಗಳ ಕಾಲ ಈ ಸಂಬಂಧವನ್ನು ಮುಂದುವರಿಸಿಕೊಂಡು ಬಂದಿದ್ದ ಅಪ್ಸರಾ, ತನ್ನನ್ನು ಮದುವೆಯಾಗುವಂತೆ ಸಾಯಿಗೆ ಒತ್ತಡ ಹೇರಿದ್ದಳು. ಇದೇ ಆಕೆಯ ದುರಂತ ಅಂತ್ಯಕ್ಕೆ ಕಾರಣವಾಯಿತು.
ತನ್ನ ಜತೆ ದೈಹಿಕ ಸಂಪರ್ಕ ಹೊಂದಿದ್ದೀಯಾ. ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದೀಯಾ! ಇದು ಸರಿಯಲ್ಲ. ನೀನೇನಾದರೂ ನನ್ನನ್ನು ವಿವಾಹವಾಗಲು ಮುಂದಾಗಲಿಲ್ಲ ಎಂದರೆ, ಖಂಡಿತ ನಿನ್ನ ಅಸಲಿ ಮುಖವನ್ನು ಎಲ್ಲರ ಮುಂದೆ ಕಳಚಿಡುತ್ತೇನೆ ಎಂದು ಅಪ್ಸರಾ ಎಚ್ಚರಿಕೆ ನೀಡಿದ್ದಳು. ಇದನ್ನು ಸಹಿಸಲಾಗದ ಸಾಯಿ, ಒಂದೇ ಒಂದು ರಾತ್ರಿಯಲ್ಲಿ ಅಪ್ಸರಾಳ ಉಸಿರನ್ನೇ ನಿಲ್ಲಿಸಿದೆ.
2023ರಲ್ಲಿ ದಾಖಲಾದ ಪ್ರಕರಣದ ಕೇಸ್ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಸಾಯಿ ಕೃಷ್ಣನಿಗೆ ಇದೀಗ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ 10 ಲಕ್ಷ ರೂ. ದಂಡ ಕೂಡ ವಿಧಿಸಿದ್ದು, ಸಂತ್ರಸ್ತೆಯ ಕುಟುಂಬಕ್ಕೆ 9.75 ಲಕ್ಷ ಮತ್ತು ನ್ಯಾಯಾಲಯಕ್ಕೆ 25,000 ಪಾವತಿಸಲು ನಿರ್ದೇಶಿಸಿದೆ,(ಏಜೆನ್ಸೀಸ್).