ಟುಪೊಲೆವ್‌ ಶೀಘ್ರ ಪ್ರವಾಸಿಗರ ವೀಕ್ಷಣೆಗೆ ಲಭ್ಯ-ಜಿಲ್ಲಾಧಿಕಾರಿ ಗಂಗೂಬಾಯಿ

tuplev-museum
Published on

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲ ತೀರದ ಚಪಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಪಕ್ಕದಲ್ಲಿ ಪ್ರತಿಷ್ಠಾಪಿತವಾಗಿರುವ ಟುಪೊಲೆವ್ ಯುದ್ಧ ವಿಮಾನವನ್ನು ಪ್ರವಾಸಿಗರ ವೀಕ್ಷಣೆಗೆ ಶೀಘ್ರದಲ್ಲೇ ಮುಕ್ತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅವರು ವೀಕ್ಷಣೆ ಮಾಡಿದ ನಂತರ, ಮಾಧ್ಯಮ ಪ್ರತಿನಿಽಗಳ ಜತೆ ಮಾತನಾಡಿದರು. ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಿ, ಲೈಟ್, ಶೌಚಗೃಹ ಮುಂತಾದ ಸೌಕರ್ಯಗಳನ್ನು ಸುಸ್ಥಿತಿ ಮಾಡಿಕೊಡಲು ಸಂಬAಧಪಟ್ಟವರಿಗೆ ಸೂಚಿಸಲಾಗಿದೆ ಎಂದರು.
ಟುಪೊಲೆವ್ ಯುದ್ಧ ವಿಮಾನ ಜೋಡಣೆಯ ಕಾಮಗಾರಿ ಮುಗಿದಿದ್ದರೂ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡದ ಬಗ್ಗೆ ವ್ಯಾಪಕ ಆಕ್ಷೇಪಗಳು ಕೇಳಿ ಬರುತ್ತಿವೆ. ಪ್ರವಾಸಿಗರು ಯುದ್ಧ ವಿಮಾನ ವೀಕ್ಷಣೆಗೆ ಕಾತತರಾಗಿದ್ದು, ವೀಕ್ಷಣೆಗೆ ತೆರೆದುಕೊಂಡ ನಂತರ ತಮಗೆ ಕರೆ ಮಾಡಿ ತಿಳಿಸುವಂತೆ ಹೆಸರು ಬರೆಸಿಟ್ಟು ಹೋಗುತ್ತಿದ್ದಾರೆ.
ನಾಲ್ಕು ತಿಂಗಳು:
2017 ರಲ್ಲಿ ಭಾರತೀಯ ನೌಕಾಸೇನೆಯಿಂದ ನಿವೃತ್ತವಾದ ಟುಪೊಲೆವ್ -142 ಯುದ್ಧ ವಿಮಾನವನ್ನು ಸಾರ್ವಜನಿಕರ ವೀಕ್ಷಣೆಗಾಗಿ ವಸ್ತು ಸಂಗ್ರಹಾಲಯವಾಗಿ ರೂಪಿಸಲು ಭಾರತೀಯ ನೌಕಾಸೇನೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ. ಮಾತ್ರವಲ್ಲ ತಮಿಳುನಾಡಿನಲ್ಲಿದ್ದ ಯುದ್ಧ ವಿಮಾನವನ್ನು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಬಿಚ್ಚಿ, ಕಾರವಾರಕ್ಕೆ ತಂದು ಇಲ್ಲಿ ಜೋಡಿಸುವ ಕಾರ್ಯವನ್ನೂ ನೌಕಾಸೇನೆ ಮಾಡಿಕೊಟ್ಟಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಯುದ್ಧ ವಿಮಾನದ ಬಿಡಿ ಭಾಗಗಳು ಕಾರವಾರಕ್ಕೆ ಬಂದಿದ್ದು, ನವೆಂಬರ್ ಅಂತ್ಯಕ್ಕೇ ಪ್ರಮುಖ ಕಾಮಗಾರಿಗಳು ಮುಗಿದಿವೆ. ಎಸಿ ಅಳವಡಿಕೆ ಮಾತ್ರ ಉಳಿದಿದೆ. ಆದರೆ, ಬಿಲ್ ಪಾವತಿ ಬಾಕಿ ಇರುವುದರಿಂದ ಗುತ್ತಿಗೆದಾರ ಇದುವರೆಗೂ ಯುದ್ಧ ವಿಮಾನವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿಲ್ಲ ಎನ್ನಲಾಗಿದೆ. ಇನ್ನು ಯುದ್ಧ ವಿಮಾನ ನಿರ್ವಹಣೆಗೆ ಮಾಸಿಕ ಸುಮಾರು 2 ಲಕ್ಷ ಬೇಕಾಗಬಹುದು ಎಂದು ಭಾರತೀಯ ನೌಕಾಸೇನೆ ಅಂದಾಜಿಸಿದೆ. ಆ, ಅನುದಾನ ಹೊಂದಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net