ತುನಿಷಾ ಶರ್ಮಾ ಬಾಯ್​ಫ್ರೆಂಡ್​ ಅರೆಸ್ಟ್​..!

tunisha
Published on

ಮುಂಬೈ: ದೇಶದಲ್ಲಿ ಇತ್ತೀಚೆಗೆ ಅಪಘಾತ, ಹೃದಯಾಘಾತ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಈ ಮೂರು ಕಾರಣಗಳಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ದಿನವೂ ಭಾರಿ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಇದೀಗ ನಟಿಯೊಬ್ಬಳು ತನ್ನ ಶೂಟಿಂಗ್ ಸೆಟ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಾಲಿವ್ ಎಂಬಲ್ಲಿನ ಶೂಟಿಂಗ್​ ಸೆಟ್​​ನಲ್ಲಿ ಈ ಪ್ರಕರಣ ನಡೆದಿದೆ. ಕಿರುತೆರೆ ನಟಿ ತುನಿಷಾ ಶರ್ಮಾ (20) ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆ ತಾನು ನಟಿಸುತ್ತಿದ್ದ ಕಿರುತೆರೆಯ ಶೂಟಿಂಗ್ ಸೆಟ್​​ನಲ್ಲೇ ನೇಣು ಹಾಕಿಕೊಂಡಿದ್ದಳು.

ಘಟನೆಯಿಂದ ಸೆಟ್​ನಲ್ಲಿದ್ದವರು ತೀವ್ರ ಆಘಾತಕ್ಕೆ ಒಳಗಾಗಿದ್ದು, ನಟಿಯ ಶವವನ್ನು ನೋಡಿ ಬೆಚ್ಚಿಬಿದ್ದಿದ್ದರು. ಇದೀಗ ಆಕೆಯ ಬಾಯ್​ಫ್ರೆಂಡ್​ ಹೇಳಲಾಗುತ್ತಿರುವ ಶೀಜನ್​ ಖಾನ್​ (20) ಎನ್ನುವಾತನನ್ನು ಅರೆಸ್ಟ್​ ಮಾಡಲಾಗಿದೆ. ಈತ ತುನಿಷಾ ಜೊತೆಗೆ 'ಅಲಿಬಾಬಾ ದಾಸ್ತಾನ್​ ಎ ಕಾಬುಲ್​' ಎನ್ನುವ ಧಾರಾವಾಹಿಯಲ್ಲಿ ಜೊತೆಗೆ ನಟಿಸಿದ್ದರು ಎನ್ನಲಾಗಿದೆ.

'ನಟಿಯ ತಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಜನ್​ ಖಾನ್ ವಿರುದ್ಧ ದೂರು ದಾಖಲಿಸಿದ್ದು ತನಿಖೆ ನಡೆಸುತ್ತಿದ್ದೇವೆ' ಎಂದು ಎಸಿಪಿ ಚಂದ್ರಕಾಂತ್​​ ಜಾಧವ್​ ಮಾಹಿತಿ ನೀಡಿದ್ದಾರೆ. ಅದಲ್ಲದೇ ಈ ಪ್ರಕರಣದಲ್ಲಿ ತುನಿಷಾ ಯಾವುದೇ ರೀತಿಯ ಡೆತ್​ ನೋಟ್​​ ಬರೆದಿಲ್ಲ. ಹೀಗಾಗಿ ಕೊಲೆ ಆ್ಯಂಗಲ್​ನಲ್ಲೇ ತನಿಖೆಯನ್ನು ಮಾಡಲಾಗುವುದು ಎಂದು ಎಸಿಪಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net