ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ಪಿತೃ ವಿಯೋಗ

S R Srinivas
Published on

ಗುಬ್ಬಿ: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ತಂದೆ ರಾಮೇಗೌಡ (85) ಗುರುವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಶ್ರೀ ಮಣ್ಣಮ್ಮದೇವಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಹಾಗೂ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ 23 ವರ್ಷಗಳ ಕಾಲ ದೀರ್ಘವಾಗಿ ತಾಲೂಕು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ರಾಜಕೀಯ ಹಿರಿಯ ಮುತ್ಸದ್ದಿ ಎನಿಸಿ ಸಾವಿರಾರು ಮಂದಿಗೆ ರಾಜಕೀಯ ಗುರುವಾಗಿ ಕಾಣಿಸಿಕೊಂಡಿದ್ದರು.

ಕಾಂಗ್ರೆಸ್ ಮೂಲಕ ರಾಜಕೀಯ ನೆಲೆ ಕಂಡ ರಾಮೇಗೌಡರು ಸಹಕಾರ ರಂಗದಲ್ಲೂ ಸೈ ಎನಿಸಿಕೊಂಡಿದ್ದರು. ಗುಬ್ಬಿ ವಿಎಸ್ಎಸ್ಎನ್ ಅಧ್ಯಕ್ಷರಾಗಿ, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರ ಸಂಘಗಳ ಮೂಲಕ ಅನೇಕ ಸಹಕಾರಿ ಕೆಲಸ ಸಹ ಮಾಡಿದ್ದರು.

ಮೃತರಿಗೆ ಪುತ್ರರಾದ ಶಾಸಕ ಎಸ್.ಆರ್.ಶ್ರೀನಿವಾಸ್, ಉದ್ಯಮಿ ಎಸ್.ಆರ್.ಜಗದೀಶ್, ಪುತ್ರಿ ಸುನಂದಾ ಇದ್ದಾರೆ. ಶುಕ್ರವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ಸ್ವಗ್ರಾಮ ಸರ್ವೇಗಾರನ ಪಾಳ್ಯದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net