ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ದರ್ಪ ಮೆರೆದ ತುಮಕೂರು ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಉಪಾಧ್ಯಕ್ಷೆ

Tumkur
Published on

ತುಮಕೂರು: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವಳ ಮೇಲೆ ಕಾಂಗ್ರೆಸ್​ ಲೇಡಿ ಲೀಡರ್​ ದರ್ಪ ಮೆರೆದಿರುವ ಘಟನೆ ತುಮಕೂರಿನ ಶ್ರೀರಾಮನಗರದಲ್ಲಿ ನಡೆದಿದೆ.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಉಪಾಧ್ಯಕ್ಷೆ ಸಾಹೇರಾ ಬಾನು ಮಚ್ಚಿನಿಂದ ಹಲ್ಲೆ ನಡೆಸಿದ್ದಾಳೆ. ಶ್ರೀರಾಮನಗರದ ನಿವಾಸಿ ನಾಜೀಮಾ ಮೇಲೆ ಸಾಹೇರಾ ಮಚ್ಚಿನಿಂದ ಹಲ್ಲೆ ನಡೆಸಿದ್ದಾಳೆ. ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಸಾಹೇರಾ ಹಾಗೂ ನಾಜೀಮಾ ಕುಟುಂಬದ ನಡುವೆ ಗಲಾಟೆ ನಡೆದಿತ್ತು.

ಗಲಾಟೆಯಲ್ಲಿ ತನ್ನ ಪತಿ ಮುಜಿಬ್ ಜೊತೆ ಸೇರಿಕೊಂಡು ನಾಜೀಮಾ ಮೇಲೆ ಸಾಹೇರಾ ಹಲ್ಲೆ ಮಾಡಿದ್ದಾಳೆ. ಕೂಗಿಕೊಂಡರೂ ಬಿಡದೇ ಜುಟ್ಟು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದು, ನಾಜೀಮಾಳ ತಲೆಗೆ ಗಂಭೀರ ಗಾಯವಾಗಿದೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net