ಗೃಹ ರಕ್ಷಕ ದಳದ ಕಚೇರಿ ಮುಂದೆ ಮಾಜಿ ಉದ್ಯೋಗಿ ಆತ್ಮಹತ್ಯೆ ಪ್ರಹಸನ

police_offi
Published on

ತುಮಕೂರು: ಸೇವೆಯಿಂದ ವಜಾಗೊಂಡಿರುವ ಮಾಜಿ ಗೃಹರಕ್ಷಕ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿ ನಗರದ ಗೃಹರಕ್ಷಕ ಠಾಣೆ ಮುಂಭಾಗದ ಮರವೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಹಸನ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.

ಗೃಹರಕ್ಷಕ ನಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಊರ್ಡಿಗೆರೆತ ಜಯಣ್ಣ ಕಳೆದ 6 ತಿಂಗಳ ಹಿಂದೆಯೇ ಅಶಿಸ್ತು, ದುರ್ನಡತೆ ಆರೋಪದಡಿ ಕೆಲಸದಿಂದ ವಜಾಗೊಂಡಿದ್ದು ಜಿಲ್ಲಾ ಸಮಾದೇಷ್ಟರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಸೋಮವಾರ ಜಿಲ್ಲಾ ಸಮಾದೇಷ್ಟ ಪಾತಣ್ಣ ಹೊಸಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸುದ್ದಿ ತಿಳಿದು ಗೃಹರಕ್ಷಕ ಕಚೇರಿಗೆ ಬಂದ ಜಯಣ್ಣ ಮಂಗಳವಾರ ಬೆಳ್ಳಂ ಕಚೇರಿ ಆವರಣದಲ್ಲಿರುವ ಆಲದಮರವನ್ನೇರಿ ಆತ್ಮಹತ್ಯೆಯ ಪ್ರಹಸನ ನಡೆಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಕೆಳಕ್ಕಿಳಿಸಿ, ಅಪಾಯದಿಂದ ಪಾರುಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net