

ತುಮಕೂರು: ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯಲ್ಲಿ ತ್ರೆೃಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಜುಲೈ 20ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಿಟ್ಟೂರು, ಗುಬ್ಬಿ, ಬಿದರೆ, ದೊಡ್ಡಗುಣಿ, ಕಡಬ, ಕಲ್ಲೂರು, ಕೆ.ಜಿ.ಟೆಂಪಲ್, ಉಂಗ್ರಾ, ಸೋಮಲಾಪುರ, ಸೌತ್-ವೆಸ್ಟ್ರನ್ ರೈಲ್ವೆ ಲೈನ್ಸ್(ಟ್ರಾಕ್ಷನ್) ಉಪಸ್ಥಾವರಗಳಿಂದ ಹೊರಹೊಮ್ಮುವ ಎಲ್ಲಾ 11 ಕೆ.ವಿ. ಪೂರಕಗಳಿಗೆ ಒಳಪಡುವ ಗ್ರಾಮ/ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.