ಮಾಧವ ಶಿಶು ಮಂದಿರದಲ್ಲಿ ತುಳಸೀ ಪೂಜೆ

New Project (5)
Published on

ಉಪ್ಪಿನಂಗಡಿ: ವೇದಶಂಕರ ನಗರದಲ್ಲಿರುವ ಶ್ರೀ ಮಾಧವ ಶಿಶು ಮಂದಿರದಲ್ಲಿ ಬುಧವಾರ ತುಳಸೀ ಪೂಜೆ ನಡೆಯಿತು. ಶಿಶು ಮಂದಿರದ ಪುಟಾಣಿಗಳಿಂದ, ಪಾಲಕರಿಂದ ಭಜ ನಡೆದು ತುಳಸೀ ಪೂಜೆಯನ್ನು ವಾತೆಯರು ನೆರವೇರಿಸಿದರು.

ಶಿಶು ಮಂದಿರದ ಆಡಳಿತ ಮಂಡಳಿಯ ಕಂಗ್ವೆ ವಿಶ್ವನಾಥ ಶೆಟ್ಟಿ, ಪೋಷಕ ಸಂದ ಅಧ್ಯಕ್ಷೆ ಶ್ರೀದೇವಿ ಗೌತಮ್, ಉಪಾಧ್ಯಕ್ಷೆ ಭವ್ಯಾ ಕುವಾರಿ, ಕಾರ್ಯದರ್ಶಿ ಲಲಿತಾ, ಪ್ರಮುಖರಾದ ಸುರೇಶ್ ಬಿಳಿಯೂರು, ಚೇತನಾ, ದಿವ್ಯಾ ಅಕ್ಷತಾ, ಶುಭಾ, ಮಧುರಾಜ್ ಮೊದಲಾದವರು ಭಾಗವಹಿಸಿದ್ದರು. ಶಿಶು ಮಂದಿರದ ವಾತಾಜಿಗಳಾದ ಚೈತ್ರಾ, ಕಾಂತಿಮಣಿ, ಚಂದ್ರಾವತಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net