

ಬೆಂಗಳೂರು: ರಾತ್ರೋರಾತ್ರಿ ಚಿನ್ನ ಕದಿಯಲು ಫೀಲ್ಡಿಗಿಳಿದಿದ್ದ ದರೋಡೆಕೋರರ ಪ್ಲ್ಯಾನ್ ಲಾಸ್ಟ್ ಮಿನಿಟ್ನಲ್ಲಿ ಕೈಕೊಟ್ಟಿದೆ.
ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಸಮೀಪ ದೊಡ್ಡಗೊಲ್ಲರಹಟ್ಟಿ ಬಳಿಯಿರುವ ಮಣಪುರಂ ಗೋಲ್ಡ್ ಲೋನ್ ಮಳಿಗೆಯಲ್ಲಿ ಚಿನ್ನ ದರೋಡೆ ಮಾಡಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು. ಅದರಂತೆ ಕಳೆದ ಭಾನುವಾರ (ಆ2) ರಾತ್ರಿ ಮಣಪುರಂ ಶಾಪ್ಗೆ ಕನ್ನ ಹಾಕಲು ಡ್ರಿಲ್ಲಿಂಗ್ ಮಿಷನ್ ಸಮೇತ ಎಂಟ್ರಿ ಕೊಟ್ಟಿದ್ದರು. ಎರಡನೇ ಮಹಡಿಯಲ್ಲಿರುವ ಮಣಪುರಂ ಮಳಿಗೆಗೆ ಹೋಗಲು ಮೂರನೇ ಮಹಡಿಯಲ್ಲಿರುವ ಎಸ್.ಆರ್.ಕಂಪ್ಯೂಟರ್ ತರಬೇತಿ ಕೇಂದ್ರದ ಬಾಗಿಲು ಹೊಡೆದು ಒಳ ನುಗಿದ್ದರು. ಮೂರನೇ ಮಹಡಿ ಮೂಲಕ ಎರಡನೇ ಮಹಡಿಯ ಗೋಲ್ಡ್ ಲೋನ್ ಶಾಪ್ಗೆ ನುಗ್ಗಲು ಡ್ರಿಲ್ಲಿಂಗ್ ಮಷಿನ್ನಿಂದ ನೆಲಕೊರೆಯುತ್ತಿದ್ದರು. ಆದರೆ, ಲಾಸ್ಟ್ ಮಿನಿಟ್ನಲ್ಲಿ ಪ್ಲ್ಯಾನ್ ಪ್ಲಾಪ್ ಆಗಿದೆ.
ದರೋಡೆಕೋರರು ನೆಲ ಕೊರೆಯುತ್ತಿದ್ದ ವೇಳೆ ಡ್ರಿಲ್ಲಿಂಗ್ ಮಷಿನ್ ಕೈಕೊಟ್ಟಿದೆ. ಮಿಷನ್ನ ಮೊಳೆ ಸಿಲುಕಿಕೊಂಡಿದ್ದರಿಂದ ಅದನ್ನು ತೆಗೆಯಲು ಪ್ರಯತ್ನಿಸಿದರೂ
ಅಲ್ಲಿದ್ದ ಸಿಸಿಟಿವಿ ಡಿವಿಆರ್ ಕಳವು ಮಾಡಿದ್ದಾರೆ. ಈ ಸಂಬಂಧ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಮಾಲೀಕ ರಮೇಶ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.