ಕೇಂದ್ರ ಕಾನೂನು ಸಚಿವರ ಕಾರಿಗೆ ಗುದ್ದಿದ ಟ್ರಕ್​; ಪ್ರಾಣಾಪಾಯದಿಂದ ಪಾರು

accident
Published on

ಶ್ರೀನಗರ: ಕೇಂದ್ರ ಕಾನೂನು ಸಚಿವ ಕಿರಣ್​ ರಿಜುಜು ಅವರ ಕಾರು ಜಮ್ಮು-ಕಾಶ್ಮೀರದಲ್ಲಿ ಅಪಘಾತಕ್ಕಿಡಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

ಜಮ್ಮು-ಕಾಶ್ಮೀರದ ಶ್ರೀನಗರ ಹೆದ್ದಾರಿಯ ರಾಂಬನ್​ ಬಳಿ ಘಟನೆ ನಡೆದಿದ್ದು ಲೋಡ್​ ತುಂಬಿಕೊಂಡು ಹೊರಟಿದ್ದ ಲಾರಿಯೂ ಸಚಿವರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಪ್ರಾಣಾಪಾಯದಿಂದ ಪಾರು

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಗಳು ಅಪಘಾತದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ನಡೆದಿಲ್ಲ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಚಿವರಿಗೆ ಬದಲಿ ವಾಹನದ ವ್ಯವಸ್ಥೆಯನ್ನು ಮಾಡಿ ಕೊಡಲಾಗಿದ್ದು ಅವರು ಕಾರ್ಯಕ್ರಮಕ್ಕೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೂ ಮುನ್ನ ಟ್ವೀಟ್​

ರಾಜಸ್ಥಾನದ ಉಧಮ್​ಪುರದಲ್ಲಿ ಲೀಗಲ್​ ಸರ್ವೀಸ್​ ಕ್ಯಾಂಪ್​ಗೆ ಜಮ್ಮುವಿನಿಂದ ತೆರಳುತ್ತಿದ್ದ ಸಚಿವರು ಅಪಘಾತವಾಗುವ ಕೆಲ ಹೊತ್ತಿನ ಮುಂಚೆ ವಿಡಿಯೋ ಒಂದನ್ನು ಪೋಸ್ಟ್​​​ ಮಾಡಿದ್ದರು. ರಸ್ತೆಯುದ್ದಕ್ಕೂ ಸುಂದರವಾದ ಪ್ರಯಾಣವನ್ನು ಆನಂದಿಸಬಹುದು ಎಂದು ಟ್ವೀಟ್​ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net