

ಬ್ರಹ್ಮಾವರ: ಬ್ರಹ್ಮಾವರ ಭಾಗದಲ್ಲಿ ಮೊದಲಿನಿಂದಲೂ ಫ್ಲೈಓವರ್ ಬೇಡಿಕೆಯನ್ನು ಮಂಡಿಸುತ್ತಲೇ ಬರುತ್ತಿತ್ತು. ಆದರೆ ನಾನಾ ಕಾರಣದಿಂದ ಇಂದಿಗೂ ನೆರವೇರಿಲ್ಲ. ಇಲ್ಲಿನ ಅವೈಜ್ಞಾನಿಕ ಕಾಮಗಾರಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಮೃತಗೊಂಡಿದ್ದರು ಎಂದು ಹೋರಾಟ ಸಮಿತಿ ಸಂಚಾಲಕ ಬಿ.ಗೋವಿಂದ ರಾಜ್ ಹೆಗ್ಡೆ ಹೇಳಿದರು.
ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಹೋರಾಟ ಸಮಿತಿಯಿಂದ ಸೆ.4ರಂದು ನಡೆಯುವ ಬಂದ್ ಕರೆಗೆ ನಾನಾ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸಮಾನ ಮನಸ್ಕರ ಸಮಾಲೋಚನಾ ಸಭೆ ಗುರುವಾರ ಬ್ರಹ್ಮಾವರ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಜರುಗಿತು.
ಹಲವಾರು ಮಂದಿ ಅಂಗವಿಕಲರಾಗಿದ್ದರು. ನಮ್ಮ ಮನವಿಯನ್ನು ಸಂಸದರು, ಜಿಲ್ಲಾಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರಿಗೆ ಮನವಿ ನೀಡಿ ಫ್ಲೈಓವರ್ ಬೇಡಿಕೆ ಮಾಡುವ ಕುರಿತು ಲಿಖಿತವಾಗಿ ನೀಡುವ ತನಕ ನಮ್ಮ ಹೋರಾಟ ನಿಲ್ಲದು. ಸೆ.4ರಂದು ಹೋರಾಟದ ಪ್ರಥಮ ಕಾರ್ಯವಾಗಿ ಉಪ್ಪಿನ ಕೋಟೆಯಿಂದ ಧರ್ಮಾವರ ಹೋಟೆಲ್ ತನಕ ಹೋರಾಟಗಾರರೇ ಸರ್ವೀಸ್ ರಸ್ತೆ ಕಾಮಗಾರಿ ಮಾಡಲು ಯಂತ್ರೋಪಕರಣಗಳನ್ನು ಜಿಲ್ಲಾಧಿಕಾರಿ ಜಿಲ್ಲಾ ಆಡಳಿತದಿಂದ ನೀಡುವ ಮನವಿ ಮಾಡಲಾಗುವುದು ಎಂದರು. ಮಾಜಿ ಜಿಪಂ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ರಾಜರಾಮ ಶೆಟ್ಟಿ, ಕಾರ್ಮಿಕ ಸಂಘಟನೆ ಸುಭಾಶಚಂದ್ರ ನಾಯಕ್, ಶಶಿಧರ ಗೊಲ್ಲ ಇನ್ನಿತರು ಉಪಸ್ಥಿತರಿದ್ದರು.