ನಿವೃತ್ತ ಶಿಕ್ಷಕರಿಗೆ ಸನ್ಮಾನ

sanmana
Published on

ಕಡಬ: ಕಡಬ ಸರಸ್ವತಿ ವಿದ್ಯಾಲಯದ ಪ್ರಾಥಮಿಕ ವಿಭಾಗದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕ ತಮ್ಮಯ್ಯ ಗೌಡ ಸುಳ್ಯ, ಶಿಕ್ಷಕಿ ದೇವಕಿ ದಂಪತಿಯನ್ನು ಸನ್ಮಾನಿಸಲಾಯಿತು. ಸರಸ್ವತಿ ಸಮೂಹ ಸಂಸ್ಥೆ ಸಂಚಾಲಕ ವೆಂಕಟರಮಣರಾವ್ ಮಟಕಡೆ, ಮುಖ್ಯ ಗುರು ಮಾಧವ ಕೋಲ್ಪೆ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಇಂದಿರಾ, ವಿನುತಾ ಸನ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಮಾತೃ ಭಾರತಿ, ವಿದ್ಯಾರ್ಥಿಗಳ ಸಹಯೋಗದಲ್ಲಿ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಮುಖ್ಯ ಶಿಕ್ಷಕ ಮಾದವ ಕೋಲ್ಪೆ ಸ್ವಾಗತಿಸಿದರು. ಶಿಕ್ವಕ ವಸಂತ್ ಕರಟಬೋಡಿ ವಂದಿಸಿದರು. ಶಿಕ್ಷಕಿ ಮೀನಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net