ಕೊಂಕಣಿ ಭಾಷಿಗರಿಗೆ ಪ್ರೇರಣಾ ಶಕ್ತಿ ಒಝಾರಿಯೋ

Konkani
Published on

ರೆ.ಫಾ. ಲಿಯೋ ಪ್ರವೀಣ ಡಿಸೋಜಾ ಅನಿಸಿಕೆ

ಕಲಾವಿದ ಎರಿಕ್​ಗೆ ಶ್ರದ್ಧಾಂಜಲಿ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶ್ರೇಷ್ಠ ಕಲಾವಿದ ಎರಿಕ್​ ಒಝಾರಿಯೋ ನಿಧನದಿಂದ ಕೊಂಕಣಿ ಭಾಷೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಕಲಾ ರಂಗದ ಮೇರು ಕಲಾವಿದರಾಗಿದ್ದ ಅವರು ತನ್ನ ಸೃಜನಾತ್ಮಕ ನಡೆಯಿಂದ ಅಚ್ಚುಮೆಚ್ಚಿನವರಾಗಿದ್ದರು. ತನ್ಮೂಲಕ ಕೊಂಕಣಿ ಭಾಷಿಗರೆಲ್ಲರಿಗೂ ಪ್ರೇರಣಾತ್ಮಕ ಶಕ್ತಿಯಾಗಿದ್ದರು ಎಂದು ಉಡುಪಿಯ ಶೋಕ ಮಾತಾ ಇಗರ್ಜಿಯ ರೆ.ಫಾ. ಲಿಯೋ ಪ್ರವೀಣ ಡಿಸೋಜಾ ಅನಿಸಿಕೆ ವ್ಯಕ್ತಪಡಿಸಿದರು.

ಉಡುಪಿಯ ಶೋಕ ಮಾತಾ ಇಗರ್ಜಿಯಲ್ಲಿ ಕೊಂಕಣಿ ಭಾಷಾ ಮಂಡಳಿಯ ಉಡುಪಿ ಶಾಖೆಯ ಸದಸ್ಯರು ಆಯೋಜಿಸಿದ್ದ ಎರಿಕ್​ ಅಲೆಕ್ಸಾಂಡರ್​ ಒಝಾರಿಯೋ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಕೊಂಕಣಿ ಪಸರಿಸೋಣ

ಕೊಂಕಣಿ ಸಾಹಿತ್ಯ ಸಂಗೀತಗಳ ಮೂಲಕ ಭಾಷೆಯ ಸರ್ವತೋಮುಖ ಪ್ರಗತಿಗೆ ಒಝಾರಿಯೋ ಅನವರತ ಶ್ರಮಿಸಿದ್ದರು. ಕೊಂಕಣಿ ಕಲಾ ಸಾಮ್ರಾಟ್​, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗೂ ಭಾಜನರಾಗಿದ್ದರು. ನಾವೆಲ್ಲರೂ ಮಾತೃ ಭಾಷೆ ಕೊಂಕಣಿಯಲ್ಲೇ ವ್ಯವಹರಿಸಿ, ಜಗದಗಲ ಪಸರಿಸಿದರೆ ಅದೇ ನಾವು ಅವರಿಗೆ ಕೊಡುವ ನೈಜ ಶ್ರದ್ಧಾಂಜಲಿಯಾಗಿದೆ ಎಂದರು.

ಕೊಂಕಣಿ ಭಾಷಾ ಮಂಡಲದ ನೂತನ ಅಧ್ಯಕ್ಷ ಲೆಸ್ಲಿ ಕರ್ನೇಲಿಯೋ, ಕಾರ್ಯಕಾರಿ ಸಮಿತಿಯ ಮೈಕಲ್​ ಡಿಸೋಜಾ, ಪ್ರಮೀಳಾ ರಾಡ್ರಿಗಸ್​, ಪೀಟರ್​ ಮೆಂಡೊನ್ಸಾ, ಲೋಯ್ಸೆಟ್​ ಕರ್ನೇಲಿಯೋ, ರೀಟಾ ಲೋಬೋ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಶಾಲಾ- ಕಾಲೇಜುಗಳಲ್ಲಿ ಕೊಂಕಣಿ ಭಾಷೆಯನ್ನು ಐಚ್ಛಿಕ ವಿಷಯವಾಗಿ ಪರಿಚಯಿಸಲು ಒಝಾರಿಯೋ ಅವರ ಅಭೂತಪೂರ್ವ ಸಾಧನೆಯೂ ಕಾರಣವಾಗಿದೆ. ಕೊಂಕಣಿಗರು ತಮ್ಮ ಮಕ್ಕಳಿಗೆ ಈ ಭಾಷೆಯ ವಿಶೇಷತೆ ತಿಳಿಸಿ, ಸಾಹಿತ್ಯ ಕೃಷಿಗೆ ಪ್ರೋತ್ಸಾಹಿಸಬೇಕು. | ಯು.ಕಲ್ಯಾಣಿ ಪೈ. ಕೊಂಕಣಿ ಭಾಷಾ ಮಂಡಲ ಉಡುಪಿಯ ಮಾಜಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net