ಪ್ರಾಮಾಣಿಕ ಜನಸೇವೆಗೆ ಸಂದ ಗೌರವ

abhinandane
ಹೆಬ್ರಿ ಗ್ರಾಪಂನಲ್ಲಿ ಗ್ರಾಪಂ ಸದಸ್ಯರಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹೆಬ್ರಿ ಗ್ರಾಪಂ ಸದಸ್ಯ ಎಚ್.ಜನಾರ್ದನ್ ಅವರನ್ನು ಗೌರವಿಸಲಾಯಿತು
Published on

ಹೆಬ್ರಿ: ನನಗೆ ಕೊಟ್ಟ ಕೆಲಸ ಪ್ರಾಮಾಣಿಕವಾಗಿ ಮಾಡಿ, ಆ ಮೂಲಕ ಜನರಿಗೆ ನ್ಯಾಯ ಕೊಟ್ಟಿದ್ದೇನೆ. ಹೆಬ್ರಿಯಲ್ಲಿ ವಿವಿಧ ಸಂಘ ಸಂಸ್ಥೆಯಲ್ಲಿ ತೊಡಗಿ ಜನರ ಸೇವೆ ಮಾಡಿರುವುದಕ್ಕೆ ಸಂದ ತೀರ್ಪು ಇದು. ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹೆಬ್ರಿ ಗ್ರಾಪಂ ಸದಸ್ಯ ಎಚ್.ಜನಾರ್ದನ್ ಹೇಳಿದರು.

ಹೆಬ್ರಿ ಗ್ರಾಪಂನಲ್ಲಿ ಗ್ರಾಪಂ ಸದಸ್ಯರಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು

ಅಧ್ಯಕ್ಷ ತಾರನಾಥ ಎಸ್.ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ತಾಪಂ ಇಒ ಶಶಿಧರ್ ಕೆಜೆ, ಗ್ರಾಪಂ ಸದಸ್ಯರಾದ ಸಂತೋಷ್ ನಾಯಕ್, ಸುಮಾ ಅಡ್ಯಂತಾಯ, ರೇಖಾ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಲೆಕ್ಕಸಹಾಯಕಿ ಪ್ರತಿಭಾ, ಗ್ರಾಪಂ ಸದಸ್ಯರು ಇದ್ದರು. ಸಿಬ್ಬಂದಿ ಪ್ರಸಾದ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net