ಆಫೀಸ್ ಗಾಳಿಯಿಂದ ತ್ವಚೆಯ ಸೌಂದರ್ಯಕ್ಕೆ ಕುತ್ತು?: ಕಳೆಗುಂದಿದ ಮುಖಕ್ಕೆ ತಜ್ಞರು ನೀಡಿದ್ರು ಸೂಪರ್ ಟಿಪ್ಸ್!..Office Air

Office air making skin look tired
Office air making skin look tired
Published on

ಪ್ರಮುಖ ಮುಖ್ಯಾಂಶಗಳು

  • ಕಚೇರಿಯಲ್ಲಿ ಉಸಿರಾಡುವ ಗಾಳಿಯಿಂದ ಮುಖ ದಣಿದಂತೆ ಕಾಣಲು ಕಾರಣ
  • ಐದು ನಿಮಿಷ ಹೊರಗೆ ಓಡಾಡುವುದನ್ನು ನಿತ್ಯ ಪಾಲಿಸಿ.
  • ಮುಖಕ್ಕೆ ಸನ್​ಸ್ಕ್ರೀನ್​, ಬಾಡಿ ಲೋಷನ್​ ಅನ್ನು ಹಚ್ಚೋದು ಮರೆಯದಿರಿ.
Office air making skin look tired: ಎಂಟರಿಂದ ಒಂಬತ್ತು ಗಂಟೆ ಆಫೀಸ್​ನಲ್ಲಿ ಒಂದೇ ಕಡೆ ಕುಳಿತು ಕೆಲಸ ಮಾಡಿ, ಹೊರಗೆ ಬಂದ ನಂತರ ನಿಮ್ಮ ಮುಖ ಸುಸ್ತಾದಂತೆ, ಒಣ ಚರ್ಮವಾಗಿರುವಂತೆ ಭಾಸವಾಗುತ್ತಿದಯೇ? ಹಾಗಾದರೆ ಇದಕ್ಕೆ ಕೇವಲ ಕೆಲಸದ ಒತ್ತಡ ಅಥವಾ ನಿದ್ದೆಯ ಕೊರತೆ ಮಾತ್ರ ಕಾರಣವಲ್ಲ. 8-9 ಗಂಟೆಗಳ ಕಾಲ ಉಸಿರಾಡುವ ನಿಮ್ಮ ಆಫೀಸ್ ಒಳಗಿನ ಕಲುಷಿತ ಗಾಳಿ ಪ್ರಮುಖ ಕಾರಣ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆಫೀಸ್​ನಲ್ಲಿನ ಎಸಿ ಹಾಗೂ ಫ್ಯಾನ್​ ಗಾಳಿ ಕಳಪೆ ಮಟ್ಟದ್ದಾಗಿರುವ ಕಾರಣ ಇದು ನಿಮ್ಮ ಆರೋಗ್ಯದ ಮೇಲೆ ಹಾಗೂ ಮುಖದ ಸೌಂದರ್ಯದ ಮೇಲೆ ಹಂತ ಹಂತವಾಗಿ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ಅಧ್ಯಯನವೊಂದರಿಂದ ಹೊರಬಿದ್ದಿದೆ.

'ಸಿಕ್ ಬಿಲ್ಡಿಂಗ್ ಸಿಂಡ್ರೋಮ್' ಎಂದರೆ ಏನು?

ಸಾಮಾನ್ಯವಾಗಿ ಸಿಸ್ಟಂವುಳ್ಳ ಕಂಪನಿಗಳು, ಅತ್ಯಾಧುನಿಕ ಕಂಪನಿಗಳು ಗ್ಲಾಸ್​ಗಳಿಂದ ನೈಸರ್ಗಿಕ ಗಾಳಿ ಒಳಗೆ ಬಾರದಂತೆ ಮುಚ್ಚಿರಲಾಗುತ್ತದೆ. ಬೆಳಕಿನ ಸಂಚಾರ ತೀರಾ ಕಡಿಮೆ ಇರುತ್ತದೆ. ಇಂತಹ ವಾತಾವರಣವನ್ನು ಸಿಕ್ ಬಿಲ್ಡಿಂಗ್ ಸಿಂಡ್ರೋಮ್' ಎನ್ನಲಾಗುತ್ತದೆ.
ಆಫೀಸ್​ಗಳಲ್ಲಿ ಉಸಿರಾಡುವ ಗಾಳಿಯಲ್ಲಿ ಕಣ್ಣಿಗೆ ಕಾಣಿಸದ ಧೂಳಿನ ಕಣಗಳು, ಮ್ಯಾಟ್​ ಮತ್ತು ಕುರ್ಚಿ ಸೇರಿದಂತೆ ಹಲವು ವಸ್ತುಗಳ ಮೇಲಿರುವ ಧೂಳಿನ ಕಣಗಳು, ರಾಸಾಯನಿಕಗಳು, ಬ್ಯಾಕ್ಟೀರಿಯಾಗಳು ಇರುತ್ತದೆವೆ. ಇವು ಗಾಳಿಯು ಚರ್ಮದ ರಂಧ್ರಗಳನ್ನು ಮುಚ್ಚಿ, ಮೊಡವೆ, ಅಲರ್ಜಿ ಹಾಗೂ ಮುಖದ ಮೇಲೆ ಸಣ್ಣ ಸಣ್ಣ ಗೆರೆಗಳು ಮೂಡುವಂತೆ ಮಾಡುತ್ತವೆ.
ಸೆಂಟ್ರಲೈಸ್ಡ್ ಎಸಿಗಳು ಗಾಳಿಯಲ್ಲಿರುವ ತೇವಾಂಶವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತವೆ. ಗಾಳಿಯಲ್ಲಿ ತೇವಾಂಶ ಕಡಿಮೆಯಾದಾಗ, ಅದು ನಮ್ಮ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆ ಮತ್ತು ತೇವಾಂಶವನ್ನು ಸೆಳೆಯಲು ಆರಂಭಿಸುತ್ತದೆ. ಇದರಿಂದಾಗಿ ಮುಖದ ತ್ವಚೆಯು ಒಣಗಿ, ಕಳಾಹೀನವಾಗಿ ಕಾಣಿಸುತ್ತದೆ. ಅಲ್ಲದೆ ಕಂಪ್ಯೂಟರ್​​ನಿಂದ ಹೊರಹೊಮ್ಮುವ ಬ್ಲೂಲೂನ್​ಗಳು ಚರ್ಮವನ್ನು ಸೇರಿದಾಗ ವಯಸ್ಸಾದವರಂತೆ ಕಾಣಿಸುತ್ತೇವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ತ್ವಚೆ ಕಾಪಾಡಿಕೊಳ್ಳಲು ಏನು ಮಾಡಬೇಕು

ಕಚೇರಿಯಲ್ಲಿದ್ದಾಗ ಎಸಿ ಗಾಳಿಯಿಂದ ಚರ್ಮ ಒಣಗದಂತೆ ತಡೆಯಲು ದಿನವಿಡೀ ಕನಿಷ್ಠ 2-3 ಲೀಟರ್ ನೀರು ಕುಡಿಯಿರಿ. ನಿಮ್ಮ ಸೀಟಿನಲ್ಲಿ ಯಾವಾಗಲೂ ಒಂದು ಉತ್ತಮ ಮೊಯಿಶ್ಚರೈಸರ್ ಇಟ್ಟುಕೊಳ್ಳಿ. ಪ್ರತಿ 3-4 ಗಂಟೆಗೊಮ್ಮೆ ಮುಖಕ್ಕೆ ಹಚ್ಚಿಕೊಳ್ಳಿ.
ಆಫೀಸ್ ಒಳಗೇ ಇರುವುದಾದರೂ ಕಂಪ್ಯೂಟರ್ ಲೈಟ್ ಮತ್ತು ಕೃತಕ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ಬಳಕೆ ಕಡ್ಡಾಯ.ಸತತವಾಗಿ ಎಸಿ ಕೊಠಡಿಯಲ್ಲೇ ಇರದೆ, ಮಧ್ಯ ಮಧ್ಯ ಆಫೀಸ್‌ನಿಂದ ಹೊರಗೆ ಬಂದು ಕನಿಷ್ಠ 5 ನಿಮಿಷಗಳ ಕಾಲ ನೈಸರ್ಗಿಕ ಗಾಳಿ ಮತ್ತು ಬೆಳಕನ್ನು ಪಡೆದುಕೊಳ್ಳಿ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net