ಬ್ಲಿಂಕಿಟ್ ಬ್ಯಾಗ್ ಸೇರಿದ ಹಾವು! ಉರಗ ರಕ್ಷಕನಾದ ಡೆಲಿವರಿ ಬಾಯ್​; ಬ್ಲಿಂಕಿಟ್ ಬಾಯ್ ಸಾಹಸಕ್ಕೆ ನೆಟ್ಟಿಗರ ರಿಯಾಕ್ಷನ್​ ಹೇಗಿದೆ? Blinkit Delivery Boy

ಹಾವನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಹುಡುಗ
ಹಾವನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಹುಡುಗ
Published on

ಪ್ರಮುಖ ಮುಖ್ಯಾಂಶಗಳು

  • ಹಾವನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಹುಡುಗ
  • ಹಾವನ್ನು ರಕ್ಷಿಸಿ ತನ್ನ ಬ್ಯಾಗ್​ಗೆ ಹಾಕಿಕೊಂಡ ಯುವಕ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್
ವೈರಲ್​: ಭಾರತದಲ್ಲಿ ಇಂಟರ್ನೆಟ್​ ಕ್ರಾಂತಿ ಆದ ನಂತರ ಪ್ರತಿದಿನ ಒಂದಿಲ್ಲೊಂದು ವಿಡಿಯೋಗಳು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ಬ್ಲಿಂಕಿಟ್​​ನಲ್ಲಿ ಕೆಲಸ ಮಾಡುವ ಡೆಲಿವರಿ ಹುಡುಗ (Blinkit Delivery Boy) ನೊಬ್ಬ ರಸ್ತೆಯಲ್ಲಿದ್ದ ಹಾವೊಂದನ್ನು ರಕ್ಷಣೆ ಮಾಡಿ ತನ್ನ ಬ್ಯಾಗಿನಲ್ಲಿ ಹಾಕಿಕೊಳ್ಳುತ್ತಿರುವ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ಮುಂಬೈನಲ್ಲಿ ಸೆರೆಹಿಡಿದ್ದೆಂದು ತಿಳಿದು ಬಂದಿದೆ. ವಿಡಿಯೋನಲ್ಲಿ ಬ್ಲಿಂಕಿಟ್​​ನ ಹಳದಿ ಬಣ್ಣದ ಸಮವಸ್ತ್ರ ಧರಿಸಿರುವ ಯುವಕನೊಬ್ಬ, ರಸ್ತೆಯಲ್ಲಿ ಹರಿಯುತ್ತಿದ್ದ ಉದ್ದನೆಯ ಹಾವೊಂದನ್ನು ಹಿಡಿದು, ತನ್ನ ಡೆಲಿವರಿ ಬ್ಯಾಗ್​ನಲ್ಲಿ ಹಾಕಿಕೊಳ್ಳುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದಾಗಿದೆ.
ನೆಟ್ಟಿಗರ ರಿಯಾಕ್ಷನ್​ ಹೇಗಿದೆ?
ಸೋಷಿಯಲ್​ ಮೀಡಿಯಾನಲ್ಲಿ ಪೋಸ್ಟ್​ ಆದ ಒಂದೇ ದಿನದಲ್ಲಿ ಈ ವಿಡಿಯೋ ಸುಮಾರು 1.64 ಲಕ್ಷ ವೀಕ್ಷಣೆಯನ್ನು ಕಂಡಿದೆ. ವಿಡಿಯೋನ ನೋಡಿದ ನೆಟ್ಟಿಗರು ವಿನೋದ ಭರಿತ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.ಬ್ಲಿಂಕಿಟ್​ನಲ್ಲಿ ಹಾವನ್ನು ಕೂಡ ಡೆಲಿವರಿ ಮಾಡ್ತಾರಾ? ನನಗೆ ಇವತ್ತೆ ತಿಳಿಯಿತು ಎಂದು ಒಬ್ಬ ಬಳಕೆದಾರ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ.
ಇವನು ಹಾವನ್ನೆನೋ ರಕ್ಷಣೆ ಮಾಡಿದ ಈಗ ಬ್ಯಾಗ್​ನಿಂದ ಹಾವು ಆಚೆ ಬಂದರೆ ಇವನ ರಕ್ಷಣೆಯನ್ನು ಆ ಭಗವಂತನೇ ಮಾಡಬೇಕು ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಪಾಪ ಆ ಹಾವು ತನ್ನಷ್ಟಕ್ಕೆ ತಾನು ಹರಿದು ಹೋಗುತ್ತಿತ್ತು, ಇವನು ಅದನ್ನು ಹಿಡಿಯಲು ಏಕೆ ಹೋದ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net