'ನಕ್ಸಲನಾಗಲು ಹೊರಟಿದ್ದೆ ಅಣ್ಣ ಕೇಳಿದ ಆ ಒಂದು ಪ್ರಶ್ನೆ ನನ್ನನ್ನು ಬದಲಾಯಿಸಿತು'; ಶಾಂಕಿಂಗ್​ ವಿಚಾರ ಬಿಚ್ಚಿಟ್ಟ ನಟ Pawan Kalyan

Deputy CM Pawan Kalyan shocking reveal
Deputy CM Pawan Kalyan shocking reveal
Published on

ಪ್ರಮುಖ ಮುಖ್ಯಾಂಶಗಳು

  • ನಾನು ನನ್ನ 17ನೇ ವಯಸ್ಸಿನಲ್ಲಿ ನಕ್ಸಲನಾಗಲು ಬಯಸಿದ್ದೆ ಅಣ್ಣ ಚಿರಂಜೀವಿ ತಡೆದಿದ್ದರು
  • ಚಿರಂಜೀವಿಯವರೇ ನನಗೆ ನಾಯಕ ಎಂದು ಹೇಳಿದ ಡಿಸಿಎಂ ಪವನ್​ ಕಲ್ಯಾಣ್​
  • ನಾನು ಗನ್ ಹಿಡಿಯಲು ಬಯಸಿದ್ದೆ ಎಂದ ಡಿಸಿಎಂ ಪವನ್​ ಕಲ್ಯಾಣ್​
Pawan Kalyan  shocking news reveal: '17ರಿಂದ 21ನೇ ವಯಸ್ಸಲ್ಲಿ ನಾನು ಕೋಪೋದ್ರಿಕ್ತನಾಗಿರುತ್ತಿದ್ದೆ. ನಕ್ಸಲನಾಗಬೇಕೆಂದಿದ್ದೆ. ನನ್ನ ಹದಿಹರೆಯದ ದಿನಗಳಲ್ಲಿ ಆಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಬಯಸಿದ್ದೆ. ನಾನು ರಹಸ್ಯ ಸಭೆಗೆ ಹೋಗುತ್ತಿದ್ದೆ. ಆಗೊಂದು ದಿನ ನನ್ನ ಅಣ್ಣ  ಕೇಳಿದ ಒಂದು ಪ್ರಶ್ನೆ ನನ್ನ ನಿರ್ಧಾರವನ್ನೇ ಬದಲಾಯಿಸಿತು' ಹೀಗೆಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದು ನಟ ಮತ್ತು ಆಂಧ್ರಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್​ ಅವರು.
ಖಾಸಗಿ ಮಾಧ್ಯಮವೊಂದಕ್ಕೆ ಕೊಟ್ಟ ವಿಶೇಷ ಪಾಡ್​ಕಾಸ್ಟ್​ ಸಂದರ್ಶನದಲ್ಲಿ  ಮಾತನಾಡಿ ನಟ, ಡಿಸಿಎಂ ಪವನ್​ ಕಲ್ಯಾಣ್​ ಅವರು, ನಕ್ಸಲನಾಗಬೇಕೆಂದುಕೊಂಡಿದ್ದು, ಅನ್ಯಾಯದ ವಿರುದ್ಧ ಹೋರಾಡಲು ಬಯಸಿದ್ದು, ಗನ್​ ಹಿಡಿಯಬೇಕೆಂದಿದ್ದ ಸ್ಫೋಟಕ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಹೀಗಿದ್ದಾಗ ನಟ ಚಿರಂಜೀವಿಯವರು ಇದರಿಂದ ಅವರನ್ನು ಹೊರಗೆ ತಂದಿದ್ದು ಹೇಗೆ ಎಂದು ಮಾಹಿತಿ ಕೊಟ್ಟಿದ್ದಾರೆ

ಪವನ್​ ಕಲ್ಯಾಣ್ ಹೇಳಿದ್ದಿಷ್ಟು

'ನಾನು ನಕ್ಸಲ್​ ಗುಂಪಿಗೆ ಸೇರಬೇಕು ಎಂದು ಆಶಿಸಿದ್ದು ನಿಜ. ಅದು ನನ್ನ 17ರಿಂದ20ನೇ ವರ್ಷದ ಹದಿ ಹರೆಯದ ಕೊನೆಯ ದಿನಗಳು. ಆಗ ಸಮಾಜದಲ್ಲಾಗುತ್ತಿದ್ದ ಅನ್ಯಾಯದ ವಿರುದ್ಧ ಸಿಕ್ಕಾಪಟ್ಟೆ ಸಿಟ್ಟು ಬರುತ್ತಿತ್ತು. ಕೆಲವು ಕಾರ್ಯಕ್ರಮಕ್ಕೆ ಹೋಗುತ್ತಿದೆ. ಶಾರ್ಟ್​ ಸಿನಿಮಾಗಳಲ್ಲಿ ಭಾಗಿಯಾಗುತ್ತಿದೆ, ವಿದ್ಯಾರ್ಥಿಗಳ ರಹಸ್ಯ ಸಭೆಗಳಿಗೆ  ಹೋಗುತ್ತಿದ್ದೆ. ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಿದ್ದೆ. ಎಲ್ಲೇ ಹೋದರು ತೀರ ಸಿಟ್ಟು ಬರುತ್ತಿತ್ತು.  ನೆಮ್ಮದಿ ಇರಲಿಲ್ಲ' ಎಂದರು.
ಮುಂದುವರೆದು, 'ಅಣ್ಣ ಚಿರಂಜೀವಿ ಕೇಳಿದ್ದರು. ಇಷ್ಟೊಂದು ಕೋಪ ನಿನಗೆಲ್ಲಿಂದ ಬರುತ್ತದೆ. ಅಕಸ್ಮಾತ್​ ನಿನ್ನ ಅಣ್ಣ ಚಿರಂಜೀವಿ ಅಲ್ಲದೇ ಇದ್ದಿದ್ದರೇ, ನೀನೇ ಒಬ್ಬ ಕುಟುಂಬವನ್ನು ಕಷ್ಟಪಟ್ಟು ಸಾಕುವವನಾಗಿದ್ದರೆ. ನಿನ್ನ ಸಂಬಳದ ಮೇಲೆ ಕುಟುಂಬ ಅವಲಂಬಿತರಾಗಿದ್ದರೆ ನೀನು ಹೀಗೆ ಮಾಡುತ್ತಿದ್ದೆಯಾ ಎಂದು ಪ್ರಶ್ನಿಸಿದ. ಆಗ ಮಾತೇ ಬರಲಿಲ್ಲ. ಮೌನಿಯಾಗಿ ಕುಳಿತೆ, ಎನ್ನುವುದನ್ನು ನೆನಪಿಸಿಕೊಂಡರು.
'ನನ್ನ ಅಣ್ಣ ನನಗೆ ಹೀರೋ. ಉಸ್ತಾದ್​ ಭಗತ್​ ಸಿಂಗ್​ ಟ್ರೇಲರ್​ ನೋಡಿ ಟ್ವೀಟ್ ಮಾಡಿದಾಗ ಸಖತ್​ ಖುಷಿಯಾಗಿತ್ತು. ಆಗ ನನ್ನನ್ನು ನಾನೇ ಮರೆತು ಹೀರೋ ಅನ್ನೋದನ್ನು ಮರೆತು ಬಿಡುತ್ತೇನೆ. ನನಗೆ ನನ್ನ ಅಣ್ಣನೆ ಎಲ್ಲ' ಎಂದರು. 

ಸಿನಿಮಾ ಪ್ರವೇಶ ಮಾಡಿದ್ದು ಹೀಗೆ

ಪವನ್​ ಕಲ್ಯಾಣ್​ ಅವರು 1996ರಲ್ಲಿ ರಿಲೀಸ್​ ಆಗಿದ್ದ  ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ  ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟರು. 2014 ರಲ್ಲಿ ಜನಸೇನಾ ಪಕ್ಷ (ಜೆಎಸ್‌ಪಿ) ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಸೇರಿದರು. ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಆಂಧ್ರದ ಡಿಸಿಎಂ ಪಟ್ಟಕ್ಕೆ ಏರಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net