ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದು ತಲೆಬುರುಡೆಯೇ? ಬೀಳುತ್ತಿರುವ ಮರವೇ? ಇದೇ ನೋಡಿ ನಿಮ್ಮ ನಿಜ ವ್ಯಕ್ತಿತ್ವ...Optical Illusion

Optical Illusion
ದೃಷ್ಟಿ ಭ್ರಮೆ ಚಿತ್ರ
Published on: 

Optical Illusion : ಕಣ್ಣಿಗೆ ಕಾಣುವುದೊಂದೇ ಸತ್ಯವಲ್ಲ, ನಮ್ಮ ಮನಸ್ಸಿನ ಆಳದಲ್ಲಿ ಅಡಗಿರುವ ರಹಸ್ಯಗಳೇ ನಾವು ಮೊದಲು ನೋಡುವುದನ್ನು ನಿರ್ಧರಿಸುತ್ತವೆ! ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ದೃಷ್ಟಿ ಭ್ರಮೆ ( ಆಪ್ಟಿಕಲ್ ಇಲ್ಯೂಷನ್ ) ಚಿತ್ರವು, ನಿಮ್ಮ ವ್ಯಕ್ತಿತ್ವದ ಮುಖವಾಡ ಕಳಚಿ ನಿಮ್ಮ ನಿಜ ಸ್ವಭಾವವನ್ನು ಕನ್ನಡಿಯಂತೆ ತೋರಿಸಲಿದೆ. ಹಾಗಾದರೆ, ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಮೊದಲುದದ್ದು ಕಂಡಿದ್ದು ಏನು? ತಲೆಬುರುಡೆಯೇ (Skull) ಅಥವಾ ಬೀಳುತ್ತಿರುವ ಮರವೇ (Fallen Tree)? ಬನ್ನಿ, ಇದರ ಹಿಂದಿನ ಅಚ್ಚರಿಯ ರಹಸ್ಯವನ್ನು ತಿಳಿಯೋಣ.

ಕಣ್ಣಿಗೆ ಮೊದಲು ‘ತಲೆಬುರುಡೆ’ ಕಂಡರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ?

ನೀವು ಈ ವಿಚಿತ್ರ ಚಿತ್ರವನ್ನು ನೋಡಿದ ತಕ್ಷಣ ನಿಮ್ಮ ಕಣ್ಣಿಗೆ ಮೊದಲು ತಲೆಬುರುಡೆ ಗೋಚರಿಸಿದ್ದರೆ, ನಿಮ್ಮ ಆಂತರಿಕ ವ್ಯಕ್ತಿತ್ವವು ಅತ್ಯಂತ ತೀಕ್ಷ್ಣವಾದ ಬುದ್ಧಿವಂತಿಕೆ ಮತ್ತು ವಿಶ್ಲೇಷಣಾತ್ಮಕ ಗುಣವನ್ನು ಹೊಂದಿದೆ ಎಂದರ್ಥ. ಜೀವನದಲ್ಲಿ ಎಷ್ಟೇ ದೊಡ್ಡ ಸವಾಲುಗಳು ಅಥವಾ ಕಠಿಣ ಸಂದರ್ಭಗಳು ಎದುರಾದರೂ, ನೀವು ಎಂದಿಗೂ ಧೃತಿಗೆಡದೆ ಪ್ರಬುದ್ಧತೆಯಿಂದ, ಧೈರ್ಯವಾಗಿ ಅವುಗಳನ್ನು ಎದುರಿಸುತ್ತೀರಿ ಎಂಬುದನ್ನು ಸೂಚಿಸುತ್ತದೆ.

ಇದಿಷ್ಟೇ ಅಲ್ಲದೆ, ಯಾವುದೇ ವಿಷಯದ ಭಾವನಾತ್ಮಕ ವಲಯಕ್ಕಿಂತ ಅದರ ನೈಜ ಸತ್ಯ ಹಾಗೂ ತಾರ್ಕಿಕತೆಯನ್ನು ಅರಿಯಲು ನೀವು ಹೆಚ್ಚು ಪ್ರಾಮುಖ್ಯತೆ ನೀಡುತ್ತೀರಿ. ನಿಮ್ಮ ಈ ಬಲವಾದ ಮನೋಸ್ಥೈರ್ಯ ಹಾಗೂ ನೇರವಾದ ದೃಷ್ಟಿಕೋನವೇ ನಿಮ್ಮ ಜೀವನದ ದೊಡ್ಡ ಶಕ್ತಿಯಾಗಿದೆ. ಆದರೆ ಕೆಲವೊಮ್ಮೆ ಅನಾವಶ್ಯಕ ವಿಷಯಗಳಿಗೂ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತೀರಿ.

Also Read
ಇದಪ್ಪಾ ಅದೃಷ್ಟ ಅಂದ್ರೆ...ಕೇವಲ 200 ರೂ.ಗೆ 50 ಲಕ್ಷದ ಟೊಯೋಟಾ ಫಾರ್ಚೂನರ್ ಕಾರು ಜಾಕ್​ಪಾಟ್​ ಹೊಡೆದ 6 ವರ್ಷದ ಬಾಲಕ! Madhya Pradesh Boy
Optical Illusion

ಕಣ್ಣಿಗೆ ಮೊದಲು ‘ಬಿದ್ದ ಮರ’ ಕಂಡರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ?

ಒಂದು ವೇಳೆ ಈ ಚಿತ್ರದಲ್ಲಿ ನಿಮ್ಮ ಗಮನ ಮೊದಲು ಸೆಳೆದದ್ದು ಬಿದ್ದ ಮರವಾಗಿದ್ದರೆ, ನಿಮ್ಮ ಸ್ವಭಾವವು ಅತ್ಯಂತ ಸಹಜ, ಸರಳ ಹಾಗೂ ಶಾಂತಿಪ್ರಿಯತೆಯಿಂದ ಕೂಡಿದೆ ಎಂದು ಇದು ಸೂಚಿಸುತ್ತದೆ. ನೀವು ಪ್ರತಿಯೊಬ್ಬರ ಮೇಲೂ ಅಪಾರ ನಂಬಿಕೆ ಇಡುವ ವ್ಯಕ್ತಿ ಮತ್ತು ಎಲ್ಲರೊಂದಿಗೆ ಸುಲಭವಾಗಿ ಬೆರೆಯುವ ಸ್ನೇಹಪರ ಮನೋಭಾವ ಹೊಂದಿದ್ದೀರಿ ಎಂಬುದನ್ನು ಸೂಚಿಸುತ್ತದೆ.

ಜೀವನದ ಹಾದಿಯಲ್ಲಿ ಎದುರಾಗುವ ಸಣ್ಣಪುಟ್ಟ ಕಷ್ಟಗಳು ಅಥವಾ ಸೋಲುಗಳು ನಿಮ್ಮ ಉತ್ಸಾಹವನ್ನು ಕುಂದಿಸಲು ಸಾಧ್ಯವಿಲ್ಲ, ಬದಲಿಗೆ ಪ್ರತಿ ಕಷ್ಟದಲ್ಲೂ ಒಂದು ಧನಾತ್ಮಕ ಪಾಠವನ್ನು ಕಲಿತು ಮುಂದೆ ಸಾಗುವ ಸ್ಥಿತಪ್ರಜ್ಞತೆ ನಿಮ್ಮಲ್ಲಿದೆ. ನಿಮ್ಮ ಈ ಮೃದು ಸ್ವಭಾವ ಹಾಗೂ ಹೊಂದಾಣಿಕೆಯ ಗುಣವೇ ನಿಮ್ಮ ಸುತ್ತಲಿನ ಜನರಿಗೆ ನಿಮ್ಮನ್ನು ಅತ್ಯಂತ ಆಪ್ತರನ್ನಾಗಿ ಮಾಡುತ್ತದೆ. ಸರಿಯಾದ ಸಂಬಳ ಸಿಗದಿದ್ದರೂ ಪರವಾಗಿಲ್ಲ, ತಮಗೆ ಸಿಕ್ಕ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಗುಣ ನಿಮ್ಮದು.

ಅಂದಹಾಗೆ, ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ, ಇವು ನಮ್ಮ ಸುಪ್ತ ಮನಸ್ಸಿನಲ್ಲಿ (Subconscious Mind) ನಡೆಯುವ ಆಲೋಚನಾ ಲಹರಿಯನ್ನು ಪ್ರತಿಬಿಂಬಿಸುತ್ತವೆ. ನಾವೆಲ್ಲರೂ ಒಂದೇ ರೀತಿಯ ಜಗತ್ತನ್ನು ನೋಡಿದರೂ, ನಮ್ಮ ವೈಯಕ್ತಿಕ ಅನುಭವಗಳು, ಆಲೋಚನೆಗಳು ಮತ್ತು ಮನಸ್ಥಿತಿಗೆ ತಕ್ಕಂತೆ ಪ್ರತಿಯೊಬ್ಬರ ದೃಷ್ಟಿಕೋನವು ವಿಭಿನ್ನವಾಗಿರುತ್ತದೆ.

Also Read
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಪೈಲಟ್ ಸ್ಮಿತ್ ಮಚ್ಚಾರ್ ಮೊದಲ ಫೋಟೋ ವೈರಲ್!...ತಲೆಯ ಮೇಲಿನ ಹೊಲಿಗೆಗಳು ಕಣ್ಣಂಚಿನಲ್ಲಿ ನೀರು ತರಿಸುವುದು ಖಂಡಿತ | Smit Machchhar
Optical Illusion

ನಮ್ಮ ಮನಸ್ಸು ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ ಎಂಬುದರ ಮೇಲೆ ನಮ್ಮ ಒಡನಾಟ, ನಿರ್ಧಾರಗಳು ಮತ್ತು ಜೀವನದ ಹಾದಿ ನಿರ್ಧಾರವಾಗುತ್ತದೆ. ಒಟ್ಟಾರೆಯಾಗಿ, ಈ ಆಕರ್ಷಕ ಚಿತ್ರವು ನಿಮ್ಮ ಆಂತರಿಕ ಭಾವನೆಗಳನ್ನು ಅರ್ಥೈಸಿಕೊಳ್ಳಲು ಮತ್ತು ನಿಮ್ಮನ್ನು ನೀವು ಮತ್ತಷ್ಟು ಹತ್ತಿರದಿಂದ ಅರಿಯಲು ಒಂದು ಅವಕಾಶವಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net