ಇಂಥಾ ಐಡಿಯಾ ಭಾರತೀಯರಿಗೆ ಮಾತ್ರ ಬರೋದು... ಜಾಲತಾಣದಲ್ಲಿ ಧೂಳೆಬ್ಬಿಸಿದ ಮದ್ವೆ ಇನ್ವಿಟೇಶನ್​! Wedding Invitation

ಜಾಲತಾಣದಲ್ಲಿ ಧೂಳೆಬ್ಬಿಸಿದ ಮದ್ವೆ ಇನ್ವಿಟೇಶನ್​
ಜಾಲತಾಣದಲ್ಲಿ ಧೂಳೆಬ್ಬಿಸಿದ ಮದ್ವೆ ಇನ್ವಿಟೇಶನ್​
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮದುವೆಗಳು ತುಂಬಾ ಅದ್ದೂರಿಯಾಗಿ ನಡೆಯುತ್ತಿವೆ
  • ಮದುವೆ ಮಾತ್ರವಲ್ಲ, ಇತರ ಸಮಾರಂಭಗಳು ಸಹ ಭರ್ಜರಿಯಾಗೇ ನಡೆಯುತ್ತವೆ
  • ಮದುವೆಯ ಆಮಂತ್ರಣ ಪತ್ರಿಕೆಗಳ ನೋಟವೂ ಈ ಕಾಲದಲ್ಲಿ ಬದಲಾಗಿದೆ
  • ಮದುವೆ ಇನ್ವಿಟೇಶನ್​ನಲ್ಲೂ ಶ್ರೀಮಂತಿಕೆಯನ್ನು ಅನುಸರಿಸುತ್ತಿದ್ದಾರೆ
Wedding Invitation : ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮದುವೆಗಳು ತುಂಬಾ ಅದ್ದೂರಿಯಾಗಿ ನಡೆಯುತ್ತಿವೆ. ಮದುವೆ ಮಾತ್ರವಲ್ಲ, ಇತರ ಸಮಾರಂಭಗಳು ಸಹ ಭರ್ಜರಿಯಾಗೇ ನಡೆಯುತ್ತವೆ. ಇದರೊಂದಿಗೆ ಮದುವೆಯ ಆಮಂತ್ರಣ ಪತ್ರಿಕೆಗಳ ನೋಟವೂ ಈ ಕಾಲದಲ್ಲಿ ಬದಲಾಗಿದೆ. ಮದುವೆ ಇನ್ವಿಟೇಶನ್​ನಲ್ಲೂ ಶ್ರೀಮಂತಿಕೆಯನ್ನು ಅನುಸರಿಸುತ್ತಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಆಮಂತ್ರಣ ಪತ್ರಿಕೆಯ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸದ್ಯ ವೈರಲ್ ಆಗಿರುವ ವಿಡಿಯೋವನ್ನು ನೋಡಿದಾಗ ಮೊದಲ ನೋಟದಲ್ಲಿ ಅದು ಮದುವೆಯ ಆಮಂತ್ರಣ ಪತ್ರಿಕೆಯಂತೆ ಕಾಣುವುದಿಲ್ಲ. ಬದಲಾಗಿ, ಒಂದು ಶಿಲ್ಪದಂತೆ ಕಾಣುತ್ತದೆ. ಒಂದು ಪೆಟ್ಟಿಗೆಯೊಳಗೆ ನೀಲಿ ನವಿಲಿನ ಶಿಲ್ಪವನ್ನು ಇಟ್ಟಿರುವಂತೆ ಕಾಣುತ್ತದೆ. ಆ ಪೆಟ್ಟಿಗೆಯ ಕೆಳಗೆ ಮದುವೆಯ ಆಮಂತ್ರಣ ಪತ್ರಿಕೆಯೂ ಇದೆ.
Harsh ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, ಇಂತಹ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಲು ನಿಮಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ? ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಪ್ರಸ್ತುತ ಈ ವಿಡಿಯೋಗೆ ಹಲವು ಕಾಮೆಂಟ್‌ಗಳು ಮತ್ತು ಲೈಕ್‌ಗಳು ಬರುತ್ತಿವೆ.
ಭಾರತದ ವಿವಾಹ ಆಮಂತ್ರಣ ಪತ್ರಿಕೆಗಳು ಏಕೆ ಇಷ್ಟೊಂದು ವಿಶೇಷವಾಗಿವೆ? ಇದು ನಿಜವಾಗಿಯೂ ವಿವಾಹ ಆಮಂತ್ರಣ ಪತ್ರಿಕೆಯೇ? ಇದು ಎಷ್ಟು ಸುಂದರವಾಗಿ ಕಾಣುತ್ತದೆ ನೋಡಿ, ನಾನು ಇದನ್ನು ಮದುವೆಯ ಉಡುಗೊರೆಯಾಗಿಯೇ ನೀಡಬಹುದು, ಭಾರತೀಯರಿಗೆ ಮಾತ್ರ ಇಂತಹ ಐಡಿಯಾಗಳು ಬರುವುದು ಎಂದೆಲ್ಲ ಬಗೆಬಗೆಯ ಕಾಮೆಂಟ್​ಗಳು ಬರುತ್ತಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net