ಮಳೆಗಾಲದಲ್ಲಿ ಹೇರ್​ಫಾಲ್, ತುರಿಕೆ​ ಜಾಸ್ತಿಯಾಗ್ತಿದ್ಯಾ?; ಈ ಟಿಪ್ಸ್ ಫಾಲೋ ಮಾಡಿ ಸಾಕು...Monsoon Hair Care Tips

Monsoon hair care tips
Monsoon hair care tips
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ಕೂದಲು ಉದುರುವುದನ್ನು ತಡೆಗಟ್ಟುವುದು ಹೇಗೆ?
  • ಕೂದಲಿನ ಆರೋಗ್ಯಕ್ಕೆ ಯಾವ ಎಣ್ಣೆ ಬಳಕೆ ಮಾಡಿದರೆ ಸೂಕ್ತ?
  • ರಾಸಾಯನಿಕ ಇಲ್ಲದ ಶಾಂಪು, ರೋಸ್ಮರಿ ಎಣ್ಣೆ ಕೂದಲಿನ ಆರೋಗ್ಯ ಕಾಪಾಡತ್ತೆ
Monsoon hair care tips: ಚಳಿ, ಮಳೆ ಹಾಗೂ ಬೇಸಿಗೆ ಮೂರು ಋತುಗಳು ತಲೆಯ ಕೂದಲು, ನೆತ್ತಿಯನ್ನು ಬಾದಿಸುತ್ತದೆ. ಮಳೆಗಾಲದಲ್ಲಿ ಮೋಡ ಕವಿದ ವಾತಾವರಣ, ತಂಪಾದ ಗಾಳಿ ಮನಸ್ಸಿಗೆ ಮುದ ನೀಡಿದರು ಕೂದಲಿನ ಆರೋಗ್ಯಕ್ಕೆ ಮಾತ್ರ ಇದು ದೊಡ್ಡ ಸವಾಲು. ತೇವಾಂಶ, ಗಾಳಿಯಲ್ಲಿನ ಅತಿಯಾದ ಆರ್ದ್ರತೆ, ಜಿಡ್ಡಿನಾಂಶದಿಂದ ಕೂದಲು ಒರಟಾಗುವುದು, ಬೇರುಗಳು ದುರ್ಬಲಗೊಂಡು ಉದುರುವುದು, ತುರಿಕೆ ಹೆಚ್ಚಾಗಿ ಕೂದಲಿನ ಆರೋಗ್ಯವನ್ನು ಹಾನಿ ಮಾಡುತ್ತದೆ. ಹೀಗಾಗಿ ರಕ್ಷಣೆ ಮಾಡುವುದು ಅಗತ್ಯ
ಹಾಗಾದರೆ ಮಳೆಗಾಲದಲ್ಲಿ ನಿಮ್ಮ ಕೂದಲನ್ನು ಹಾನಿಯಿಂದ ರಕ್ಷಿಸಲು ಮತ್ತು ಅದರ ನೈಸರ್ಗಿಕ ಹೊಳಪನ್ನು ಕಾಯ್ದುಕೊಳ್ಳಲು ತಜ್ಞರು ಕೊಟ್ಟಿರುವ ಕೆಲವು ಸಲಹೆ ಇಲ್ಲಿದೆ

ಕೂದಲು ಒಣಗಿರುವಂತೆ ನೋಡಿಕೊಳ್ಳಿ

ಮಳೆಗೆ ಕೂದಲು ನೆನೆಯುವುದರಿಂದ ಅಥವಾ ಕೂದಲು ಒದ್ದೆಯಿರುವಾಗ ಅದನ್ನು ಕಟ್ಟುವುದರಿಂದ ಅಥವಾ ಹಾಗೆಯೇ ಒಣಗದಂತೆ ಬಿಡುವುದರಿಂದ ಮಳೆಯ ನೀರಿನಲ್ಲಿರುವ ಆಮ್ಲೀಯತೆ ಹಾಗೂ ಮಾಲಿನ್ಯಕಾರಕಗಳು ನೆತ್ತಿಯ ಮೇಲೆ ಉಳಿದುಕೊಂಡು ಬ್ಯಾಕ್ಟೀರಿಯಾ ಹೆಚ್ಚಾಗುವಂತೆ ಮಾಡುತ್ತದೆ. ಇಷ್ಟೇ ಅಲ್ಲದೆ ಶಿಲೀಂದ್ರಗಳಿಂದ ಸೋಂಕು ಉಂಟಾಗಬಹುದು. ಮಳೆ ಬಂದಾಗ ಅಕಸ್ಮಾತ್​ ಆಗಿ ನೆಂದರೆ ಕೂದಲನ್ನು ಹಾಗೆಯೇ ಬಿಡುವುದು, ಕಟ್ಟುವುದು ಮಾಡಬೇಡಿ. ಟವಲ್​ ಅಥವಾ, ಡ್ರೈಯರ್​ನಿಂದ ಒಣಗಿಸಿ

ಮೃದುವಾದ ಶಾಂಪು ಕಂಡೀಶನರ್ ಬಳಕೆ ಮಾಡಿ

ಮಳೆಯಲ್ಲಿ ನೆತ್ತಿಯ ಮೇಲೆ ಉಳಿದುಕೊಳ್ಳುವ ಬ್ಯಾಕ್ಟೀರಿಯಾ ಹೋಗಲಾಡಿಸಲು 2 ರಿಂದ 3 ದಿನ ವಾರಕ್ಕೆ ತಲೆಗೆ ಸ್ನಾನ ಮಾಡುವುದು ಅಗತ್ಯ. ಹೀಗಾಗಿ ಹೆಚ್ಚು ರಾಸಾಯನಿಕವುಳ್ಳ ಶಾಂಪು ಬಳಕೆ ಮಾಡಬೇಡಿ. ಇದರಿಂದ ಕೂದಲಿನ ನೈಸರ್ಗಿಕ ಎಣ್ಣೆ ಅಂಶ ದೂರವಾಗುತ್ತದೆ ಎನ್ನುತ್ತಾರೆ ವೈದ್ಯರು

ನೆತ್ತಿಯ ಆರೋಗ್ಯಕ್ಕೆ ಒತ್ತು, ಈ ಬಾಚಣಿಕೆ ಬಳಸಿ

ಮಳೆಗಾಲದಲ್ಲಿ ಹೆಚ್ಚಾಗಿಯೇ ಕಾಡುವ ತುರಿಕೆ ಮತ್ತು ಹೊಟ್ಟು ಹೋಗಲಾಡಿಸಲು ಆಂಟಿ-ಫಂಗಲ್ ಅಥವಾ ಕಹಿಬೇವಿನ ಅಂಶವಿರುವ ಹೇರ್ ಆಯಿಲ್/ಶಾಂಪೂ ಬಳಕೆ ಮಾಡಿ. ಆದರೆ, ಇಡೀ ದಿನ ಎಣ್ಣೆ ಹಚ್ಚಿ ಬಿಡುವುದರಿಂದ ಕೂದಲು ಜಿಡ್ಡಾಗಿ ಮತ್ತಷ್ಟು ಸಮಸ್ಯೆಗೆ ದೂಡಿಕೊಳ್ಳಬೇಡಿ.ಮಳೆಗಾಲದಲ್ಲಿ ಕೂದಲು ಬೇಗನೆ ಸಿಕ್ಕಾಗುವ ಕಾರಣ ಯಾವುದಕ್ಕೂ ಅಗಲ ಬಾಚಣಿಕೆಯನ್ನೇ ಬಳಕೆ ಮಾಡಿ ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ.

ಪೌಷ್ಠಿಕ ಆಹಾರ ಸೇವಿಸಿ

ದೇಹದ ಬಾಹ್ಯ ಸೌಂದರ್ಯದ ಜೊತೆಗೆ ಒಳಗಿನಿಂದಲೂ ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ ಹಾಗಾಗಿ ಕೂದಲಿನ ಆರೈಕೆಗೆ ಬೇಕಾಗುವ ಆಮ್ಲ, ಕಾಳುಗಳು, ಪಿಸ್ತಾ ಕರಿಬೇವು ತಿನ್ನಿ. ರಸಭರಿತ ಹಣ್ಣುಗಳನ್ನು ತಿನ್ನುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಿದ್ದಾರೆ.

ಯಾವ ಎಣ್ಣೆ ಬಳಕೆ ಮಾಡಬೇಕು?

ಮಳೆಗಾಲದಲ್ಲಿ ರೋಸ್​ಮರಿ, ತೆಂಗಿನ ಎಣ್ಣೆ, ಕುಂಬಳಕಾಯಿ ಬೀಜದ ಎಣ್ಣೆ, ಈರುಳ್ಳಿ ಎಣ್ಣೆ ಬಳಕೆ ಮಾಡಿ ಇದು ಆಂಟಿಆಕ್ಸಿಡೆಂಟ್‌ಗಳು ಮತ್ತು ಅಗತ್ಯವಾದ ಫ್ಯಾಟಿ ಆಸಿಡ್​ಗಳಿಂದ ಸಮೃದ್ಧವಾಗಿದ್ದು ಉರಿಯೂತ, ತುರಿಕೆಯಂತಹ ಸಮಸ್ಯೆಯನ್ನು ದೂರ ಮಾಡಲು ಸಹಕಾರಿಯಾಗಿದೆ ಎನ್ನುತ್ತಾರೆ ತಜ್ಞರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net