ಬೆಳಗೆದ್ದ ಕೂಡಲೇ ಮೊಬೈಲ್ ನೋಡುವ ಹವ್ಯಾಸದಿಂದ ಏನಾಗುತ್ತದೆ?
ಮೊಬೈಲ್ ನೋಡುವುದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ
ಮೊಬೈಲ್ ಬೆಳಕು ಹಾಗೂ ನೋಟಿಫಿಕೇಶನ್ ಸೌಂಡ್ಗಳಿಂದ ಪರಿಣಾಮ
Side Effects Of Using Phone: ಮೊಬೈಲ್, ಇಂಟರ್ನೆಟ್ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ದಿನನಿತ್ಯದ ಕಾರ್ಯದ ಜೊತೆಗೆ ಫೋನ್ ನಮ್ಮ ಕೈನಲ್ಲಿ ಇಲ್ಲದಿದ್ದರೆ ಯಾವುದೇ ಕೆಲಸ ಮಾಡೋಕೆ ಸಾಧ್ಯವಾಗೋದಿಲ್ಲ. ಈ ಹಿಂದೆ ಎದ್ದ ಕೂಡಲೇ ಮನೆ ಅಂಗಳ ಗುಡಿಸಿ, ಪೂಜೆ ಮಾಡಿ ಅಡುಗೆ ತಯಾರಿಯೋ ಅಥವಾ ಪೇಪರ್ ಓದುವ ಕಾರ್ಯ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಹಾಗಿಲ್ಲ ಬೆಳಗೆದ್ದ ಕೂಡಲೇ ಅರ್ಧಗಂಟೆ ಮೊಬೈಲ್ ನೋಡೋದು ಅಭ್ಯಾಸ. ಆದರೆ ಈ ನಡವಳಿಕೆಯು ಮೆದುಳಿನ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರತ್ತೆ ಎನ್ನುತ್ತಾರೆ ವೈದ್ಯರು.
ರೀಲ್ಸ್, ಯೂಟ್ಯೂಬ್ ನೋಡುತ್ತಾ ಕಾಲ ಕಳೆಯೋದು ಸಾಮಾನ್ಯ ಅಭ್ಯಾಸ ಎನಿಸಬಹುದು, ಆದರೆ, ಇದು ದಿನ ಕಳೆದಂತೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಮೊಬೈಲ್ನಿಂದ ನಮ್ಮ ಮೇಲಾಗುವ ಪರಿಣಾಮವೇನು ಎನ್ನುವುದಕ್ಕೆ ಮಾಹಿತಿ ಈ ಲೇಖನದಲ್ಲಿ ಇದೆ.
ಮೆದುಳಿನ ಮೇಲೆ ಪರಿಣಾಮ
ಬೆಳಗೆದ್ದು ನಮ್ಮ ಮೆದುಳು ನಿನ್ನೆಯ ಚಿಂತೆಗಳನ್ನು ಬಿಟ್ಟು ಫ್ರೆಶ್ ಆಗಿ ಈ ದಿನಕ್ಕೆ ತಯಾರಾಗಿರುತ್ತದೆ. ಆದರೆ ಮೊಬೈಲ್ ಬೆಳಕಿನಿಂದ, ಆಗಾಗ್ಗೆ ಕೇಳುವ ನೋಟಿಫಿಕೇಶನ್ ಗಳಿಂದಾಗಿ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಗಮನ ಒಂದೇ ಕಡೆ ಕೇಂದ್ದೀಕರಿಸುವುದನ್ನು ನಿರಾಕರಿಸುತ್ತದೆ ಎಂದು ಹೇಳಲಾಗಿದೆ.
ನಕರಾತ್ಮಕ ಪರಿಣಾಮ
ಬೆಳಗೆದ್ದ ಕೂಡಲೇ ಯೂಟ್ಯೂಬ್ ಅಥವಾ ವೆಬ್ಸೈಟ್ಗಳಲ್ಲಿ ಕಾಣಿಸಿಕೊಳ್ಳುವ ಕೊಲೆ, ದರೋಡೆ, ಪ್ರವಾಹದಲ್ಲಿ ಜನರು ಮೃತ ಎನ್ನುವ ಸುದ್ದಿಗಳನ್ನು ಓದಿದಾಗ ಇದು ನಿಮ್ಮ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮಲ್ಲಿ ನಕರಾತ್ಮಕ ಭಾವನೆ ಹೆಚ್ಚಾಗುತ್ತದೆ.
ಹೃದಯದ ಮೇಲೆ ಪರಿಣಾಮ
ಬೆಳಗೆದ್ದ ಕೂಡಲೇ ಮೊಬೈಲ್ ನೋಡುವುದರಿಂದ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇಷ್ಟೇ ಅಲ್ಲದೇ ನಿಮಗೆ ರಕ್ತದೊತ್ತಡ ಹಾಗೂ ಜೃದಯ ಬಡಿತ ಸಮಸ್ಯೆ ಕಾಡೋದು ದಿಟ ಎಂದು ಹೇಳಿದ್ದಾರೆ.
ಗಮನಹರಿಸುವುದರ ಮೇಲೆ ಪರಿಣಾಮ
ಹೆಚ್ಚಾಗಿ ಬೆಳಗ್ಗಿನ ಜಾವ ಎದ್ದು ಓದುವುದು ಒಳ್ಳೆಯ ಅಭ್ಯಾಸ ಹಾಗೂ ಅದರಲ್ಲಿರುವಹಾಲು ಬೇರೆಯ ರೀತಿಯಲ್ಲೇ ಸಹಾಯ ಮಾಡುತ್ತದೆ. ಆದರೆ, ಇದೇ ಸಮಯಲ್ಲಿ ಆಮೊಬೈಲ್ ವ್ಯರ್ಥ ಕಾಲಹರಣ ಮಾಡಿದರೆ ಯಾವವಿದ್ಯ ಹತ್ತಲ್ಲ ಎನ್ನುತ್ತಾರೆ ತಜ್ಞರು ಬೆಳಿಗ್ಗೆ ಹೊತ್ತು ಮೂಡುವ ಸೃಜನ ಶೀಲತೆ ಹಾಗೂ ಏಕಾಗ್ರತೆ ನಿಮ್ಮ ಬರವಣಿಗೆ ಅಥವಾ ಓದಿನ ಮೇಲೆ ಪರಿಣಾಮ ಬೀರುವಂತೆ ಮಾಡುತ್ತದೆ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.