ನಟ ಸೂರ್ಯ-ತ್ರಿಷಾ ಅಭಿನಯದ ಸಿನಿಮಾ 'ಕರುಪ್ಪು' OTTಗೆ ಎಂಟ್ರಿ; ಜೂ.12ರಂದು ಎಲ್ಲಿ ವೀಕ್ಷಿಸಬಹುದು?...Karuppu

Karuppu OTT release date Out
Karuppu OTT release date Out
Published on

ಪ್ರಮುಖ ಮುಖ್ಯಾಂಶಗಳು

  • ನಟಿ ತ್ರಿಷಾ ಹಾಗೂ ನಟ ಸೂರ್ಯ ಅಭಿಮಾನಿಗಳಿಗೆ ಗುಡ್​ನ್ಯೂಸ್
  • ಜೂನ್​12ರಂದು ಕರುಪ್ಪು ಸಿನಿಮಾ ಓಟಿಟಿಗೆ ರಿಲೀಸ್​
  • ಅಮೆಜಾನ್​ ಪ್ರೈಮ್​ನಲ್ಲಿ ಮೂರು ಭಾಷೆಗಳಲ್ಲಿ ಸಿನಿಮಾ ನೋಡಲು ಲಭ್ಯ
Karuppu OTT release date Out: ನಟ ಸೂರ್ಯರಿಗೆ ಹಿಟ್ ಕೊಟ್ಟ ಸಿನಿಮಾವಾದ ಕರುಪ್ಪು ಸಿನಿಮಾ 25 ದಿನಗಳು ಚಿತ್ರಮಂದಿರದಲ್ಲಿ ಉತ್ತಮ ಗಳಿಕೆ ಕಂಡ ನಂತರ ಓಟಿಟಿಗೆ ಬರಲು ಸಜ್ಜಾಗಿದೆ. ತಮಿಳಿನಲ್ಲಿ ಕರುಪ್ಪು, ತೆಲುಗಿನಲ್ಲಿ ವೀರಭದ್ರಡು ಎಂದು ರಿಲೀಸ್​​ ಆದ ಫ್ಯಾಂಟಸಿ ಆಕ್ಷನ್​ ಸಿನಿಮಾ ದಕ್ಷಿಣ ಭಾರತದ ಪ್ರೇಕ್ಷಕರನ್ನು ರಂಜಿಸಿದೆ.
ನಟಿ ತ್ರಿಷಾ ಹಾಗೂ ನಟ ಸೂರ್ಯ ಅಭಿಮಾನಿಗಳಿಗೆ ಸಖತ್​ ಸಿಹಿ ಸುದ್ದಿ ಸಿಕ್ಕಿದೆ. ಥೀಯೇಟರ್​ಗಳಲ್ಲಿ ಉತ್ತಮ ಪ್ರದರ್ಶನ ಕಂಡು 310 ಕೋಟಿಗೂ ಹೆಚ್ಚು ಹಣ ಗಳಿಕೆ ಕಂಡ ಕರುಪ್ಪು ಸಿನಿಮಾವನ್ನು ಜೂನ್​12ರಿಂದ ಪ್ರೈಮ್​ ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಬಗ್ಗೆ ಸ್ವತಃ ನಟ ಸೂರ್ಯ ಅವರೇ ತಮ್ಮ ಎಕ್ಸ್​ ಹಾಗೂ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಯಾವ್ಯಾವ ಭಾಷೆಯಲ್ಲಿ ಲಭ್ಯ?

ತೆಲುಗು ಮತ್ತು ತಮಿಳಿನಲ್ಲಿ ಮಾತ್ರ ಸಿನಿಮಾವನ್ನು ಥಿಯೇಟರ್​ನಲ್ಲಿ ನೋಡಬಹುದಾಗಿತ್ತು. ಆದರೆ, ಈಗ ಒಟಿಟಿಯಲ್ಲಿ ಹಿಂದಿಯಲ್ಲೂ ನೋಡಬಹುದಾಗಿದೆ. ಈ ವಾರದ ವೀಕೆಂಡ್​ನಲ್ಲಿ ಮನೆಯಲ್ಲೇ ಕುಳಿತು ತೆಲುಗು, ತಮಿಳು, ಹಿಂದಿ ಮೂರು ಭಾಷೆಯಲ್ಲಿಯೂ ರಿಲೀಸ್ ಆಗಲಿರುವ ಕರುಪ್ಪು ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಸೂರ್ಯ ಪೋಸ್ಟ್​ನಲ್ಲಿ ಏನಿದೆ?

ಕರುಪ್ಪು ಒಟಿಟಿ ರಿಲೀಸ್​ ಬಗ್ಗೆ ನಟ ಸೂರ್ಯ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. 'ಕರುಪ್ಪು ಸಿನಿಮಾ ನೋಡಿ ನನಗೆ ಬೆಂಬಲ ನೀಡುತ್ತಿರುವುದು ನಿಜಕ್ಕೂ ಸಂತೋಷ ತಂದುಕೊಟ್ಟಿದೆ.ಈಗ ಈ ಚಿತ್ರವು ಜೂನ್ 12 ರಿಂದ ಪ್ರೈಮ್ ವಿಡಿಯೋದಲ್ಲಿ ವಿಶ್ವಾದ್ಯಂತ ಸ್ಟ್ರೀಮಿಂಗ್ ಪ್ರೀಮಿಯರ್‌ಗೆ ಸಿದ್ಧವಾಗಿದೆ. ಪ್ರೀತಿ ಮತ್ತು ಪ್ರತಿಕ್ರಿಯೆ ನೋಡಲು ಕಾತುರದಿಂದ ಕಾಯುತ್ತಿದ್ದೇನೆ' ಎಂದು ಸೂರ್ಯ ತಮ್ಮ ಸಂಭ್ರಮವನ್ನು ಹಂಚಿಕೊಂಡರು.

ಯಾರೆಲ್ಲ ನಟಿಸಿದ್ದಾರೆ

ಡ್ರೀಮ್​ ವಾರಿಯರ್ಸ್​​ ಪಿಕ್ಷರ್ಸ್​ ಅಡಿ ನಿರ್ಮಾಣವಾಗಿ, ನಿರ್ದೇಶಕ ಆರ್​ ಜೆ ಬಾಲಜಿ ಕತೆಯ ಕರುಪ್ಪು ಸಿನಿಮಾದಲ್ಲಿ ನಟಿ ತ್ರಿಷಾ, ಕಾಲಿವುಡ್​​ ನಟ ಸೂರ್ಯ ಅದ್ಭುತವಾಗಿ ನಟಿಸಿದ್ದಾರೆ. ಸ್ವತಃ ನಿರ್ದೇಶಕ ಆರ್​ಜೆ ಬಾಲಾಜಿಯವರು ಖಳ ನಾಯಕನಾಗಿ ನಟಿಸಿದ್ದಾರೆ ಎನ್ನಲಾಗಿದೆ. ಇಂದ್ರನ್ಸ್​, ಮನ್ಸೂರ್​ ಅಲಿ ಖಾನ್,ಜಾರ್ಜ್​​ ಸೇರಿದಂತೆ ಹಲವುರು ಬಣ್ಣ ಹಚ್ಚಿದ್ದಾರೆ.

ಕರುಪ್ಪು ಕತೆ ಏನು?

ಶೋಷಣೆಗೊಳಗಾದ ಜನರು ಹಾಗೂ, ಸಾಮಾನ್ಯ ಜನರಿಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ವೆಟ್ಟೈ ಕರುಪ್ಪು ಮನುಷ್ಯನಾಗಿ ನ್ಯಾಯಾಲಯಕ್ಕೆ ಎಂಟ್ರಿಕೊಡಲಾಗುತ್ತದೆ. ಪುರಾಣ, ಸಾಹಸ ಮತ್ತು ಕೋರ್ಟ್‌ರೂಮ್ ಡ್ರಾಮಾವನ್ನು ಒಳಗೊಂಡಿರುವ ಈ ಚಿತ್ರವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವಾಗ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net