ದೇಹದ ಆರೋಗ್ಯಕ್ಕೆ ಮದ್ದು ಈ ಡ್ರ್ಯಾಗನ್​ ಫ್ರೂಟ್​​; ಹೆಚ್ಚು ಖರ್ಚಿಲ್ಲದೆ, ದುಬಾರಿ ಹಣ ಕೊಡದೆ ಮನೆಯಲ್ಲಿಯೇ ಬೆಳೆಯೋದು ಹೇಗೆ?..Dragon Fruit

Grow Dragon Fruit On Home Terrace
Grow Dragon Fruit On Home Terrace
Published on

ಪ್ರಮುಖ ಮುಖ್ಯಾಂಶಗಳು

  • ಡ್ರ್ಯಾಗನ್​ ಹಣ್ಣನ್ನು ಮನೆಯ ಟೆರಾಸ್​​ ಮೇಲೆಯೇ ಬೆಳೆಯೋದು ಹೇಗೆ?.
  • 16-20 ಇಂಚಿನ ಡ್ರಮ್​ ಅಥವಾ ಬಕೆಟ್​ನಲ್ಲಿ ಡ್ರ್ಯಾಗನ್​ ಹಣ್ಣು ಬೆಳೆಯಬಹುದು.
  • ಮಧುಮೇಹ ನಿಯಂತ್ರಣ, ಹೃದಯ ಆರೋಗ್ಯಕ್ಕೂ ಮದ್ದು ಈ ಡ್ರ್ಯಾಗನ್​ ಹಣ್ಣು

Grow Dragon Fruit On Home Terrace:

ಡ್ರ್ಯಾಗನ್​ ಹಣ್ಣಿನಲ್ಲಿ ವಿಟಮಿನ್​ ಸಿ, ಫೈಬರ್​​ ಮತ್ತು ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬಹಳಷ್ಟು ಸಹಕಾರಿ. ಮಧುಮೇಹ ನಿಯಂತ್ರಿಸಲು ಮದ್ದು. ಹೃದಯ ಆರೋಗ್ಯಕ್ಕೂ ಸಾಕಷ್ಟು ಸಹಕಾರಿ. ಇಷ್ಟೆಲ್ಲ ಆರೋಗ್ಯ ಪ್ರಯೋಜನವನ್ನು ನೀಡುವ ಈ ಡ್ರ್ಯಾಗನ್​ ಫ್ರೂಟ್​ ಕೊಂಡುಕೊಳ್ಳಲು ಮಾತ್ರ ಹಲವರು ಕಷ್ಟ ಪಡುತ್ತಾರೆ, ಒಂದು ಹಣ್ಣಿಗೆ ಎಂಬತ್ತರಿಂದ 100 ರೂಪಾಯಿಗಳವರೆಗೂ ಮಾರಾಟವಾಗುವ ಕಾರಣ ಸಾಕಷ್ಟು ಜನರು ಇದನ್ನು ಕೊಂಡುಕೊಳ್ಳಲು ಮುಂದಾಗೋದೆ ಇಲ್ಲ.

ಆದರೆ, ವಿಚಾರ ಏನೆಂದರೆ ಡ್ರ್ಯಾಗನ್​ ಹಣ್ಣು ಬೆಳೆಯುವದರಲ್ಲಿ ಭಾರಿ ಲಾಭ ಇದೆ. ಹೌದು ಈ ಹಣ್ಣನ್ನು ಬೆಳೆಯಲು ಬೇರೆ ಗಿಡ ಅಥವಾ ಹಣ್ಣಿನ ಗಿಡದಂತೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮಣ್ಣು ಹಾಗೂ ಪೋಷಣೆಯನ್ನು ಸರಿಯಾದ ರೀತಿ ಮಾಡಿದರೆ ಸಾಕು ನಿಮ್ಮ ಮನೆಯ ತಾರಸಿಯಲ್ಲಿಯೂ ನೀವು ಡ್ರ್ಯಾಗನ್​ ಹಣ್ಣನ್ನು ಬೆಳೆದು, ಯಾವುದೇ ಖರ್ಚಿಲ್ಲದೆ ಆರೋಗ್ಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ತಾರಸಿಯಲ್ಲಿ ಡ್ರ್ಯಾಗನ್​ ಹಣ್ಣು ಬೆಳೆಯೋದು ಹೇಗೆ?

  • ಸಸಿ ಹೀಗೆ ಆಯ್ಕೆ ಮಾಡಿಕೊಳ್ಳಿ
ಮೊದಲಿಗೆ ಡ್ರ್ಯಾಗನ್​ ಹಣ್ಣು ಬೆಳೆಯಲು ಬೀಜ ಬಳಕೆ ಮಾಡಬೇಡಿ. ನೀವು ಬೀಜ ಬಿತ್ತು ಅದು ಬೆಳೆಯಲು ಹೆಚ್ಚು ಸಮಯ ಹಿಡಿಯುವ ಕಾರಣ, ನರ್ಸರಿಗಳಲ್ಲಿ ಬೆಳೆದ ಡ್ರ್ಯಾಗನ್​ ಸಸಿಯನ್ನು ಕೊಂಡು ತಂದು ಬೆಳೆಯುವುದು ಉತ್ತಮ. ಕತ್ತರಿಸಿದ ಡ್ರ್ಯಾಗನ್​ ಗಿಡಗಳು ಹೆಚ್ಚು ವರ್ಷ ಫಸಲು ನೀಡುತ್ತದೆ. ನೀವು ಕೆಂಪು ಅಥವಾ ಬಿಳಿ ಯಾವ ಪ್ರಭೇದದ ಹಣ್ಣನ್ನಾದರೂ ಕೊಂಡುಕೊಳ್ಳಬಹುದು.

ಗಿಡ ನೆಡುವ ಸಾಧನ ಹೀಗಿರಲಿ

ನರ್ಸರಿಯಿಂದ ಕೊಂಡುತಂದ ಡ್ರ್ಯಾಗನ್​ ಹಣ್ಣಿನ ಗಿಡವನ್ನು ಮಡಿಕೆ ಅಥವಾ ಬಕೆಟ್​ನಂತಹ ಬೃಹತ್​ ಗಾತ್ರದ ಸಾಧನಕ್ಕೆ ಹಾಕಿ. ಆನ್​ಲೈನ್​ ಶಾಪಿಂಗ್​ನಲ್ಲಿ ಡ್ರ್ಯಾಗನ್​ ಟಬ್​ ಅನ್ನು ಕೊಂಡುಕೊಳ್ಳಬಹುದು. ಒಟ್ಟಾರೆಯಾಗಿ 16 ಅಥವಾ 20 ಇಂಚಿನ ಟಬ್​​ ಬಳಕೆ ಮಾಡಿ ನೀವು ಈ ಹಣ್ಣಿನ ಗಿಡವನ್ನು ಪೋಷಣೆ ಮಾಡಬೇಕಾಗುತ್ತದೆ.

ಮಣ್ಣು ಹೀಗಿರಲಿ

ಶೇ0.50ರಷ್ಟು ಮರಳು ಮಿಶ್ರಿತ ಮಣ್ಣು, ಶೇ30ರಷ್ಟು ಗೊಬ್ಬರ, ಶೇ.20ರಷ್ಟು ಮರಳು ಅಥವಾ ಕೊಕೊಪಿಟ್​ ಮಿಶ್ರಣ ಮಾಡಿ ಗಿಡಕ್ಕೆ ಹಾಕಿ. ಬುಡದಲ್ಲಿ ಸ್ವಲ್ಪ ನೀರನ್ನು ಹಾಕಿ, ಈ ಡ್ರ್ಯಾಗನ್​ ಹಣ್ಣು ಬಳ್ಳಿಯಂತೆ ಬೆಳೆಯುವ ಕಾರಣ, ಸಸಿ ಪಕ್ಕ ಒಂದು ಗಟ್ಟಿಯಾದ ಕೋಲನ್ನು ಇಡಿ.

ಡ್ರ್ಯಾಗನ್​ ಹಣ್ಣಿಗೆ ಬಿಸಿಲು ಬೇಕು

ಡ್ರ್ಯಾಗನ್​ ಗಿಡವು ಸೊಂಪಾಗಿ ಬೆಳೆಯಲು ಆರರಿಂದ ಎಂಟು ಗಂಟೆಗಳ ಕಾಲ ಬಿಸಿಲಿನಲ್ಲಿ ಇರಬೇಕು. ಇದಕ್ಕೆ ಹೆಚ್ಚು ಬಿಸಿಲಿನ ಅಗತ್ಯ ಇರುತ್ತದೆ. ಬಿಸಿಲಲ್ಲಿ ಇದ್ದಷ್ಟು ಉತ್ತಮ ಹಾಗೂ ಸಿಹಿ ಭರಿತ ಹಣ್ಣನ್ನು ಸೇವನೆ ಮಾಡಬಹುದಾಗಿದೆ.

ಇದು ನೆನಪಿರಲಿ

  • ಡ್ರ್ಯಾಗನ್​ ಹಣ್ಣಿಗೆ ಹೆಚ್ಚು ನೀರಿನ ಅವಶ್ಯಕತೆ ಇರೋದಿಲ್ಲ. ಬುಡ ಒಣಗಿದಾಗಷ್ಟೇ ನೀರನ್ನು ಹಾಕಿ. ಒಂದು ವಾರಕ್ಕೆ ಎರಡು ಅಥವಾ ಮೂರು ಬಾರಿ ನೀರು ಹಾಕಿ ಪೋಷಿಸಿದರೆ ಸಾಕು.
  • ಡ್ರ್ಯಾಗನ್​ ಹಣ್ಣು ಬೆಳೆದಂತೆ ಕೊಂಬೆಗಳನ್ನು ಕತ್ತರಿಸಿ ಇದು, ಹಣ್ಣು ಬೇಗನೆ ಬೆಳೆಯಲು ಸಹಾಯ ಮಾಡುತ್ತದೆ.
  • ಸಾಮಾನ್ಯವಾಗಿ ಡ್ರ್ಯಾಗನ್​ ಸಸಿ ನೆಟ್ಟು 12ರಿಂದ 13 ತಿಂಗಳಿಗೆ ಹೂ ಬಿಡುತ್ತದೆ. 30 -35 ದಿನಕ್ಕೆ ಹಣ್ಣನ್ನು ನೀಡುತ್ತದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net