ತೀವ್ರ ಶಾಖಕ್ಕೆ ಮಧ್ಯಾಹ್ನದ ಬಳಿಕ ಸುಸ್ತು, ಆಲಸ್ಯ ಕಾಡುತ್ತಿದೆಯೇ?; ಹುಣಸೆ ಹಣ್ಣಿನ ರಸವನ್ನು ಕುಡಿದು ನೋಡಿ!..Imli Paani Benefits

Imli Paani Benefits
Imli Paani Benefits
Published on

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆಯಲ್ಲಿ ತೀವ್ರ ಶಾಖಕ್ಕೆ ಆಲಸ್ಯ, ನಿದ್ದೆ, ಸುಸ್ತು ಕಾಡೋದು ಸಾಮಾನ್ಯ
  • ನೆನಸಿದ ಹುಣಸೆ ಹಣ್ಣಿನ ನೀರನ್ನು ಜೀರಿಗೆ, ಪುದೀನದ ಜೊತೆ ಕುಡಿಯಿರಿ
  • ಮಲಬದ್ಧತೆ, ಜೀರ್ಣಕ್ರಿಯೆಗೆ ಹುಣಸೆ ಹಣ್ಣಿನ ನೀರು ರಾಮಬಾಣವಿದ್ದಂತೆ
Imli Paani Benefits: ಬೇಸಿಗೆ ಸಮಯದಲ್ಲಿ ಊಟವಾದ ನಂತರ ಹೊಟ್ಟೆ ಭಾರಕ್ಕೆ ತೂಕಡಿಕೆ, ಆಕಳಿಕೆ, ಬಂದು ಕೆಲಸ ಮಾಡಲು ಹಿಂದೇಟು ಹಾಕುವಂತೆ ಮಾಡುತ್ತದೆ. ಇದು ಈಗಂತು ಸರ್ವೇ ಸಾಮಾನ್ಯ. ಇದನ್ನು 'ಪೋಸ್ಟ್-ಲಂಚ್ ಸ್ಲಗ್ಗಿಶ್‌ನೆಸ್' ಎಂದು ಕರೆಯುತ್ತಾರೆ, ನಿಮ್ಮ ಕಚೇರಿಯಲ್ಲಿರುವ ಇತರ ಉದ್ಯೋಗಿಗಳು ನಿಮ್ಮ ಈ ಅವಸ್ಥೆ ಕಂಡು, ನಿಮ್ಮಲ್ಲಿ ಮುಜುಗರ ಉಂಟಾದರೆ ಈ ದೇಸಿ ಪರಿಹಾರವನ್ನು ಅಳವಡಿಸಿಕೊಳ್ಳಿ ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಒಬ್ಬರು ಕೆಲವು ಸಲಹೆ ಕೊಟ್ಟಿದ್ದಾರೆ.
ಭಾರತದಲ್ಲಿ ಶಾಖದಿಂದ ಅನೇಕ ಜನರ ಮೇಲೆ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಇದು ದೇಹದಲ್ಲಿ ನಿಶ್ಶ್ಯಕ್ತಿ ಉಂಟುಮಾಡುವುದು, ಸುಸ್ತಾಗುವಂತೆ ಮಾಡೋದು, ನಿದ್ದೆ ಬರುವಂತೆ ಮಾಡುತ್ತದೆ. ಇಂಟರ್ನ್ಯಾಷನಲ್​ ಜರ್ನಲ್​​ ಆಫ್​ ಇನ್ನೋವೆಟಿವ್​ ರಿಸರ್ಚ್​ ಇನ್​ ಟೆಕ್ನಾಲಜಿ ಪ್ರಕಾರ, ಹುಣಸೆ ಮರದ ಬೀಜ, ಬೇರು ಎಲೆ, ಹೂ, ಹಣ್ಣು ಅದರ ತಿಗಟೆಯು ವಿವಿಧ ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದಿದೆ. ನೆನಸಿಟ್ಟ ಹುಣಸೆ ನೀರು ಕುಡಿಯುವುದು ಒಳ್ಳೆಯದು ಎಂದಿದ್ದಾರೆ.

ಹುಣಸೆ ಹಣ್ಣಿನ ನೀರು ಬೆಸ್ಟ್

ಆಲಸ್ಯ ಹೋಗಿಸಲು ಇಮ್ಲಿ ಪಾನಿ ಅಥವಾ ಹುಣಸೆ ಹಣ್ಣಿನ ನೀರನ್ನು ಕುಡಿಯಬೇಕು. ದೇಹದಲ್ಲಿ ಮಧ್ಯಾಹ್ನ ಶಾಖದ ಉಷ್ಣಾಂಶ ಹೆಚ್ಚಾದಾಗ ನೆನಸಿಟ್ಟ ಹುಣಸೆ ನೀರನ್ನು ಕುಡಿಯಬೇಕು. ಇದು ದೇಹದ ಜೀರ್ಣಶಕ್ತಿಯನ್ನು ಚುರುಕಾಗಿಸುತ್ತದೆ. ಹುಣಸೆ ಹಣ್ಣಿನಲ್ಲಿರುವ ಎಲೆಕ್ಟ್ರೋಲೈಟ್, ನೈಸರ್ಗಿಕ ಆಮ್ಲ ಆಂಟಿ ಆಕ್ಸಿಡೆಂಟ್​ ದೇಹಕ್ಕೆ ಸೇರುವ ಆಹಾರವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ.

ಯಾವುದಕ್ಕೆ ಫಲಕಾರಿ?

ಹುಣಸೆಯನ್ನು ನೆನಸಿಟ್ಟು ಕುಡಿಯುವುದರಿಂದ ದೇಹದಲ್ಲಿ ಕಾಣಿಸುವ ಅಸಿಡಿಟಿ, ಮಲಬದ್ಧತೆ ಹಾಗೂ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಚುರುಕಾಗಿಡಲು ಸಹಾಯ ಮಾಡುತ್ತದೆ. ಊಟ ಮಾಡಿದ ತಕ್ಷಣ ಹೊಟ್ಟೆ ಹುಬ್ಬವಂತೆ ಮಾಡೋದನ್ನು ತಡೆಯುತ್ತದೆ ಎನ್ನಲಾಗಿದೆ.

ಹುಣಸೆ ಹಣ್ಣಿನ ನೀರನ್ನು ತಯಾರಿಸೋದು ಹೇಗೆ?

ಹುಣಸೆ ಹಣ್ಣನ್ನು ನೆನಸಿಡಿ, ಅದು ಸಂಪೂರ್ಣವಾಗಿ ನೀರಿನಲ್ಲಿ ಒದ್ದೆಯಾದ ನಂತರ ಅದನ್ನು ಚೆನ್ನಾಗಿ ಹಿಂಡಿ ಮತ್ತಷ್ಟು ನೀರಿಗೆ ಬೆರಸಿ. ಇದರ ಜೊತೆಗೆ ಜೀರಿಗೆಯನ್ನು ಬೆರೆಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎನ್ನಲಾಗಿದೆ. ಇನ್ನು ಹುಣಸೆ ನೀರಿಗೆ ಕಪ್ಪು ಉಪ್ಪು ಸೇರಿಸಿ ಕುಡಿದರೆ ಇದು ಕರುಳಿನ ಒಳಪದರವನ್ನು ಸುರಕ್ಷಿತವಾಗಿ ಇರಿಸುತ್ತದೆ. ಪುದೀನವನ್ನು ಸಹ ಇದಕ್ಕೆ ಬೆರೆಸಬಹುದು ಎನ್ನುತ್ತಾರೆ ವೈದ್ಯರು.
ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಕುಡಿಯುವಾಗ ಜಾಗರೂಕವಾಗಿರಬೇಕು. ಏಕೆಂದರೆ ಇದರಲ್ಲಿರುವ ಆಮ್ಲೀಯರೆ ಸಮಸ್ಯೆಯನ್ನು ಉಂಟು ಮಾಡಬಹುದು ಅಥವಾ ಅಡ್ಡ ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು. ಹೀಗಾಗಿ ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿರುವವರು ಎಚ್ಚರಿಕೆವಹಿಸಬೇಕು ಎನ್ನಲಾಗಿದೆ, (ಏಜೆನ್ಸೀಸ್).
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net