Fridge Food Storage Rules: ಸಾಮಾನ್ಯ ಜನರು ಹಾಗೇ ಅಲ್ವ ಕೊಳೆಯದೇ ಆಹಾರ ಇರುತ್ತೆ ಅಂದ್ರೆ ಇದ್ದಬದ್ದ ಆಹಾರವನ್ನೆಲ್ಲ ಫ್ರಿಡ್ಜ್‌ನಲ್ಲಿ ಇಟ್ಟು, ಬೇಕಾದಾಗ ಅದನ್ನ ತೆಗೆದುಕೊಂಡು ಸೇವನೆ ಮಾಡ್ತಾರೆ. ಆದರೆ, ಯಾವ್ಯಾವುದೋ ರೋನಲ್ಲಿ ಯಾವುದೋ ಆಹಾರ ಇಡುವುದರಿಂದ ಬ್ಯಾಕ್ಟೀರಿಯಾಗಳು ಹರಡಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಫ್ರಿಡ್ಜ್‌ನಲ್ಲಿ ಆಹಾರವನ್ನು ಸುರಕ್ಷಿತವಾಗಿ ಸಂಗ್ರಹಿಸುವ ಕುರಿತು ಅತ್ಯಂತ ಪ್ರಮುಖ ಮಾರ್ಗಸೂಚಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.