Drishyam 3 OTTಗೆ ಲಗ್ಗೆ; ಕ್ರೈಂ ಥ್ರಿಲ್ಲರ್​​ ಸಿನಿಮಾ ಎಂದು, ಯಾವ ಫ್ಲಾಟ್​ಫಾರ್ಮ್​ನಲ್ಲಿ ನೋಡಬಹುದು?

 Drishyam 3 OTT Release Date
Drishyam 3 OTT Release Date
Published on

ಪ್ರಮುಖ ಮುಖ್ಯಾಂಶಗಳು

  • ಜೀತು ಜೋಸೆಫ್​ ನಿರ್ದೇಶನದ ದೃಶ್ಯಂ 3 ಸಿನಿಮಾ ಒಟಿಟಿಗೆ ಲಗ್ಗೆ
  • ಜೂನ್ 18 ರಿಂದ ಅಮೆಜಾನ್ ಪ್ರೈಮ್​ನಲ್ಲಿ ಸ್ಟ್ರೀಮಿಂಗ್ ಆಗಲಿರುವ ದೃಶ್ಯಂ 3 ಸಿನಿಮಾ
  • ನಟ ಮೋಹನ್​ ಲಾಲ್​, ನಟಿ ಮೀನಾ ಅಭಿನಯದ ಬ್ಲಾಕ್​ ಬ್ಲಸ್ಟರ್​ ಸಿನಿಮಾ ದೃಶ್ಯಂ3
Drishyam 3 OTT Release Date: ದೃಶ್ಯಂ1 ಮತ್ತು ದೃಶ್ಯಂ 2 ಸಿನಿಮಾ ಬ್ಯಾಕ್​ ಟು ಬ್ಯಾಕ್​ ಹಿಟ್ ಕೊಟ್ಟ ನಂತರ ಇತ್ತೀಚೆಗೆ ರಿಲೀಸ್​ ಆದ ದೃಶ್ಯಂ3 ಸಿನಿಮಾವನ್ನು ಥಿಯೇಟರ್​ನಲ್ಲಿ ನೋಡಲು ಸಾಧ್ಯವಾಗಿಲ್ಲ ಎಂದು ಪೆಚ್ಚುಮೊರೆ ಹಾಕಿ ಕುಳಿತ ಸಿನಿ ಪ್ರೇಮಿಗಳಿಗೆ ಗುಡ್​ನ್ಯೂಸ್​ವೊಂದು ಸಿಕ್ಕಿದೆ.
ಹೌದು, ಮಲಯಾಳಂನ ಕ್ರೈಂ ಥ್ರಿಲ್ಲರ್ ಫ್ರಾಂಚೈಸಿ​ ಸಿನಿಮಾ ದೃಶ್ಯಂ 3 ಇದೇ ಜೂನ್ 18 ರಿಂದ ಅಮೆಜಾನ್ ಪ್ರೈಮ್​ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಜೀತು ಜೋಸೆಫ್​ ಅವರು ಬರೆದು ನಿರ್ದೇಶಿರುವ ಈ ಥ್ರಿಲ್ಲರ್​ ಸಿನಿಮಾದಲ್ಲಿ ಮೋಹನ್​ ಲಾಲ್​, ಮೀನಾ ನಟಿಸಿದ್ದಾರೆ. ಅನ್ಸಿಬಾ ಹಸನ್, ಎಸ್ತರ್ ಅನಿಲ್, ಕಲಾಭವನ್ ಶಾಜೋನ್, ಸಿದ್ದಿಕ್, ಮುರಳಿ ಗೋಪಿ, ಮತ್ತು ಆಶಾ ಶರತ್ ಅನೇಕರು ಬಣ್ಣ ಹಚ್ಚಿದ್ದಾರೆ

ಯಾವ ಭಾಷೆಯಲ್ಲಿ ನೋಡಬಹುದು?

ಅಮೆಜಾನ್​ ಫ್ರೈಂ ನಲ್ಲಿ ರಿಲೀಸ್ ಆಗುತ್ತಿರುವ ಮಲಯಾಳಂನ ದೃಶ್ಯಂ3 ಸಿನಿಮಾವನ್ನು ತೆಲುಗು, ತಮಿಳು ಮತ್ತು ಕನ್ನಡದಲ್ಲಿ ನೋಡಬಹುದಾಗಿದೆ. ದಕ್ಷಿಣ ಭಾರತದ ಪ್ರೇಕ್ಷಕರ ಭಾಷೆ ಅರ್ಥವಾಗಲ್ಲ ಎನ್ನುವ ಚಿಂತೆ ತೊರೆದು, ತಮಗಿಷ್ಟವಾದ ಭಾಷೆಯಲ್ಲಿ ನೋಡಬಹುದಾಗಿದೆ.

ದೃಶ್ಯಂ3ರ ಕತೆ ಏನು?

ಮಗಳ ಭವಿಷ್ಯಕ್ಕೆ ಕೊಲೆಯನ್ನು ಮರೆ ಮಾಚಿದ್ದ ಜಾರ್ಜ್​ ಕುಟ್ಟಿ, ಮುಂಬರುವ ಹೊಸ ಸಮಸ್ಯೆಗಳನ್ನು ಪರಿಹರಿಸೋದು ಹೇಗೆ, ಕಾನೂನು ತೊಡಕನ್ನು ಮೀರಿ ಕುಟುಂಬವನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ. ಜೊತೆಗೆ ಮಗಳು ಅಂಜು ಮದುವೆಗಾಗಿ ಓಡಾಟ ನಡೆಸುವ ಬಗ್ಗೆಯೂ ಸಿನಿಮಾದಲ್ಲಿ ತರಲಾಗಿದೆ. ಈ ಮಧ್ಯೆ ಜಾರ್ಜ್​ ಕುಟ್ಟಿ ಪೊಲೀಸರಿಗೆ ಶರಣಾಗುತ್ತಾನಾ? ಅಥವಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಮತ್ತೊಂದು ಪ್ಲ್ಯಾನ್​ ಮಾಡುತ್ತಾನೆ ಎನ್ನುವುದೇ ಸಿನಿಮಾದ ರೋಚಕ ತಿರುವು. ಇದರ ಮುಂದುವರೆದ ಭಾಗ ದೃಶ್ಯಂ 4 ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ದೃಶ್ಯಂ1 ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ರಿಮೇಕ್​ ಆಗಿತ್ತು. ಕನ್ನಡದಲ್ಲಿ ಕ್ರೇಜಿ ಸ್ಟಾರ್​ ರವಿಚಂದ್ರನ್​​ ನಟಿಸಿದ್ದರೆ, ತೆಲುಗುನಲ್ಲಿ ವೆಂಕಟೇಶ್​ ತಂದೆಯಾಗಿ ನಟಿಸಿದ್ದರು. ಆದರೆ, ದೃಶ್ಯಂ3 ಸಹ ರಿಮೇಕ್​ ಆಗಲಿದೆಯಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net