ಆ ನಂತರ ಖುದ್ದಾಗಿ ತಾವೇ ವಿಡಿಯೋ ಮಾಡಿ ನಾನು ಬದುಕಿದ್ದೇನೆ. ಸತ್ತಿಲ್ಲ, ಆರೋಗ್ಯವಾಗಿದ್ದೇನೆ, ಮುಂಜಾನೆಯಿಂದ ಸಾಕಷ್ಟು ಕರೆಗಳು ಬಂದಿದ್ದವರು ಎಂದು ಮಾತನಾಡಿದ್ದರು. ಯಾರೋ ಅವಿವೇಕಿಗಳು ನಾನು ನಿಧನವಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಅದು ಶುದ್ದ ಸುಳ್ಳು, ನಾನು ಆರೋಗ್ಯವಾಗಿದ್ದೇನೆ ಎಂದಿದ್ದರು. ಸುಳ್ಳು ಸುದ್ದಿ ಹಬ್ಬಿಸಿದವರನ್ನು ಸುಮ್ಮನೆ ಬಿಡಬಾರದು ಎಂದಿದ್ದರು. ಅದರಂತೆ ದೂರು ನೀಡಿದ್ದಾರೆ.