'ಮದುವೆಯಾಗಲು ಇಷ್ಟವಿಲ್ಲದಿದ್ದರೂ, ತಾಯಿಯಾಗುವ ಆಸೆ ಇದೆ': ಹಳೇ ಹೇಳಿಕೆಗೆ ಹೊಸ ಟ್ವಿಸ್ಟ್ ಕೊಟ್ಟ ನಟಿ Aishwarya Lekshmi
Aishwarya Lekshmi marriage statement
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಾನು ಎಂದಿಗೂ ಮದುವೆಯಾಗಲ್ಲ ಎಂದು ಹೇಳಿದ್ದ ಬಹುಭಾಷಾ ನಟಿ ಐಶ್ವರ್ಯ ಲಕ್ಷ್ಮಿ
ತಾಯಿಯಾಗುವ ಆಸೆ ಇದೆ, ತಾಯ್ತನದ ಬಗ್ಗೆ ಗೌರವ ಇದೆ ಎಂದು ಬಹಿರಂಗಪಡಿಸಿದ ನಟಿ.
ಮದುವೆಯ ಕಟ್ಟುಪಾಡುಗಳ ಬಗ್ಗೆ ನಟಿ ವ್ಯಕ್ತಪಡಿಸಿದ ಮುಕ್ತ ಅಭಿಪ್ರಾಯ.
Aishwarya Lekshmi marriage statementತಮ್ಮ ಸುತ್ತಮುತ್ತ ಡಿವೋರ್ಸ್ ಪ್ರಕರಣ, ಜಗಳ, ದಾಂಪತ್ಯದಲ್ಲಿ ರಾಜಿಯಾಗೋ ವಿಚಾರಗಳನ್ನು ಕಂಡ ನಟಿ ಐಶ್ವರ್ಯ ಲಕ್ಷ್ಮಿ ಮದುವೆಯಾಗೋದೆ ಬೇಡ ಎಂದು ನಿರ್ಧರಿಸಿದ್ದೇನೆ ಎಂದು ಈ ಹಿಂದೆ ಹೇಳಿದ್ದರು. ಮದುವೆ ನಮ್ಮ ಗುರಿಗಳನ್ನು ಹಿಂದೆಯಿಡುತ್ತದೆ ಎಂದು ಹೇಳಿದ್ದರು. ಸದ್ಯ ಇತ್ತೀಚೆಗೆ ತಮ್ಮ ಸಿನಿಮಾ ಪ್ರಚಾರದ ವೇಳೆ ತಾಯಿಯಾಗುವ ಆಸೆಯಿದೆ ಎಂದು ಹೇಳಿರುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಮದುವೆ ಬಗ್ಗೆ ಐಶ್ವರ್ಯಾ ಹೇಳಿದ್ದೇನು?
ಮದುವೆಯಾದನಂತರ ವೃತ್ತಿಪರ ಕೆಲಸದಲ್ಲಿ ಅನೇಕರು ಸಮಸ್ಯೆಯನ್ನು ಎದುರಿಸುತ್ತಾರೆ. ಗುರಿಯನ್ನು ಸಾಧಿಸದೆ ಹಿಂದೆ ಬೀಳುತ್ತಾರೆ. ಹೀಗಾಗಿ ಮದುವೆ ಜೀವನ ಎನ್ನುವ ಹಳೆಯ ಮನಸ್ಥಿತಿ ಬಿಟ್ಟಿದ್ದೇನೆ. ಲಿವ್ ಇನ್ ಸಂಬಂಧ ನಂಬುತ್ತೇನೆ. ಸಂಬಂಧ ಕಾಪಾಡಕೊಳ್ಳಲು ಮದುವೆಯೇ ಅಗತ್ಯ ಅಲ್ಲ ಎಂದಿದ್ದರು.
ಈ ಮಧ್ಯೆ ವಿಷ್ಣು ವಿಶಾಲ್ ನಟನೆಯ ಗಟ್ಟಾ ಕುಸ್ತಿ 2 ಸಿನಿಮಾದಲ್ಲಿ ಐಶ್ವರ್ಯಾ ಅವರು ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ಇದು ಜುಲೈ 3ರಂದು ರಿಲೀಸ್ ಆಗಲು ಸಜ್ಜಾಗಿದೆ. ಚೆಲ್ಲಾ ಅಯ್ಯವು ಸಿನಿಮಾ ನಿರ್ದೇಶಕರಾಗಿದ್ದು, ನಿರ್ಮಾಪಕ ಹಾಗೂ ನಟನಾಗಿ ವಿಷ್ಣು ವಿಶಾಲ್ ಮಿಂಚಿದ್ದಾರೆ. ಈ ಸಿನಿಮಾ ಪ್ರಚಾರದ ವೇಳೆ ಐಶ್ವರ್ಯ ಲಕ್ಷ್ಮಿ ಮಾತನಾಡಿರುವ ವಿಡಿಯೋ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ತಮ್ಮ ಹಿಂದಿನ ಹೇಳಿಕೆಯ ಬಗ್ಗೆ ಈಗ ಮತ್ತಷ್ಟು ಮಾತನಾಡಿದ ನಟಿ, ಮದುವೆಯ ಮೇಲೆ ನಂಬಿಕೆ ಇಲ್ಲದಿದ್ದರೂ, ತಾಯ್ತನದ ಬಗ್ಗೆ ಅಪಾರ ಗೌರವ ಮತ್ತು ಆಸೆಯಿದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಐಶ್ವರ್ಯ ಲಕ್ಷ್ಮಿ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ನಾನು ಮಗುವನ್ನು ಹೊಂದಲು ಬಯಸಿದರೆ, ಕನಿಷ್ಠಪಕ್ಷ ಆತ ಒಬ್ಬ ಒಳ್ಳೆಯ ತಂದೆಯಾಗಬಲ್ಲ ಎಂದು ನಾನು ನಂಬಬಹುದಾದ ವ್ಯಕ್ತಿಯೊಂದಿಗೆ ಇರಲು ಇಷ್ಟಪಡುತ್ತೇನೆ. ನಾನು ಒಬ್ಬ ವ್ಯಕ್ತಿಯಾಗಿ ಬದಲಾಗಿದ್ದೇನೆ. ಈಗ ನಾನು ಮಗುವನ್ನು ಹೊಂದಲು ಯಾರೊಂದಿಗಾದರೂ ಕಾನೂನಾತ್ಮಕ ಒಪ್ಪಂದವನ್ನು ಮಾಡಿಕೊಳ್ಳಲು ಬಯಸುತ್ತೇನೆ."
ಸಮಾಜ ಸ್ವೀಕರಿಸಲ್ಲ ಗೊತ್ತಿದೆ,,,
ಮದುವೆ ಮಹಿಳೆಯರ ಮೇಲೆ ಹಲವು ಕಟ್ಟುಪಾಡನ್ನು ಹೇರುತ್ತದೆ. ಜವಾಬ್ದಾರಿಯನ್ನು ನೀಡುತ್ತದೆ. ಮಗುವನ್ನು ಸಾಕುವುದು, ತಾಯಿಯಾಗುವುದು ಅದೊಂದು ವಿಸ್ಮಯಕಾರಿ ಅನುಭವ. ಮದುವೆಯಾಗದೆ ತಾಯಿಯಾಗುತ್ತಾರೆ ಎಂದರೆ ಅವರನ್ನು ಸಮಾಜ ಸ್ವೀಕರಿಸೋದಿಲ್ಲ. ಈ ವಿಚಾರದ ಬಗ್ಗೆ ನನಗೆ ಅರಿವಿದೆ, ಆದರೆ ನನ್ನ ಯೋಜನೆಗಳು ಹಾಗೂ ಆಲೋಚನೆಗಳ ಬಗ್ಗೆ ನನಗೆ ಸ್ಪಷ್ಟವಾಗಿ ಗೊತ್ತಿದೆ ಎಂದು ಹೇಳಿದರು.
ಐಶ್ವರ್ಯಾ ಸಿನಿ ಜರ್ನಿ
ಐಶ್ವರ್ಯ ಲಕ್ಷ್ಮಿ ಅವರು 'ಪೊನ್ನಿಯಿನ್ ಸೆಲ್ವನ್', ಕಿಂಗ್ ಆಫ್ ಕೋಥಾ, ಮಾಮನ್, ಅಮ್ಮು, ಮಾಯಾನದಿ, ಹೆಲೋ ಮಮ್ಮಿ, ಜಗಮೇ ತಂದಿರಂ, ಕುಮಾರಿ ಸೇರಿದಂತೆ ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ನಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್).