ಬೈಂದೂರು: ತಾಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಬಡಾಕೆರೆ ಗ್ರಾಮದಲ್ಲಿ 300 ವರ್ಷ ಹಳೇ ಬೃಹತ್ ಗಾತ್ರದ ಅರಳಿ ಮರದ ಗೆಲ್ಲುಗಳು ಬುಧವಾರ ರಾತ್ರಿ ಧರೆಗೆ ಉರುಳಿದೆ.
ಇದರಿಂದ ಕೆಲವು ಸಮಯ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ಗ್ರಾಮದಲ್ಲಿ ಸಂಪೂರ್ಣವಾಗಿ ವಿದ್ಯುತ್ ಕೂಡ ಸ್ಥಗಿತಗೊಂಡಿದೆ. ಇದರಿಂದ ಗ್ರಾಮಸ್ಥರ ಮನವಿ ಮೇರೆಗೆ ಲೈನ್‌ಮನ್ ಆನಂದ, ಲಕ್ಷ್ಮಣ, ಕುಂದಾಪುರ ಉಪ ಅರಣ್ಯ ಅಧಿಕಾರಿ ದಿಲೀಪ್, ಅರಣ್ಯಪಾಲಕ ರಾಮಪ್ಪ ದಸ್ತು, ಸುಧಾಕರ್ ದೇವಾಡಿಗ ಅವರ ತಂಡ 3 ಗಂಟೆ ಕಾರ್ಯಾಚರಣೆ ನಂತರ ವಿದ್ಯುತ್ ಸಂಪರ್ಕ ಸುಗಮವಾಯಿತು.