

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿರಿಸಿದ್ದು, ಸಾರಿಗೆ ಸಂಚಾರ ಬೆಳಗ್ಗೆಯಿಂದಲೇ ಅಸ್ತವ್ಯಸ್ತವಾಗಿದೆ. ಜನಾಕ್ರೋಶ ಸಾರಿಗೆ ನೌಕರರಿಗೆ ಮುಷ್ಕರಕ್ಕೆ ಕುಮ್ಮಕ್ಕು ನೀಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಿರುಗಿದೆ. ಈ ಭಾನುವಾರ ರಾತ್ರಿಯೇ ಎಐಟಿಯುಸಿ ಮುಷ್ಕರದಿಂದ ಹಿಂದೆ ಸರಿದಿದ್ದು. ಕೆಲವೆಡೆ ಬಸ್ ಸಂಚಾರ ಆರಂಭವಾಗಿದೆ.
ಜನಾಕ್ರೋಶಕ್ಕೆ ಬೆದರಿದ ಕೋಡಿಹಳ್ಳಿ ಚಂದ್ರಶೇಖರ್ ಸೋಮವಾರ ಬೆಳಗ್ಗೆ 8 ಮುಷ್ಕರದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ. ದಿಢೀರ್ ಯಾಕೆ ಈ ನಿರ್ಧಾರ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕ ಹಿತ ಮುಖ್ಯ ಎಂದು ಪದೇಪದೇ ಹೇಳುತ್ತ ಬೆಳಗ್ಗೆ 11 ಗಂಟೆ ಫ್ರೀಡಂ ಪಾರ್ಕ್ನಲ್ಲಿ ಅಧಿಕೃತವಾಗಿ ಘೋಷಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಷ್ಕರದಿಂದಾಗಿ ಸಾರಿಗೆ ನೌಕರರಿಗೆ ಏನಾದರೂ ಲಾಭವಾಯಿತಾ? ಅವರಿಗೆ ಸಿಕ್ಕ ಪ್ರತಿಫಲವೇನು ಎಂಬ ಪ್ರಶ್ನೆಗೆ ತಡಬಡಾಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಮುಷ್ಕರ ಮಾಡಿದ ತತ್ಕ್ಷಣ ಆಸೆಗಳೆಲ್ಲಾ ಈಡೇರುವುದೆಂದು ಹೇಳಲಾಗದು. ಒಂದಷ್ಟು ವಿಷಯಗಳಲ್ಲಿ ಮುನ್ನಡೆಯಾಗಿದೆ. ಕೆಲವು ವಿಷಯಗಳಲ್ಲ ನಿರಾಸೆಯಾಗಿದೆ. ಆಸೆ, ನಿರಾಸೆಗಳೆರಡೂ ಸಾಮಾನ್ಯ ಎಂದು ತೇಪೆಹೆಚ್ಚುವ ಪ್ರಯತ್ನ ಮಾಡಿದರು. (ದಿಗ್ವಿಜಯ ನ್ಯೂಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..