ಡಿಸಿಎಂ ಸವದಿಯವರ ತವರು ಜಿಲ್ಲೆ ಬೆಳಗಾವಿಯಲ್ಲೂ ಸಾರಿಗೆ ನೌಕರರ ಮುಷ್ಕರ

Belagavi Transport workers strike 1
Published on

ಬೆಳಗಾವಿ : ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ನೌಕರರನ್ನು ಸರ್ಕಾರಿ ನೌಕರರೆಂದು ಪರಗಣಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆಯಲ್ಲೂ ಇದೀಗ ಸಾರಿಗೆ ನೌಕರರು ಬಸ್ ಸಂಚಾರ ನಿಲ್ಲಿಸಿ, ದಿಢೀರ್ ಮುಷ್ಕರ ಆರಂಭಿಸಿದ್ದಾರೆ.

ಬೆಳಗಾವಿಯ ನಗರ ಸಾರಿಗೆ,ಮತ್ತು ಕೇಂದ್ರ ಬಸ್ ನಿಲ್ಧಾಣದಲ್ಲಿ ,ಹಾಗೂ ನಗರದ ಎಲ್ಲ ಡಿಪೋಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ನೌಕರರು ಕರ್ತವ್ಯ ನಿಲ್ಲಿಸಿ, ಹೋರಾಟಕ್ಕಿಳಿದಿದ್ದಾರೆ. ನೌಕರರ ಮುಷ್ಕರದಿಂದಾಗಿ ಸಿಟಿ ಬಸ್ ಮತ್ತು,ಬೆಳಗಾವಿಯಿಂದ ಹೊರಗಡೆ ಹೋಗುವ ಎಲ್ಲ ಬಸ್ ಸಂಚಾರ ಸ್ಥಗಿತಗೊಂಡಿದೆ‌.

ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಸಾವಿರಾರು ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಸರ್ಕಾರ ಕೂಡಲೇ ಸಾರಿಗೆ ಇಲಾಖೆಯ ನೌಕರರನ್ನು ಸರ್ಕಾರಿ ಇಲಾಖೆಯ ನೌಕರರೆಂದು ಪರಗಣಿಸಿ ಎಲ್ಲ ಸವಲತ್ತುಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net