ಹವಾಮಾನ ಬದಲಾವಣೆ ಅರಿವು ಅಗತ್ಯ : ಲೈನಾ ಲಸ್ರಾದೊ ಸಲಹೆ

training camp
ಹವಾಮಾನ ಬದಲಾವಣೆ ಕುರಿತ ತರಬೇತಿ ಕಾರ್ಯಕ್ರಮ ಕ್ರಾಸ್ ಸಂಸ್ಥೆ ಬೆಂಗಳೂರು ರಾಜ್ಯ ಸಂಯೋಜಕಿ ಲೈನಾ ಲಸ್ರಾದೊ ಉದ್ಘಾಟಿಸಿದರು. ಡಿಕೆಆರ್‌ಡಿಎಸ್ ಸಂಸ್ಥೆ ನಿರ್ದೇಶಕ ಬಿನೋಯಿ ಎ.ಜೆ., ಮಾನಿನಿ ಮಹಿಳಾ ರಾಜ್ಯ ಒಕ್ಕೂಟದ ಅಧ್ಯಕ್ಷೆ ಮಂಜುಳಾ, ವನ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಪರಿಸರ ಸಂರಕ್ಷಣೆ ಅಧಿಕಾರಿ ಭುವನ್ ಹಾಗೂ ಸದಸ್ಯರಾದ ಗಣೇಶ್ ಮತ್ತಿತರರು ಇದ್ದರು.
Published on

ಬೆಳ್ತಂಗಡಿ: ಹವಾಮಾನ ಬದಲಾವಣೆ ಇತ್ತೀಚೆಗೆ ನಮ್ಮನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ, ಇದರ ಬಗ್ಗೆ ಅರಿವು ಪಡೆಯುವುದು ಅತ್ಯಗತ್ಯ ಎಂದು ಕ್ರಾಸ್ ಸಂಸ್ಥೆ ಬೆಂಗಳೂರು ರಾಜ್ಯ ಸಂಯೋಜಕಿ ಲೈನಾ ಲಸ್ರಾದೊ ಹೇಳಿದರು.

ಬುಧವಾರ ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ಹಾಗೂ ಡಿಕೆಆರ್‌ಡಿಎಸ್ ಬೆಳ್ತಂಗಡಿ ನೇತೃತ್ವದಲ್ಲಿ, ಸಿ.ಒ.ಡಿ.ಪಿ ಮಂಗಳೂರು, ಕಿಡ್ಸ್ ಪುತ್ತೂರು ಹಾಗೂ ಸಂಪದ ಉಡುಪಿ ಸಹಕಾರದಿಂದ ಕ್ಲಸ್ಟರ್ ಮಟ್ಟದ ಹವಾಮಾನ ಬದಲಾವಣೆ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಿಕೆಆರ್‌ಡಿಎಸ್ ಸಂಸ್ಥೆ ನಿರ್ದೇಶಕ ಬಿನೋಯಿ ಎ.ಜೆ. ಪ್ರಾಸ್ತಾವಿಸಿ. ಸಂಪನ್ಮೂಲ ವ್ಯಕ್ತಿಗಳಾಗಿ ವನ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಪರಿಸರ ಸಂರಕ್ಷಣೆ ಅಧಿಕಾರಿ ಭುವನ್ ಹಾಗೂ ಸದಸ್ಯರಾದ ಗಣೇಶ್ ಹವಾಮಾನ ಬದಲಾವಣೆ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ತರಬೇತಿ ನೀಡಿದರು.

ಮಾನಿನಿ ಮಹಿಳಾ ರಾಜ್ಯ ಒಕ್ಕೂಟದ ಅಧ್ಯಕ್ಷೆ ಮಂಜುಳಾ, ಸಿ.ಒ.ಡಿ.ಪಿ, ಕಿಡ್ಸ್ ಮತ್ತು ಸಂಪದ ಸಂಸ್ಥೆ ಒಕ್ಕೂಟ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಡಿಕೆಆರ್‌ಡಿಎಸ್ ಕಾರ್ಯಕರ್ತೆ ಸುಶೀಲಾ ಸ್ವಾಗತಿಸಿ. ಮಾರ್ಕ್ ಡಿ ಸೋಜ ವಂದಿಸಿ, ಸಂಯೋಜಕಿ ಸಿಸಿಲ್ಯಾ ತಾವ್ರೊ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 42 ಮಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net