More

  ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಿತ್ತುಕೊಂಡವನಿಗೆ 4 ತಿಂಗಳು ಜೈಲು ಶಿಕ್ಷೆ

  ರಾಣೆಬೆನ್ನೂರ: ಚಲಿಸುವ ರೈಲಿನಲ್ಲಿ ಮಹಿಳೆಯ ಬ್ಯಾಗ್‌ಅನ್ನು ಬಲವಂತವಾಗಿ ಕಿತ್ತುಕೊಂಡ ಅಪರಾಧಿಗೆ 4 ತಿಂಗಳು ಜೈಲು ಶಿಕ್ಷೆ ಮತ್ತು 3 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ 1ನೇ ಜೆಎಂಎಫ್‌ಸಿ ನ್ಯಾಯಾಧೀಶೆ ಅನಿತಾ ಒ.ಎ. ಬುಧವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
  ದಾವಣಗೆರೆ ನಿವಾಸಿ ದೇಶ್ಯಾನಾಯಕ ಠಾಕ್ರಾ ನಾಯಕ (45) ಶಿಕ್ಷೆಗೊಳಗಾದ ಅಪರಾಧಿ.
  ಈತ 2018ರಲ್ಲಿ ಬೆಂಗಳೂರು-ಕೊಲ್ಲಾಪುರ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿನಲ್ಲಿ ಚಳಗೇರಿ-ರಾಣೆಬೆನ್ನೂರ ಮಧ್ಯೆದಲ್ಲಿ ಮಹಿಳೆಯ ಬ್ಯಾಗ್‌ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ. ಈ ಕುರಿತು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
  ಸಾಕ್ಷಾೃಧಾರ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕ ಪ್ರಶಾಂತ ಯಲಿಗಾರ ವಾದ ಮಂಡಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts