ಪುತ್ತೂರು: ಮಂಗಳೂರು-ಬೆಂಗಳೂರು ರೈಲ್ವೆ ಹಳಿ ಮೇಲೆ ಎರಡು ಕಡೆ ಗುಡ್ಡ ಕುಸಿದು ಮೂರು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಶುಕ್ರವಾರ ರಾತ್ರಿ ಸುಮಾರು ೧.೩೦ರ ಸುಮಾರಿಗೆ ಮುರುಡೇಶ್ವರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸುಬ್ರಹಣ್ಯ ರೋಡ್ ಕಡೆ ಹೊರಟಿತ್ತು. ಕಣ್ಣೂರು-ಕೆ.ಎಸ್.ಆರ್.ಬೆಂಗಳೂರು ಎಕ್ಸ್‌ಪ್ರೆಸ್ ಕಬಕ ಪುತ್ತೂರು ಕಡೆಗೆ ಹೊರಟಿತ್ತು. ಪಂಚಗಂಗಾ ಎಕ್ಸ್‌ಪ್ರೆಸ್ ಬಂಟ್ವಾಳದಿಂದ ಹೊರಟಿತ್ತು. ಎರಡು ತಾಸು ಪಡೀಲ್ ಸ್ಟೇಷನ್‌ನಲ್ಲಿ ನಿಂತಿದ್ದು, ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬೆಳಗ್ಗೆ ೪ಕ್ಕೆ ಸಂಚರಿಸಬೇಕಾದ ರೈಲು ಸುಮಾರು ೨ ತಾಸು ತಡವಾಗಿದೆ.