ಅಪಘಾತ ಪ್ರಕರಣದ ಕಾರು ಬಿಡಿಸಿಕೊಳ್ಳಲು ಲಂಚಕ್ಕೆ ಬೇಡಿಕೆ ಸಂಚಾರಿ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ತಸ್ಲೀಂ ಲೋಕಾ ಬಲೆಗೆ

mng--10 julY Thaslim
Published on

ಮಂಗಳೂರು: ಕಾರು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿ ಕಾರನ್ನು ಠಾಣೆಯಿಂದ ಬಿಡಿಸಿಕೊಳ್ಳಲು ಲಂಚದ ಬೇಡಿಕೆ ಇಟ್ಟ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಸ್ಲೀಂ ಲೋಕಾಯುಕ್ತ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ದೂರುದಾರರ ಕಾರು ಮತ್ತು ಸ್ಕೂಟರ್ ಮದ್ಯೆ ನಂತೂರು ಸರ್ಕಲ್‌ನಲ್ಲಿ ಅಪಘಾತ ಆಗಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ತಸ್ಲೀಂ ಕಾರಿನ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ತಿಳಿಸಿದಂತೆ ಕಾರಿನ ಮಾಲೀಕ ದಾಖಲಾತಿಗಳನ್ನು ಪೊಲೀಸ್ ಠಾಣೆಗೆ ನೀಡಿದ್ದರು. ಆದರೆ ಬಳಿಕ ಕಾರು ಬಿಡಿಸಿಕೊಳ್ಳಲು 50 ಸಾವಿರ ಲಂಚ ನೀಡುವಂತೆ ತಸ್ಲೀಂ ಒತ್ತಾಯಿಸಿದ್ದ.

ಈ ವಿಷಯವನ್ನು ದೂರುದಾರರು ತಮ್ಮ ವಕೀಲರಲ್ಲಿ ತಿಳಿಸಿ, ಅವರು ಠಾಣೆಗೆ ಭೇಟಿ ನೀಡಿ ಕಾರನ್ನು ಬಿಟ್ಟು ಕೊಡುವಂತೆ ಕೇಳಿದ್ದಾರೆ. ಆಗ ದೂರುದಾರರು ಕಾರು ಸ್ವೀಕರಿಸಿದ್ದಾರೆ ಎಂದು ಸಹಿ ಪಡೆದು ಕಾರನ್ನು ಠಾಣೆಯಿಂದ ಬಿಟ್ಟು ಕೊಟ್ಟಿಲ್ಲ. ಬಳಿಕ ಕಾರನ್ನು ಬಿಟ್ಟು ಕೊಡಲು ದೂರುದಾರರ ಮೊಬೈಲನ್ನು ಬಲವಂತವಾಗಿ ಪಡೆದು ಕಾರನ್ನು ಬಿಟ್ಟು ಕಳುಹಿಸಿದ್ದರು.

ಮೊಬೈಲನ್ನು ಹಿಂತಿರುಗಿಸುವಂತೆ ತಸ್ಲೀಂ ಜತೆ ಕೇಳಿದಾಗ 50 ಸಾವಿರ ರೂ. ಲಂಚ ನೀಡಿದರೆ ಮೊಬೈಲ್ ಹಿಂತಿರುಗಿಸುತ್ತೇನೆ. ಒರಿಜನಲ್ ಲೈಸೆನ್ಸ್ ತಂದು ಕೊಡುವಂತೆ ತಸ್ಲೀಂ ತಿಳಿಸಿದ್ದ. ಅದರಂತೆ ದೂರುದಾರರು ಒರಿಜಿನಲ್ ಲೈಸೆನ್ಸ್ ನೀಡಿದ್ದರು.

ತಸ್ಲೀಂ ಠಾಣೆಯ ಇನ್ನೋರ್ವ ಹೆಡ್‌ಕಾನ್‌ಸ್ಟೇಬಲ್ ವಿನೋದ್ ಅವರ ಮೂಲಕ 30 ಸಾವಿರ ರೂ.ಕೊಟ್ಟು ಒರಿಜಿನಲ್ ಲೈಸೆನ್ಸ್ ಪಡೆದುಕೊಂಡು ಹೋಗಲು ತಿಳಿಸಿದ್ದು, ದೂರುದಾರರು ಕದ್ರಿ ಸಂಚಾರ ಠಾಣೆಗೆ ಭೇಟಿ ನೀಡಿ ತಸ್ಲೀಂನನ್ನು ಭೇಟಿ ಮಾಡಿದಾಗ ಒರಿಜಿನಲ್ ಲೈಸೆನ್ಸ್ ಹಿಂತಿರುಗಿಸಲು 30 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಒರಿಜಿನಲ್ ಲೈಸೆನ್ಸ್ ಹಿಂತಿರುಗಿಸಲು 10 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದ. ಈ ಬಗ್ಗೆ ದೂರುದಾರರು 500 ರೂ. ಮಾತ್ರ ಇದೆ ಎಂದಾಗ 5 ಸಾವಿರ ಇಲ್ಲದೆ ಠಾಣೆ ಕಡೆಗೆ ಬರಬೇಡ ಎಂದು ಬೈದು ಕಳುಹಿಸಿದ್ದ. ದೂರುದಾರರು ಕಡಿಮೆ ಮಾಡಿ ಎಂದು ಹೇಳಿರುವುದಕ್ಕೆ 5000 ರೂ. ಲಂಚ ಪಡಯುತ್ತಿದ್ದಾಗ ಲೋಕಾದ್ದಿದ್ದಾನೆ.

ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ತಸ್ಲೀಂ ಮತ್ತು ವಿನೋದ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕ ಭಾರತಿ ಜಿ, ಚಂದ್ರಶೇಖರ್ ಕೆ.ಎನ್. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net