

Traffic Challan: ಗೌರಿ-ಗಣೇಶ ಹಬ್ಬಕ್ಕೆ ಒಂದು ವಾರ ಬಾಕಿ ಉಳಿದಿರುವಾಗಲೇ ರಾಜ್ಯದ ವಾಹನ ಸವಾರರಿಗೆ ಬಂಪರ್ ಆಫರ್ ಘೋಷಿಸಲಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ, ಸಾಕಷ್ಟು ದಂಡವನ್ನು ತಮ್ಮ ವಾಹನದ ಸಂಖ್ಯೆಗೆ ಸೇರಿಸಿಕೊಂಡಿರುವ ವಾಹನ ಮಾಲೀಕರಿಗೆ ಇದೀಗ ಮತ್ತೇ ಶೇ.50ರಷ್ಟು ದಂಡ ರಿಯಾಯಿತಿ ಪಾವತಿಗೆ ರಾಜ್ಯ ಸಾರಿಗೆ ಇಲಾಖೆ ಅನುಕೂಲ ಮಾಡಿಕೊಟ್ಟಿದೆ.
ಈ ಹಿಂದೆ ಸಾರಿಗೆ ಇಲಾಖೆ ಇದೇ ರೀತಿ ಶೇ.50ರಷ್ಟು ರಿಯಾಯಿತಿಯನ್ನು ನೀಡಿತ್ತು. ಆದರೆ, ಕೊನೆ ದಿನ ಶೀಘ್ರವೇ ಅಂತ್ಯಗೊಂಡ ಹಿನ್ನೆಲೆ ಹಲವರು ಬಂಪರ್ ಆಫರ್ ಅನ್ನು ಕಳೆದುಕೊಂಡರು. ಆದರೀಗ, ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಶೇ.50 ರಷ್ಟು ದಂಡ ಪಾವತಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಟ್ಟಿರುವುದು ಸದ್ಯ ವಾಹನ ಮಾಲೀಕರಿಗೆ ನಿಜಕ್ಕೂ ಸಿಹಿ ವಿಷಯವಾಗಿದೆ.
ಇದೇ ಆಗಸ್ಟ್ 23ರಿಂದ ಸೆಪ್ಟೆಂಬರ್ 12 ರವರೆಗೆ ಶೇ.50 ರಷ್ಟು ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಈ ದಿನ ಅಂತ್ಯಗೊಳ್ಳುತ್ತಿದ್ದಂತೆ ಆಫರ್ ಮುಕ್ತಾಯಗೊಳ್ಳಲಿದೆ ಎಂದು ರಾಜ್ಯ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಮಾಹಿತಿ ನೀಡಿದ್ದಾರೆ.