More

    ಸಿಎಂ ತವರು ಕ್ಷೇತ್ರದಲ್ಲಿ ಬಿಕ್ಕಿಬಿಕ್ಕಿ ಅತ್ತ ವ್ಯಾಪಾರಿಗಳು; ಅಧಿಕಾರಿಗಳ ಎದುರು ಕಣ್ಣೀರು..

    ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ವ್ಯಾಪಾರಿಗಳು ಬಿಕ್ಕಿಬಿಕ್ಕಿ ಅತ್ತಿದ್ದು, ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ವ್ಯಾಪಾರಿಗಳು ಹೀಗೆ ಅತ್ತು ಅಲವತ್ತುಕೊಳ್ಳಲು ಕಾರಣ ಕೋವಿಡ್​ ನಿರ್ಬಂಧ.

    ಕರೊನಾ ಪರಿಸ್ಥಿತಿ ನಿರ್ವಹಣೆ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಾರಿಯಾಗಿರುವ ನಿರ್ಬಂಧದಿಂದಾಗಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದ ಜಾತ್ರೆ ಕೂಡ ರದ್ದುಗೊಂಡಿದೆ. ನಿನ್ನೆಯಷ್ಟೇ ಆರಂಭಗೊಂಡಿದ್ದ ಇಲ್ಲಿನ ಐತಿಹಾಸಿಕ ತೋಪಿನ ದುರ್ಗಾದೇವಿ ಜಾತ್ರೆಯನ್ನು ಅಧಿಕಾರಿಗಳು ರದ್ದುಪಡಿಸಿದ್ದಾರೆ.

    ಇದನ್ನೂ ಓದಿ: ಹತ್ತು ದಿನಗಳ ಬಳಿಕ ಮತ್ತೊಂದು ಆಂಜನೇಯ ದೇವಸ್ಥಾನಕ್ಕೆ ಬೆಳ್ಳಿ ಗದೆ ಕೊಟ್ಟ ಮುಖ್ಯಮಂತ್ರಿ!

    ಎಂಟು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುತ್ತಿದ್ದ ಜಾತ್ರೆಗೆ ನಿನ್ನೆ ತಾನೇ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿತ್ತು. ಆದರೆ ಕೋವಿಡ್​ ಮಾರ್ಗಸೂಚಿ ಅನ್ವಯ ಕೇವಲ ಧಾರ್ಮಿಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗಿದೆ.

    ಇದನ್ನೂ ಓದಿ: ಒಂದೂವರೆ ಸಾವಿರ ರೂಪಾಯಿ ವಿಚಾರ, 13 ಜನರು ಒಟ್ಟಾಗಿ ಒಬ್ಬನ ಕೊಂದರು; ಲಾಂಗು-ಮಚ್ಚಿನಿಂದ ಕೊಚ್ಚಿ ಕೊಲೆ..

    ನಿನ್ನೆ ಸಂಜೆಯೇ ಸರ್ಕಾರ ಹೊಸ ನಿರ್ಬಂಧ ಜಾರಿ ಮಾಡಿದ ಹಿನ್ನೆಲೆಯಲ್ಲಿ ಇಂದು ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು, ಜಾತ್ರಾ ಸಮಿತಿಯವರು ಜಾತ್ರೆ ಬಂದ್ ಘೋಷಿಸಿದರು. ಇದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದೂ ನಡೆಯಿತು.

    ಇದನ್ನೂ ಓದಿ: ಹೆಜ್ಜೇನು ನೊಣಗಳ ಕಡಿತಕ್ಕೆ ನಿವೃತ್ತ ಅಧಿಕಾರಿ ಬಲಿ; ವಾಹನ ಪೂಜೆ ಮಾಡುತ್ತಿದ್ದಾಗ ದಾಳಿ…

    ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ದೂರದ ಊರುಗಳಿಂದ ಬಂದಿದ್ದೇವೆ. ಈಗ ದಿಢೀರನೆ ಜಾತ್ರೆ ರದ್ದು ಮಾಡಿದರೆ ನಾವೇನು ಮಾಡಬೇಕು? ದಯವಿಟ್ಟು ಜಾತ್ರೆಯಲ್ಲಿ ವ್ಯಾಪಾರ ನಡೆಸಲಿಕ್ಕೆ ಅವಕಾಶ ಮಾಡಿ ಎಂದು ಗೋಗರೆದ ವ್ಯಾಪಾರಸ್ಥರು, ಅಧಿಕಾರಿಗಳು ಇದಕ್ಕೆ ಒಪ್ಪದಿದ್ದಾಗ ಸಭೆಯಲ್ಲೆ ಕಣ್ಣೀರು ಹಾಕಿದರು. ಕೆಲವರಂತೂ ಬಿಕ್ಕಿಬಿಕ್ಕಿ ಅತ್ತರು.

    ‘ಕಮಾನ್ ಕಮಾನ್..’ ಎಂದು ಉಪೇಂದ್ರಗೆ ನೆನಪಿನ ಬಾಣ ಬಿಟ್ಟ ‘ಕಾಮಣ್ಣ’! ; ಅನಂತನ ಅವಾಂತರ ಮತ್ತು ಆ ಅವತಾರ…

    ರೂಪಾಂತರಿಯಿಂದ ಸಾವಿಲ್ಲ ಎಂಬುದರ ನಡುವೆಯೇ ಆತಂಕಕಾರಿ ಸುದ್ದಿ; ಇದು ದೇಶದಲ್ಲಿ ಒಮಿಕ್ರಾನ್ ಸಂಬಂಧಿತ ಮೊದಲ ಮರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts