

ಬೆಂಗಳೂರು: ಟೆನಿಸ್ ಎಂಬ ಪದ ಕೇಳಿದ ತಕ್ಷಣ ನಮಗೆಲ್ಲಾ ಮೊದಲು ನೆನಪಿಗೆ ಬರುವುದು ಹಸೆರಾಂತ ಆಟಗಾರರಾದ ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ಲಿಯೆಂಡರ್ ಪೇಸ್, ರಮೇಶ್ ಕೃಷ್ಣನ್, ರೋಹನ್ ಬೋಪಣ್ಣ ಮುಂತಾದವರು. ಈ ಒಂದು ಕ್ರೀಡೆ ಹಾಗೂ ಇದರ ನಿಯಮಾವಳಿಗಳ ಬಗ್ಗೆ ಹೆಚ್ಚಿನವರಿಗೆ ಅಷ್ಟಾಗಿ ತಿಳಿಯದೆ ಇದ್ದರೂ ಆಸಕ್ತಿಯಿಂದ ವೀಕ್ಷಿಸುತ್ತಾರೆ.
ಟೆನಿಸ್ ಎಂಬುದು ಒಂದು ರೋಮಾಂಚನಕಾರಿಯಾದ ಆಟ ಎಂದರೆ ತಪ್ಪಾಗಲಾರದು. ಎದುರಾಳಿಗಳನ್ನು ಮಣಿಸಿ, ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸುವ ಆಟಗಾರರ ಉತ್ಸಾಹವನ್ನು ನೋಡುವುದೇ ಈ ಕ್ರೀಡೆಯ ಗಮ್ಮತ್ತು! ಸ್ಪೋರ್ಟ್ಸ್ ಬಗ್ಗೆ ಮಾಹಿತಿ ಕಲೆಹಾಕುವವರು ಸಾಮಾನ್ಯವಾಗಿ ಯಾವ ಸ್ಪರ್ಧೆಯಲ್ಲಿ ಯಾರು ಗೆದ್ದರು? ಯಾರ ಹೆಸರು ಇಂದು ಮುಂಚೂಣಿಯಲ್ಲಿದೆ ಎಂಬದನ್ನು ತಿಳಿಯಲು ಭಾರೀ ಉತ್ಸುಕರಾಗಿರುತ್ತಾರೆ.
ಇತ್ತೀಚೆಗಷ್ಟೇ 'ವಲ್ಡ್ ಆಫ್ ಸ್ಟಾಟಸ್ಟಿಕ್ಸ್' ಜಗತ್ತಿನ ಟಾಪ್ 20 ಮಹಿಳಾ ಟೆನಿಸ್ ಆಟಗಾರರ ಹೆಸರನ್ನು ಪ್ರಕಟಿಸಿದ್ದು, ಆ ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದರ ವಿವರ ಹೀಗಿದೆ. ಇದು ಮಹಿಳಾ ಟೆನಿಸ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ.
1. ಇಗಾ ಸ್ವಿಟೆಕ್
2. ಅರೀನಾ ಸಬಲೆಂಕಾ
3. ಎಲೆನಾ ರೈಬಾಕಿನಾ
4. ಕೊಕೊ ಗೌಫ್
5. ಜೆಸ್ಸಿಕಾ ಪೆಗುಲಾ
6. ಆನ್ಸ್ ಜಬೇರ್
7. ಮಾರ್ಕೆಟಾ ವೊಂಡ್ರೊಸೊವಾ
8. ಮರಿಯಾ ಸಕ್ಕರಿ
9. ಕರೋಲಿನಾ ಮುಚೋವಾ
10. ಜೆಲೆನಾ ಒಸ್ಟಾಪೆಂಕೊ
11. ಬಾರ್ಬೊರಾ ಕ್ರೆಜ್ಸಿಕೋವಾ
12. ಬೀಟ್ರಿಜ್ ಹದ್ದದ್ ಮೈಯಾ
13. ಡೇರಿಯಾ ಕಸಟ್ಕಿನಾ
14. ಲಿಯುಡ್ಮಿಲಾ ಸ್ಯಾಮ್ಸೋನೋವಾ
15. ಕಿನ್ವೆನ್ ಝೆನ್
16. ಮ್ಯಾಡಿಸನ್ ಕೀಸ್
17. ವೆರೋನಿಕಾ ಕುಡೆರ್ಮೆಟೋವಾ
18. ಪೆಟ್ರಾ ಕ್ವಿಟೋವಾ
19. ಕ್ಯಾರೋಲಿನ್ ಗಾರ್ಸಿಯಾ
20. ಎಕಟೆರಿನಾ ಅಲೆಕ್ಸಾಂಡ್ರೊವಾ