

ವಿಜಯವಾಣಿ ಸುದ್ದಿಜಾಲ ಗದಗ
ಭಾವೈಕ್ಯತೆಗೆ ಹರಿಕಾರರಾಗಿದ್ದ ತೋಂಟದ ಸಿದ್ಧಲಿಂಗ ಶ್ರೀಗಳು ಕಂಚಿನ ಪುತ್ಥಳಿಯನ್ನು ಗದುಗಿನ ಪ್ರಮುಖ ಸ್ಥಳದಲ್ಲಿ ಸ್ಥಾಪಿಸಬೇಕೆಂಬುದು ತೀರ್ಮಾನಿಸಲಾಗಿದೆ ಎಂದು ತೋಂಟದಾರ್ಯ ನೌಕರರ ಪತ್ತಿನ ಸಹಕಾರಿ ಸಂದ ಅಧ್ಯಕ್ಷ ಎಸ್.ಎಸ್. ಪಟ್ಟನಶೆಟ್ಟಿ ಹೇಳಿದರು.
ಇತ್ತೀಚೆಗೆ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಜರುಗಿದ ಸಂದ ವಾಷಿರ್ಕ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರಿ ಸಂವು ಶ್ರೀಮಠದ ದಾಸೋಹಕ್ಕಾಗಿ 1 ಕೋಟಿ ರೂ.ಗಳ ಸ್ಥಿರನಿಧಿ ಇಡಲಾಗಿದೆ. ಅದರಂತೆ ಪೂಜ್ಯರು ಲಿಂಗೈಕ್ಯರಾದ ನಂತರ ಅವರ ಸ್ಮರಣಾರ್ಥ ಪ್ರಾರಂಭಗೊಂಡ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರಿಯ ಪ್ರಶಸ್ತಿ ಸಮಿತಿಯನ್ನು ಸ್ಥಾಪಿಸಲಾಗಿದೆ. ಸಮಿತಿಗೆ 1 ಕೋಟಿ ದೇಣಿಗೆ ಸಂಗ್ರಹವಾಗಿದೆ. ಈ ದೇಣಿಗೆಯನ್ನು ಠೇವಣಿ ಇಡುವ ಮೂಲಕ ಬಂದ ಆದಾಯದಲ್ಲಿ ಶ್ರೀಗಳ ಸ್ಮಾರಕ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಜಿ. ಎಂ. ಕೋಟ್ಯಾಳ, ಪಿ. ಎ. ಹೇಮಗಿರಿಮಠ, ವಿಜಯಕುಮಾರ ಮಾಲಗಿತ್ತಿ, ಕೊಟ್ರೇಶ ಮೆಣಸಿನಕಾಯಿ, ವಿಶ್ವಾಸ ಶಿಂಧೆ, ಐ. ಬಿ. ಬೆನಕೊಪ್ಪ, ದೊಡ್ಡಬಸಪ್ಪ ಚಿತ್ರಗಾರ ಇತರರು ಇದ್ದರು.