ಬೆಂಗಳೂರು: ಪರಿಸರ ದಿನಾಚರಣೆ ಅಂಗವಾಗಿ ಅಖಿಲ ಕರ್ನಾಟಕ ಮಕ್ಕಳ ಕೂಟ ಸಹಯೋಗ ಮತ್ತು ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಲ್ಲಿ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ ನ್ಯೂಸ್’ ಚಾನಲ್ ವತಿಯಿಂದ ಭಾನುವಾರ (ಜೂ. 4) ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಕಾಳಜಿ ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. 7ರಿಂದ 16 ವರ್ಷದ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.
ನೋಂದಣಿ ಉಚಿತ
ಸ್ಪರ್ಧೆಗೆ ನೋಂದಣಿ ಉಚಿತ ವಾಗಿರಲಿದೆ. ಆಸಕ್ತ ಮಕ್ಕಳು ದೂ: 88844 32666ಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು ಅಥವಾ ಜೂ. 4ರಂದು ಸ್ಥಳದಲ್ಲೇ ಹೆಸರು ನೋಂದಣಿ ಮಾಡಬಹುದು.
ಸೂಚನೆಗಳು
* ಡ್ರಾಯಿಂಗ್ ಶೀಟ್ಗಳನ್ನು ನಾವೇ ಕೊಡುತ್ತೇವೆ. ಪ್ಯಾಡು, ಪೆನ್ಸಿಲ್, ಸ್ಕೆಚ್ ಪೆನ್, ಸ್ಕೇಲು ಸೇರಿ ಇತರ ಬರವಣಿಗೆ ಸಾಮಗ್ರಿಗಳನ್ನು ಮಕ್ಕಳೇ ತರಬೇಕು.
* ಕೊಟ್ಟಿರುವ ಸ್ಪರ್ಧಾ ವಿಷಯ ಬಿಟ್ಟು ಬೇರೆ ಚಿತ್ರ ಬರೆಯಬಾರದು.
* ಚಿತ್ರವನ್ನು ಪೂರ್ಣಪ್ರಮಾಣದಲ್ಲಿ ಬಿಡಿಸಿರಬೇಕು.
* 2,3,4ನೇ ತರಗತಿ ಹಾಗೂ 5,6,7ನೇ ತರಗತಿ ವಿದ್ಯಾರ್ಥಿಗಳು ವಾಟರ್ ಕಲರ್, ಮಿಕ್ಸ್ ಮೀಡಿಯಾ, ಕಲರ್ ಪೆನ್, ಸ್ಕೆಚ್ ಪೆನ್, ಪೆನ್ಸಿಲ್ ಯಾವುದಾದರೂ ಬಳಸಬಹುದು.
* 8, 9ನೇ ತರಗತಿ ವಿದ್ಯಾರ್ಥಿಗಳು ವಾಟರ್ ಕಲರ್ ಮತ್ತು ಪೋಶೋ ಕಲರ್ ಮಾತ್ರ ಬಳಸಬೇಕು.
ಮೂರು ವಿಭಾಗದಲ್ಲಿ ಸ್ಪರ್ಧೆ
1. ವಿಭಾಗ-1: 2,3 ಮತ್ತು 4ನೇ ತರಗತಿ ವಿದ್ಯಾರ್ಥಿಗಳು (ಸಬ್ ಜೂನಿಯರ್)
2. ವಿಭಾಗ-2: 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳು (ಜೂನಿಯರ್)
3. ವಿಭಾಗ-3: 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು (ಸೀನಿಯರ್)
ಗುರುತಿನ ಚೀಟಿ, ಫೋಟೋ ಕಡ್ಡಾಯ
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಮಕ್ಕಳು ಓದುತ್ತಿರುವ ಶಾಲೆಯ ಐಡಿ ಕಾರ್ಡ್ ಅಥವಾ ಅಧಿಕೃತ ಗುರುತಿನ ಚೀಟಿ ಹಾಗೂ ಎರಡು ಪಾಸ್ಪೋರ್ಟ್ ಫೋಟೋ ಕಡ್ಡಾಯವಾಗಿ ತರಬೇಕು.
ಸ್ಪರ್ಧೆ ಎಲ್ಲಿ? ಯಾವಾಗ?
ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ರುವ ಮಕ್ಕಳ ಕೂಟ ಆವರಣ. ಭಾನುವಾರ (ಜೂ.4) ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ
ಬಹುಮಾನ ಏನು?
* ಪ್ರಥಮ- 3,000 ರೂಪಾಯಿ
* ದ್ವಿತೀಯ- 2,000 ರೂಪಾಯಿ
* ತೃತೀಯ- 1,000 ರೂಪಾಯಿ
* ತಲಾ ಒಬ್ಬರಿಗೆ ಸಮಾಧಾನಕರ ಬಹುಮಾನ
* ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರ ವಿತರಣೆ
ರಾಮನಗರ, ಬಂಡೀಪುರದಲ್ಲಿ ಆನೆ ದಾಳಿಯಿಂದ 2 ಸಾವು: ಅರಣ್ಯ ಸಚಿವ ಈಶ್ವರ ಖಂಡ್ರೆ ಸಂತಾಪ