ಗಗನಕ್ಕೇರಿದ ಟೊಮ್ಯಾಟೊ ಬೆಲೆ: ಭಾರತದಾದ್ಯಂತ ತರಕಾರಿ ಬೆಲೆ ಏಕೆ ಏರುತ್ತಿದೆ?

Tomato
Published on

ತಮಿಳುನಾಡು ಮತ್ತು ನೆರೆಯ ರಾಜ್ಯಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತರಕಾರಿ ಬೆಲೆಗಳು ಅದರಲ್ಲೂ ವಿಶೇಷವಾಗಿ ಟೊಮ್ಯಾಟೊ ಬೆಳೆಯಲ್ಲಿ ಹಾನಿಯುಂಟಾಗಿದ್ದು, ಪ್ರತಿ ಕಿಲೋಗ್ರಾಂಗೆ 100 ರೂ.ಗೆ ತಲುಪಿದೆ. ಚೆನ್ನೈನಲ್ಲಿ ಟೊಮ್ಯಾಟೊದ ಸಗಟು ಬೆಲೆ ಕಳೆದ ವಾರ ಕಿಲೋಗ್ರಾಂಗೆ 40 ರೂ. ಇದ್ದದ್ದು, ಎಲ್ಲಾ ಕಡೆ ಪ್ರತಿ ಕಿಲೋಗ್ರಾಂಗೆ 80 ರಿಂದ 90 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ.

ನವದೆಹಲಿ: ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ತಾಪಮಾನ ಏರಿಕೆಯಿಂದಾಗಿ ಟೊಮ್ಯಾಟೊ ಬೆಲೆ ಹಠಾತ್ ಏರಿಕೆಯಾಗಿದೆ ಎನ್ನಲಾಗಿದೆ. ಎಲ್ಲಾ ತರಕಾರಿಗಳಿಗಿಂತ ಟೊಮ್ಯಾಟೊ ಮಾತ್ರ ದುಬಾರಿಯಾಗಿದೆ. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಟೊಮ್ಯಾಟೊ ಬೆಲೆ ನೂರು ರೂಪಾಯಿ ಮುಟ್ಟಿದೆ.

ದಿಢೀರನೆ ತರಕಾರಿ ಬೆಲೆ ಹೆಚ್ಚಾಗಲು ಕಾರಣ: ತಮಿಳುನಾಡಿನಲ್ಲಿ, ತಿರುವಳ್ಳೂರು, ಕೃಷ್ಣಗಿರಿ ಮತ್ತು ಸೇಲಂನಂತಹ ಜಿಲ್ಲೆಗಳು ಹೇರಳವಾಗಿ ಟೊಮ್ಯಾಟೊ ಉತ್ಪಾದನೆಗೆ ಹೆಸರುವಾಸಿಯಾಗಿದೆ.  ತಮಿಳುನಾಡು ಮತ್ತು ನೆರೆಯ ರಾಜ್ಯಗಳಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತರಕಾರಿ ಬೆಲೆಗಳು ಅದರಲ್ಲೂ ವಿಶೇಷವಾಗಿ ಟೊಮ್ಯಾಟೊ ಬೆಳೆಯಲ್ಲಿ ಹಾನಿಯುಂಟಾಗಿದೆ. ಮುಂಗಾರು ವಿಳಂಬ, ತಾಪಮಾನ ಏರಿಕೆ ಮತ್ತು ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ತರಕಾರಿಗಳ ಬೆಲೆ ಏರುತ್ತಿದೆ.

ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಹೆಚ್ಚುತ್ತಿರುವ ತಾಪಮಾನ, ನಂತರ ತಮಿಳುನಾಡಿನಲ್ಲಿ ಭಾರೀ ಮಳೆಯಿಂದಾಗಿ ಟೊಮ್ಯಾಟೊ ಬೆಲೆ ಕೆಜಿಗೆ 100 ರೂ. ಕ್ಕಿಂತ ಹೆಚ್ಚಿದೆ. ಇದಲ್ಲದೆ, ಚಂಡಮಾರುತ ಮತ್ತು ಪ್ರವಾಹದಿಂದಾಗಿ ಭಾರತದ ಕೆಲವು ಭಾಗಗಳಲ್ಲಿ ತರಕಾರಿಗಳ ಪೂರೈಕೆಯು ಸ್ಥಗಿತಗೊಂಡಿದೆ. ಹೀಗಾಗಿ ಏಕಾಏಕಿ ಟೊಮ್ಯಾಟೊ ಬೆಲೆ ಏರಿಕೆಯಾಗುತ್ತಿದೆ.

ವ್ಯಾಪಾರಸ್ಥರು ಹೇಳುವುದೇನು?: ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ತಾಪಮಾನ ಏರಿಕೆಯಿಂದಾಗಿ ಟೊಮೆಟೊ ಬೆಲೆ ಹಠಾತ್ ಏರಿಕೆಯಾಗಿದೆ. ತಮಿಳುನಾಡಿನಾದ್ಯಂತ ಮಾರುಕಟ್ಟೆಗಳು ಪೂರೈಕೆಯನ್ನು ನಿರ್ವಹಿಸಿದವು ಮತ್ತು ಬೆಲೆಯನ್ನು ನಿಯಂತ್ರಣದಲ್ಲಿ ಇರಿಸಿದ್ದವು, ಆದರೆ ಕಳೆದ ಕೆಲವು ದಿನಗಳಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ಸುರಿದ ಭಾರೀ ಮಳೆಯು ಟೊಮೆಟೊ ಬೆಳೆಗಳನ್ನು ಹಾನಿಗೊಳಿಸಿತು, ಪೂರೈಕೆ ಕೊರತೆಯಿಂದ ಬೆಲೆ ಏರಿಕೆಗೆ ಕಾರಣವಾಯಿತು. ರೈತರು ಕೆಲವು ವಾರಗಳ ಹಿಂದೆ ಸಾವಿರಾರು ಟನ್ ಟೊಮ್ಯಾಟೊಗಳನ್ನು ಹೊಲಗಳಲ್ಲಿ ಮತ್ತು ರಸ್ತೆಗಳಲ್ಲಿ ಎಸೆಯುತ್ತಿದ್ದರು. ಆಗ ಟೊಮ್ಯಾಟೊ ಒಂದು ರೂಪಾಯಿಗೂ ಸಿಗುತ್ತಿರಲಿಲ್ಲ. ಆದರೆ ಈಗ ಪ್ರತಿ ಕಿಲೋಗ್ರಾಂಗೆ 100 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net