
ತನ್ನ ಮನಮೋಹಕ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ನಟಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಗ್ಲಾಮರಸ್ ಹಾಗೂ ಸ್ಟೈಲಿಶ್ ಫೋಟೋಗಳು ಈಗ ಸಿನಿರಂಗದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ದುಲ್ಕರ್ ಸಲ್ಮಾನ್ ಜೊತೆಗಿನ 'ಕಾಂತ' ಚಿತ್ರದ ಬಳಿಕ, ಶಿವಕಾರ್ತಿಕೇಯನ್ ನಾಯಕನಾಗಿ ನಟಿಸುತ್ತಿರುವ 'ಸೇಯಾನ್' (Seyon) ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಶಿವಕುಮಾರ್ ಮುರುಗೇಶನ್ ನಿರ್ದೇಶನದ, ಗ್ರಾಮೀಣ ಹಿನ್ನೆಲೆಯ ಆಕ್ಷನ್ ಡ್ರಾಮಾ ಚಿತ್ರವಾಗಿರುವ 'ಸೇಯಾನ್' ಅನ್ನು ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆಯು ನಿರ್ಮಿಸುತ್ತಿದೆ.
ನಟನೆಯ ಜೊತೆಗೆ ಮಾಡೆಲಿಂಗ್ ರಂಗದಲ್ಲೂ ಸಕ್ರಿಯರಾಗಿರುವ ಇವರು, ಪ್ರಮುಖ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಪ್ಪು ಬಣ್ಣದ ಹ್ಯಾಲ್ಟರ್ ನೆಕ್ ಉಡುಗೆ, ಸೂಕ್ಷ್ಮವಾದ ಚೋಕರ್ ಹಾಗೂ ನ್ಯಾಚುರಲ್ ಮೇಕಪ್‌ನಲ್ಲಿ ಇತ್ತೀಚೆಗೆ ಫೋಟೋಶೂಟ್ ನಡೆಸಿ ಗ್ಲಾಮರ್ ಲುಕ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ.
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಅಲ್ಪಾವಧಿಯಲ್ಲೇ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.
ಹೊರಾಂಗಣ ಹಾಗೂ ಹಸಿರು ಪರಿಸರದಲ್ಲಿ ಫೋಟೋಶೂಟ್ ನಡೆಸಿ ತಮ್ಮ ನೈಸರ್ಗಿಕ ಶೈಲಿಯ ಸೌಂದರ್ಯವನ್ನು ವ್ಯಕ್ತಪಡಿಸಲು ಹೆಚ್ಚು ಇಷ್ಟಪಡುತ್ತಾರೆ.