ಅವರು 6 ಅಡಿಯ ಬಂಗಾರ; ಟಾಲಿವುಡ್​ ಸೈಲಿಶ್​ ಸ್ಟಾರ್​ ಹೀಗೇಳಿದ್ದು ಯಾರಿಗೆ? | Allu Arjun

Untitled design - 2024-11-18T173639.327
Published on

ಹೈದರಾಬಾದ್​​​: ​​ತೆಲುಗು ನಟ ಬಾಲಕೃಷ್ಣ ಅವರು ನಿರೂಪಣೆಯಲ್ಲಿ ಖಾಸಗಿ ವಾಹಿನಿಯಲ್ಲಿ ಮೂಡಿಬರುವ ‘ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ’ ಟಾಕ್ ಶೋ ಮೂರು ಸೀಸನ್ ಮುಗಿದಿದ್ದು, ನಾಲ್ಕನೇ ಸೀಸನ್ ಕೂಡ ಯಶಸ್ವಿಯಾಗಿ ಸಾಗುತ್ತಿದೆ. ಈ ಸೀಸನ್​ಲ್ಲಿ ಟಾಲಿವುಡ್​ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್(Allu Arjun)​​​ ಅತಿಥಿಯಾಗಿ ಭಾಗವಹಿಸಿದ್ದಾರೆ. ಇಬ್ಬರ ನಡುವಿನ ಮಾತಕತೆಯ ಹಲವು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಶೋನಲ್ಲಿ ಅಲ್ಲು ಅರ್ಜುನ್​ ಅವರ ಬಳಿ ಟಾಲಿವುಡ್​ನ ಮತ್ತೊಬ್ಬ ನಟನ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಲಾಗಿದೆ. ಅದು ಬೇರೆ ಯಾರು ಅಲ್ಲ ನಟ ಪ್ರಭಾಸ್​ ಕುರಿತು ಅಲ್ಲು ಅರ್ಜು್ನ್ ಅವರನ್ನು ಕೇಳಲಾಗಿದೆ. ಈ ಪ್ರಶ್ನೆಗೆ ಕೊಟ್ಟಿರುವ ಉತ್ತರ ಮತ್ತು ಈ ಹಿಂದೆ ಪ್ರಭಾಸ್​ ಕುರಿತು ಅಲ್ಲು ಅರ್ಜುನ್​ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ.

ಪ್ರಭಾಸ್​ ಕುರಿತು ಕೇಳಿದಾಗಲೆಲ್ಲಾ ಅಲ್ಲು ಅರ್ಜುನ್​ ಅವರಿಂದ ಬರುವ ಉತ್ತರ ಒಂದೇ. ಆರಡುಗುಲ ಬಂಗಾರಂ (ಆರು ಅಡಿಯ ಬಂಗಾರ) ಎಂದು ಹೇಳಿದ್ದಾರೆ. ಈ ಹಿಂದೆಯೂ ಒಮ್ಮೆ ಅಲ್ಲು ಅರ್ಜುನ್​​ ಪ್ರಭಾಸ್​ ಬಗ್ಗೆ ಮಾತನಾಡುವಾಗ ಅವರು ತಮ್ಮ ನೆಚ್ಚಿನ ನಾಯಕ ಮಾತ್ರವಲ್ಲ, ಅವರ ನೆಚ್ಚಿನ ವ್ಯಕ್ತಿಯೂ ಹೌದು ಎಂದು ಹೇಳಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಅವರು ಆರು ಅಡಿಯ ಬಂಗಾರ ಎಂದು ಹೇಳಿದ್ದರು. ಮತ್ತೊಮ್ಮೆ ಅದೇ ಮಾತು ಪುನರಾವರ್ತನೆಯಾಗಿದೆ.

ಅಲ್ಲು ಅರ್ಜುನ್ ಪುಷ್ಪ 2: ದಿ ರೂಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಈ ಸಿನಿಮಾ ಡಿಸೆಂಬರ್​​ 25ರಂದು ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್​​-ಪುಷ್ಪಾ ರಾಜ್, ರಶ್ಮಿಕಾ ಮಂದಣ್ಣ-ಶ್ರೀವಲ್ಲಿ ಮತ್ತು ಫಹದ್ ಫಾಸಿಲ್-ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ನಟಿಸಿದ್ದಾರೆ(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net