More

    VIDEO| ಪಿಟ್​ಬುಲ್​ ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾದ ಬಾಲಕ

    ನವದೆಹಲಿ: ಪಿಟ್​ಬುಲ್​ ತಳಿಯ ನಾಯಿಗಳು ನೋಡಲು ಎಷ್ಟು ಮುದ ನೀಡುತ್ತವೋ ಅದೇ ರೀತಿ ಕೆಲವೊಮ್ಮೆ ತಮ್ಮ ಸಿಟ್ಟಿನಿಂದಲೂ ಸಹ ಹೆಚ್ಚು ಸದ್ದು ಮಾಡುತ್ತವೆ. ಕಳೆದ ಕೆಲ ತಿಂಗಳ ಹಿಂದೆ ಲಕ್ನೋದಲ್ಲಿ ಇದೇ ಪಿಟ್​ಬುಲ್​ ಥಳಿಯ ನಾಯಿ ವೃದ್ಧರೊಬ್ಬರನ್ನು ಕೊಂದ ಸುದ್ದಿ ಮಾಸುವ ಮುನ್ನವೇ ಪುಟ್ಟ ಬಾಲಕನೋರ್ವ ಇದರ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ಬೆಳಕಿಗೆ ಬಂದಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬಾಲಕನೋರ್ವ ಪಿಟ್​ಬುಲ್​ಗೆ ನೀರಿನ ಬಾಟಲಿಯಿಂದ ಒಮ್ಮೆ ಹೊಡೆಯುತ್ತಾನೆ. ಈ ವೇಳೆ ಮಾಲೀಕ ಜೊತೆಯಲ್ಲಿದ್ದ ಕಾರಣ ಅದು ಸುಮ್ಮನಾಗುತ್ತದೆ. ಇದಾದ ಬಳಿಕ ಇದನ್ನೇ ರೂಡಿ ಮಾಡಿಕೊಂಡ ಬಾಲಕ ಅದಕ್ಕೆ ಪದೇ ಪದೇ ಹೊಡೆಯಲು ಶುರು ಮಾಡುತ್ತಾನೆ.

    ಇದನ್ನೂ ಓದಿ: VIDEO| ಟ್ರ್ಯಾಕ್ಟರ್​ ಚಲಾಯಿಸಿ ಕೃಷಿಕನ ಲುಕ್​ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ!

    ಈ ವೇಳೆ ನೆರದಿದ್ದ ಜನ ನಾಯಿಯಿಂದ ದೂರ ಇರುವಂತೆ ಬಾಲಕನಿಗೆ ಸೂಚಿಸುತ್ತಾರೆ. ಅದರಂತೆ ಮೊದಲಿಗೆ ಸುಮ್ಮನಾಗುವ ಬಾಲಕ ಬಳಿಕ ತನ್ನ ಹಳೇ ಚಾಳಿಯನ್ನ ಮುಂದುವರೆಸುತ್ತಾನೆ. ಇದರಿಂದ ಸಿಟ್ಟಿಗೆದ್ದ ನಾಯಿ ಏಕಾಏಕಿ ಅವನ ಮೇಲೆ ದಾಳಿ ಮಾಡುತ್ತದೆ. ಈ ವೇಳೆ ಅಲ್ಲೇ ಇದ್ದ ಶ್ವಾನದ ಮಾಲೀಕ ಅದನ್ನು ತಡೆದಿದ್ದಾನೆ.

    ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಬಾಲಕ ಹೆದರಿಕೆಯಿಂದ ಓಡಿ ಹೋಗುತ್ತಿರುವುದು ಕಂಡು ಬರುತ್ತದೆ. ಇನ್ನು ಈ ವಿಡಿಯೋ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದ್ದು, ಹೆಚ್ಚಿನ ಜನ ಪುಟ್ಟ ಬಾಲಕನ ನಡೆ ಹಾಗೂ ಆತನ ಪೋಷಕರ ವಿರುದ್ಧ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts