ಕುರುಗೋಡು: ಬೆಂಗಳೂರಿನ ಜಿ.ಟಿ.ವರ್ಲ್ಡ್ ಮಾಲ್‌ನಲ್ಲಿ ಪಂಚೆ ಧರಿಸಿದ ರೈತನನ್ನು ಒಳಗಡೆ ಬಿಡದೆ ಅವಮಾನಿಸಿದ ಹಿನ್ನೆಲೆಯಲ್ಲಿ ಎಐಕೆಕೆಎಂಎಸ್ ಪದಾಧಿಕಾರಿಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡಿ, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ವರ್ಲ್ಡ್ ಮಾಲ್‌ಗೆ ಹಾವೇರಿ ಜಿಲ್ಲೆಯ ನಾಗರಾಜ್ ಎಂಬ ವ್ಯಕ್ತಿ ತಂದೆಯನ್ನು ಕರೆದುಕೊಂಡು ಬಂದಿದ್ದಾರೆ. ಆತನ ರೈತನಾಗಿದ್ದು, ಪಂಚೆ, ತಲೆಗೆ ಟವೆಲ್‌ನಿಂದ ಪೇಟ ಸುತ್ತಿಕೊಂಡಿದ್ದರಿಂದ ಮಾಲ್‌ನ ಭದ್ರತಾ ಸಿಬ್ಬಂದಿ ಒಳಗಡೆ ಬಿಡದೆ ಅವಮಾನಿಸಿದ್ದಾರೆ.
ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು. ಇಂತಹ ಅವಮಾನಗಳ ವಿರುದ್ಧ ಸಾಮಾನ್ಯ ಜನತೆ, ಬಡವರು ರೈತರು ಒಗ್ಗಟ್ಟಾಗಿ ಹೋರಾಡಲು ಮುಂದಾಗಬೇಕು ಎಂದರು.
ಸಂಘದ ಮುಖಂಡರಾದ ಕಲ್ಲುಕಂಬ ಪಂಪಾಪತಿ , ಹೊನ್ನೂರಪ್ಪ, ವಿರೂಪಾಕ್ಷಪ್ಪ, ಪರಮೇಶ್ ಇತರರಿದ್ದರು.