More

    ‘ಬಿಜೆಪಿಗೂ…ನಿಮಗೂ ಏನೋ ಲಿಂಕ್​ ಇದೆ’: ಫೇಸ್​ಬುಕ್​ ಸಿಇಒಗೆ ಪತ್ರ

    ಕೋಲ್ಕತ್ತ: ಸಾಮಾಜಿಕ ಜಾಲತಾಣ ದೈತ್ ಫೇಸ್​ಬುಕ್​ ಮತ್ತು ಬಿಜೆಪಿ ನಡುವೆ ಲಿಂಕ್​ ಇದೆ ಎಂದು ತೃಣಮೂಲ ಕಾಂಗ್ರೆಸ್​ ಎಂಪಿ ಡೆರೆಕ್​ ಒ ಬ್ರಿಯನ್​ ಆರೋಪ ಮಾಡಿದ್ದಾರೆ. ಅಲ್ಲದೆ, ಫೇಸ್​ಬುಕ್​ ಸಿಇಒ ಝುಕರ್​ ಬರ್ಗ್​ ಅವರಿಗೂ ಪತ್ರ ಬರೆದಿದ್ದಾರೆ.

    ಪಶ್ಚಿಮ ಬಂಗಾಳ ಚುನಾವಣೆ ಹತ್ತಿರ ಬರುತ್ತಿದೆ. ಆದರೆ ಇತ್ತೀಚೆಗೆ ಇಲ್ಲಿನ ಅನೇಕ ಫೇಸ್​ಬುಕ್​ ಖಾತೆಗಳು, ಪೇಜ್​​ಗಳು ಬ್ಲಾಕ್​ ಆಗಿವೆ. ಇದರಲ್ಲೂ ಬಿಜೆಪಿ ಕೈವಾಡ ಇದೆ ಎನ್ನಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಚೀನಾಗೆ ಮತ್ತೊಂದು ಶಾಕ್​: ಪಬ್​ಜಿ ಸೇರಿ 118 ಆ್ಯಪ್​ ಬ್ಯಾನ್​…!

    ಕೆಲವು ವರ್ಷಗಳ ಹಿಂದೆಯೇ ನಾನು ಈ ಬಗ್ಗೆ ನಿಮ್ಮ ಗಮನಕ್ಕೆ ತಂದಿದ್ದೆ. ಭಾರತದಲ್ಲಿ ಫೇಸ್​ಬುಕ್​ ನಿರ್ವಹಣೆಯಲ್ಲಿ ಪಾರದರ್ಶಕತೆ ಸಾಕಾಗುತ್ತಿಲ್ಲ ಎಂದೂ ಹೇಳಿದ್ದೆ. ತೃಣಮೂಲ ಕಾಂಗ್ರೆಸ್​ ಎಂಬುದು ಭಾರತದ ಎರಡನೇ ಅತಿದೊಡ್ಡ ಪ್ರತಿಪಕ್ಷ. ಕಳೆದ 2014 ಮತ್ತು 2019ರ ಲೋಕಸಭಾ ಚುನಾವಣೆ ವೇಳೆ ಫೇಸ್​ಬುಕ್​ ಬಿಜೆಪಿ ಪರ ಪ್ರಮುಖ ಪಾತ್ರ ವಹಿಸಿದೆ ಎಂಬುದು ನಮ್ಮ ಬಲವಾದ ಅಭಿಪ್ರಾಯ. ನಾವು ಈ ವಿಚಾರವನ್ನೂ ಜೂನ್​ನಲ್ಲಿ ಸಂಸತ್ತಿನಲ್ಲಿಯೂ ಪ್ರಸ್ತಾಪ ಮಾಡಿದ್ದೆವು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್​)

    ಹಿಮಾಲಯದ ತಪ್ಪಲಿನಲ್ಲಿ ವಿಶ್ವದ ಅತಿದೊಡ್ಡ ವಿಷಪೂರಿತ ಕಾಳಿಂಗ ಸರ್ಪ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts