More

    ಸತೀಶ್​ ಹೊಸ ಚಿತ್ರದ ಹೆಸರು ಈ ಗೋಡೆಗಳ ಮೇಲೆ ಅಡಗಿದೆಯಂತೆ!

    ಸತೀಶ್​ ನೀನಾಸಂ, ವೈತರಣಿ ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತಲ್ಲಾ? ಈಗ ಆ ಚಿತ್ರದ ಹೆಸರು ಬದಲಾಗಿದೆ. ಹಾಗಂತ ಖುದ್ದು ಸತೀಶ್​ ಟ್ವೀಟ್​ ಮಾಡಿದ್ದಾರೆ. ಹಾಗಾದರೆ, ಆ ಚಿತ್ರದ ಹೆಸರೇನು? ಅದಕ್ಕೊಂದು ಸುಳಿವು ಕೊಟ್ಟಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ನವರೇ ಮತ್ತು ಕ್ರಿಕೆಟಿಗರೇ, ಚೀನಿ ಉತ್ಪನ್ನ ಪ್ರಚಾರ ಮಾಡಿದ್ದು ಸಾಕಿನ್ನು!

    ಸತೀಶ್​ ಟ್ವಿಟರ್​ ಮೂಲಕ ಒಂದು ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಟನಲ್​ವೊಂದರ ಫೋಟೋ ಅದು. ಆ ಟನಲ್​ನಲ್ಲಿ ಹಲವು ಚಿತ್ರಗಳನ್ನು ಬಿಡಿಸಲಾಗಿದೆ. ತಮ್ಮ ಹೊಸ ಚಿತ್ರದ ಹೆಸರು, ಅದೇ ಗೋಡೆಗಳಲ್ಲಿ ಅಡಗಿದೆಯಂತೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ನನ್ನ ಮುಂದಿನ ಸಿನಿಮಾದ ಶೀರ್ಷಿಕೆ ವೈತರಣಿ ಅಲ್ಲ. ನಮ್ಮ ಚಿತ್ರದ ಹೊಸ ಹೆಸರು ಲಂಡನ್​ ನಗರದ ಲೀಕ್​ ಸ್ಟ್ರೀಟ್​ನ ಗೋಡೆಗಳಲ್ಲಿ ಅಡಗಿದೆ. ಹುಡುಕಿ, ನೋಡೋಣ … ಎಂದು ಟ್ವೀಟಿಗರಿಗೆ ಅವರು ಸವಾಲು ಎಸೆದಿದ್ದಾರೆ.

    ಇಷ್ಟಕ್ಕೂ ಟೈಟಲ್​ ಬದಲಾಗುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಬರುವುದು ಸಹಜವೇ. ವೈತರಣಿ ಎನ್ನುವ ಹೆಸರು ಬಹಳಷ್ಟು ಜನರಿಗೆ ಕನೆಕ್ಟ್​ ಆಗುವುದಿಲ್ಲ ಎಂಬ ಕಾರಣಕ್ಕೆ ಹೊಸ ಹೆಸರು ಇಡಲಾಗುತ್ತಿದೆಯಂತೆ. ನಾಳೆ ಸತೀಶ್​ ಹುಟ್ಟುಹಬ್ಬವಿದ್ದು, ಅಂದು ಅಧಿಕೃತವಾಗಿ ಚಿತ್ರದ ಘೋಷಣೆಯಾಗಲಿದೆ. ಅದಕ್ಕೂ ಮುನ್ನ, ಟ್ವೀಟ್​ ಮೂಲಕ ಎಲ್ಲರ ತಲೆಗೂ ಹುಳ ಬಿಟ್ಟಿದ್ದಾರೆ ಸತೀಶ್​.

    ಇನ್ನು ವೈತರಣಿ ಚಿತ್ರದ ಶೂಟಿಂಗ್​ ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿತ್ತು. ನಟಿ ಶರ್ಮಿಳಾ ಮಾಂಡ್ರೆ ನಿರ್ಮಿಸುತ್ತಿರುವ ಈ ಚಿತ್ರವನ್ನು, ಕಹಿ ಮತ್ತು ಅಳಿದುಳಿದವರು ಖ್ಯಾತಿಯ ಅರವಿಂದ್​ ಶಾಸ್ತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆಯನ್ನು ಸಹ ಬರೆದಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ಆಲಿಯಾಗೆ ಗುಡ್​​ಬೈ ಹೇಳಿದ ಕರಣ್​…

    ಈಗಾಗಲೇ ಲಂಡನ್​ನಲ್ಲಿ ಚಿತ್ರದ ಶೇ.30ರಷ್ಟು ಚಿತ್ರೀಕರಣವಾಗಿದೆ. ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, ಬಾಕಿ ಚಿತ್ರೀಕರಣ ಮುಂದುವರೆಯಲಿದೆ. ಅದರ ನಂತರ, ಶ್ರೀ ಸಾಯಿ ಪ್ರೊಡಕ್ಷನ್ಸ್​ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ಸತೀಶ್​ ಅಭಿನಯಿಸುತ್ತಿದ್ದಾರಂತೆ. ಅದಲ್ಲದೆ, ರವಿಶಂಕರ್​ ಎನ್ನುವವರು ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲೂ ಸತೀಶ್​ ನಟಿಸುತ್ತಿದ್ದಾರೆ.

    ಅಭಿನವ್​ ಮೇಲೆ ಮಾನನಷ್ಟ ಕೇಸ್​ ಹಾಕಿದ ಸಲ್ಮಾನ್​ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts