More

    ಬಾಲಿವುಡ್​ನವರೇ ಮತ್ತು ಕ್ರಿಕೆಟಿಗರೇ, ಚೀನಿ ಉತ್ಪನ್ನ ಪ್ರಚಾರ ಮಾಡಿದ್ದು ಸಾಕಿನ್ನು!

    ಚೀನಾ ಜತೆಗಿನ ಸಂಬಂಧ ಹಳಸುತ್ತಿದ್ದಂತೆ ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡುವಂತೆ ಎಲ್ಲೆಡೆ ಅಭಿಯಾನಗಳು ಶುರುವಾಗಿವೆ. ಈ ನಡುವೆ ಚೀನಿ ಉತ್ಪನ್ನಗಳಿಗೆ ಪ್ರಚಾರ ನೀಡುತ್ತಿದ್ದ ಬಾಲಿವುಡ್​ನ ಘಟಾನುಘಟಿ ಸ್ಟಾರ್​ಗಳಿಗೆ ಮತ್ತು ಕ್ರಿಕೆಟರ್​ಗಳಿಗೂ ಇದೀಗ ರಾಯಭಾರಿ ಒಪ್ಪಂದವನ್ನು ಕೈ ಬಿಡುವ ಬಗ್ಗೆ ಒತ್ತಡದ ಮಾತುಗಳು ಕೇಳಿಬರುತ್ತಿವೆ. ಆ ಪೈಕಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಸಿನಿಮಾ ಮತ್ತು ಕ್ರಿಕೆಟ್​ ಸೆಲೆಬ್ರಿಟಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದು, ಚೀನಿ ವಸ್ತುಗಳನ್ನು ನಿಷೇಧಿಸೋಣ, ಸಹಕಾರ ನೀಡಿ ಎಂದಿದೆ.

    ಇದನ್ನೂ ಓದಿ: ತೆಲುಗು-ತಮಿಳಿನಲ್ಲಿ ಸುದೀಪ್​ಗೆ ಡಿಮ್ಯಾಂಡ್

    ಈಗಾಗಲೇ ಚೀನಾದ ಹಲವು ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು, ಕೆಲ ಉತ್ಪನ್ನಗಳಿಗೆ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಸ್ಟಾರ್​ಗಳಿಗೆ ಮನವಿ ಮಾಡಿದೆ. ವಿವೋ ಮೊಬೈಲ್​ ರಾಯಭಾರಿಗಳಾದ ಆಮೀರ್ ಖಾನ್​, ಸಾರಾ ಅಲಿಖಾನ್​, ಈಕ್ಯೂಓಓದ ವಿರಾಟ್​ ಕೋಹ್ಲಿ, ಓಪ್ಪೊ ರಾಯಭಾರಿಗಳಾದ ದೀಪಿಕಾ ಪಡುಕೋಣೆ, ಸಿದ್ಧಾರ್ಥ್​ ಮಲ್ಹೋತ್ರಾ, ರಣಬೀರ್​ ಕಪೂರ್​, ರಿಯಲ್​ ಮೀಯ ಆಯುಷ್ಮಾನ್​ ಖುರಾನಾಗೆ ಈಗಾಗಲೇ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಮನವಿ ಮಾಡಿದೆ. ಅಷ್ಟೇ ಅಲ್ಲ ಚೀನಿ ವಸ್ತು ನಿಷೇಧಕ್ಕೆ ಸಹಕಾರ ನೀಡಿ ಅಂತಲೂ ಹೇಳಿದೆ.

    ಇದನ್ನೂ ಓದಿ: ಇನ್ನು ಸಂಬಳ ಕೊಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರಂತೆ ಸುಶಾಂತ್​!

    ಅದೇ ರೀತಿ ಅಮಿತಾಬ್​ ಬಚ್ಚನ್, ಅಕ್ಷಯ್​ ಕುಮಾರ್​, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್​, ಮಹೇಂದ್ರ ಸಿಂಗ್​ ಧೋನಿ, ಸಚಿನ್​ ತೆಂಡೂಲ್ಕರ್​, ಸೋನು ಸೂದ್​ಗೆ ನಿಷೇಧದ ಬಗ್ಗೆ ಮನವಿ ಮಾಡಿದೆ. ಅಂದಹಾಗೆ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಒಟ್ಟಾರೆಯಾಗಿ ಇಡೀ ದೇಶದಲ್ಲಿ 40 ಸಾವಿರಕ್ಕೂ ಅಧಿಕ ಟ್ರೇಡ್​ ಬಾಡಿಗಳನ್ನು ಹೊಂದಿದೆ. ಆ ಪೈಕಿ 7 ಕೋಟಿ ರಿಟೇಲ್​ ಮತ್ತು ಹೋಲ್​ಸೇಲರ್​ಗಳು ಚೀನಾ ಉತ್ಪನ್ನಗಳ ನಿಷೇಧ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. (ಏಜೆನ್ಸೀಸ್​)

    ಸುಶಾಂತ್​ ಆತ್ಮಹತ್ಯೆ: ಆಲಿಯಾಗೆ ಗುಡ್​​ಬೈ ಹೇಳಿದ ಕರಣ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts