More

    ಇನ್ನು ಸಂಬಳ ಕೊಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರಂತೆ ಸುಶಾಂತ್​!

    ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಅವರು ಭಾನುವಾರ ಮುಂಬೈನಲ್ಲಿ ಆತಮ್ಹತ್ಯೆಗೆ ಶರಣಾಗಿದ್ದಾರೆ. ಸಾಯುವುದಕ್ಕೂ ಮೊದಲು, ಅವರು ತಮ್ಮ ಬಳಿ ಕೆಲಸ ಮಾಡುತ್ತಿದ್ದವರಿಗೆ ಸಂಬಳ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಇನ್ನು ಮುಂದೆ ಸಂಬಳ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

    ಇದನ್ನೂ ಓದಿ: ಇಲ್ಲಿ ಯಾರನ್ನೂ ಉದ್ಧಾರ ಆಗೋಕೆ ಬಿಡಲ್ಲ …

    ಹೌದು, ಈ ಕುರಿತು ಅವರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಸುಶಾಂತ್​ ಸಾವಿನ ಕುರಿತಾಗಿ ಮುಂಬೈ ಪೊಲೀಸ್​ ತನಿಖೆ ನಡೆಸುತ್ತಿದ್ದು, ವಿಚಾರಣೆ ವೇಳೆ ಸುಶಾಂತ್​ ಮನೆಯಲ್ಲಿ ಕೆಲಸ ಮಾಡುತ್ತಿದ್ದವರು ಬಾಯಿ ಬಿಟ್ಟಿದ್ದಾರೆ.

    ಸಾಯುವುದಕ್ಕಿಂತ ಮೂರು ದಿನ ಮುಂಚೆಯೇ, ಸುಶಾಂತ್​ ತಮ್ಮೆಲ್ಲಾ ಸಿಬ್ಬಂದಿಯನ್ನು ಕರೆದಿದ್ದರಂತೆ. ಎಲ್ಲರಿಗೂ ಸಂಬಳ ಚುಕ್ತಾ ಮಾಡಿ, ಇನ್ನು ಮುಂದೆ ಸಂಬಳ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಇಷ್ಟು ದಿನ ಸಂಬಳ ಕೊಟ್ಟಿದ್ದಿಕ್ಕೆ ಧನ್ಯವಾದ ಹೇಳಿರುವ ಸಿಬ್ಬಂದಿ, ಇನ್ನು ಮುಂದೆ ತಮ್ಮ ದಾರಿ ಹೇಗೋ ನೋಡಿಕೊಳ್ಳುವುದಾಗಿ ಹೇಳಿ ಬಂದಿದ್ದಾರೆ. ಇದಾಗಿ ಮೂರೇ ದಿನಕ್ಕೆ ಸುಶಾಂತ್​ ಸಾವಿನ ಸುದ್ದಿ ಕಿವಿಗೆ ಬಿದ್ದಿದೆ.

    ಇದನ್ನೂ ಓದಿ: ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್​ ಸಿಂಗ್​; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ

    ಸಿಬ್ಬಂದಿಗೆ ಸಂಬಳ ಕೊಡುವುದರ ಜತೆಗೆ, ಇನ್ನು ಮುಂದೆ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಸುಶಾಂತ್​ ಹೇಳಿದ್ದಾರೆಂದರೆ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಅವರು ತೀರ್ಮಾನಿಸಿ ಬಿಟ್ಟಿದ್ದರಾ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಗುತ್ತಿಲ್ಲ.

    ಸುಶಾಂತ್​ ಆತ್ಮಹತ್ಯೆ: ಗರ್ಲ್​ಫ್ರೆಂಡ್​ ರಿಯಾ ಚಕ್ರವರ್ತಿ ವಿಚಾರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts