Tirupati Laddu Row| ಪವನ್​ ಕಲ್ಯಾಣ್​​ ಹೇಳಿಕೆಗೆ ನಟ ಕಾರ್ತಿ ರಿಯಾಕ್ಷನ್​​ ಹೀಗಿದೆ..

Untitled-design-2024-09-24T153010.619-1
Published on

ಚೆನ್ನೈ: ಭಾರತದಲ್ಲಿನ ಹೆಸರಾಂತ ದೇವಸ್ಥಾನದಲ್ಲಿ ಮೊದಲಿರುವ ತಿರುಪತಿ(Tirupati) ದೇವಾಲಯದ ಲಡ್ಡುಗಳಲ್ಲಿ(Laddu) ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದ(Row) ದೇಶದಲ್ಲಿ ಸಂಚಲನ ಮೂಡಿಸುತ್ತಿದೆ. ಸುಪ್ರೀಂಕೋರ್ಟ್​ ಮೆಟ್ಟಿಲೇರಿರುವ ವಿವಾದವನ್ನು ಉನ್ನತ ಮಟ್ಟದ ಮತ್ತು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸುವತೆ ಆಗ್ರಹಗಳು ಕೇಳಿಬರುತ್ತಿವೆ.

ಈ ನಡುವೆ ಸೆಲಿಬ್ರಿಟಿಗಳು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಇತ್ತೀಚೆಗೆ ತಮಿಳು ನಟ ಕಾರ್ತಿ ತಮ್ಮ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಲಡ್ಡು ಬಗ್ಗೆ ಹೇಳಿರುವ ಮಾತು ಎಲ್ಲೆಡೆ ವೈರಲ್​ ಆಗಿ ತೀವ್ರ ಆಕ್ಷೇಪ ಉಂಟಾಗಿತ್ತು. ಸಮಾರಂಭದಲ್ಲಿ ಕಾರ್ತಿ ಅವರ ಮೇಲೆ ಮಾಡಿದ ಮೀಮ್​ಗಳನ್ನು ತೋರಿಸಿ ಅವರ ಪ್ರತಿಕ್ರಿಯೆಯನ್ನು ಕೇಳಲಾಗುತಿತ್ತು. ಲಡ್ಡು ಬಗ್ಗೆ ಪರದೆಯ ಮೇಲೆ ಮೂಡಿಬಂದ ವ್ಯಂಗ್ಯ ಚಿತ್ರ ನೋಡಿ ಹಾಸ್ಯಸ್ಪದವಾಗಿ ಉತ್ತರಿಸಿದ್ದರು. ಲಡ್ಡು ಕಾವಲಾ ನಾಯಿನಾ? (ನಿಮಗೆ ಲಡ್ಡು ಬೇಕಾ?) ಎಂದು ಕೇಳಿದ್ದಕ್ಕೆ, ನಗುತ್ತಲೇ ಈಗ ಲಡ್ಡು ಬಗ್ಗೆ ಮಾತನಾಡುವುದು ಬೇಡ. ಇದು ಸೂಕ್ಷ್ಮ ವಿಷಯ. ನಮಗೆ ಇದು ಅಗತ್ಯವಿಲ್ಲ ಎಂದಿದ್ದರು. ಈ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಆಂಧ್ರಪ್ರದೇಶ ಡಿಸಿಎಂ ಪವನ್​ ಕಲ್ಯಾಣ್​​ ಎಚ್ಚರಿಸಿದ್ದರು.

ಸಿನಿಮಾ ಪ್ರೀ-ರಿಲೀಸ್ ಈವೆಂಟ್​ ಕಾರ್ಯಕ್ರಮದಲ್ಲಿ ನಟ ಕಾರ್ತಿ ತಿರುಪತಿ ತಿರುಮಲ ದೇವಾಲಯದ ಲಡ್ಡುವನ್ನು ಗೇಲಿ ಮಾಡಿ ಮಾತನಾಡಿದ್ದಾರೆ. ತಿರುಮಲ ಲಡ್ಡು ಬಗ್ಗೆ ಮಾತನಾಡುವ ಮುನ್ನ ನೂರು ಬಾರಿ ಯೋಚಿಸಬೇಕು. ಇದು ತಮಾಷೆಯ ವಿಷಯವೇ ಅಲ್ಲ. ನಾನು ನಿಮ್ಮನ್ನು ನಟರಾಗಿ ಗೌರವಿಸುತ್ತೇನೆ ಆದರೆ ನೀವು ಸನಾತನ ಧರ್ಮದ ವಿರುದ್ಧ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇದನ್ನು ಮೊದಲು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಪವನ್​ ಕಲ್ಯಾಣ್​ ಅವರು ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ನಟ ಕಾರ್ತಿ ಕೂಡ ಪ್ರತಿಕ್ರಿಯಿಸಿದ್ದಾರೆ. ಪವನ್​ ಕಲ್ಯಾಣ್​ ಸರ್​ ಯಾರನ್ನೂ ನೋಯಿಸುವುದು ನನ್ನ ಉದ್ದೇಶವಲ್ಲ. ಉದ್ದೇಶಪೂರ್ವಕವಲ್ಲದ ತಪ್ಪುಗ್ರಹಿಕೆಗೆ ಕ್ಷಮಿಯಾಚಿಸುತ್ತೇನೆ. ವೆಂಕಟೇಶ್ವರ ಭಕ್ತನಾಗಿ ನಾನು ಯಾವಾಗಲೂ ನಮ್ಮ ಸಂಪ್ರದಾಯವನ್ನು ಅನುಸರಿಸುತ್ತೇನೆ ಎಂದಿದ್ದಾರೆ.

ಕಾರ್ತಿ ಶೀಘ್ರದಲ್ಲೇ ಮೇಯಳಗನ್ ಮತ್ತು ಸರ್ದಾರ್-2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವನ್ ಕಲ್ಯಾಣ್​​ ಇತ್ತೀಚೆಗೆ ಹರಿ ಹರ ವೀರ ಮಲ್ಲು ಚಿತ್ರೀಕರಣವನ್ನು ಪುನರಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net